Jofra Archer: ಟೀಮ್ ಇಂಡಿಯಾ ಕಾಡಲು ಮತ್ತೊಬ್ಬ ಇಂಗ್ಲೆಂಡ್ ಬೌಲರ್ ಸಿದ್ಧ
ಭಾರತ ಸದ್ಯ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಿದೆ. ಈ ವೇಳೆ ಟೀಮ್ ಇಂಡಿಯಾ, ಇಂಗ್ಲೆಂಡ ವಿರುದ್ಧ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಈ ಗೆಲುವಿನ ಜೋಶ್ ಹೆಚ್ಚಿಸುವಂತಹ ಸುದ್ದಿಯೊಂದು ಕೌಂಟಿ ಕ್ರಿಕೆಟ್‌ನಿಂದ ಬಂದಿದೆ. ಇಂಗ್ಲೆಂಡ್ ತಂಡದ ಸ್ಟಾರ ಬೌಲರ್ 1501 ದಿನಗಳ ಬಳಿಕ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ ಪಡೆ ಸಾಧನೆಯನ್ನು ಮಾಡಿದ್ದಾರೆ.
ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಕೊಂಚ ವೀಕ್ ಇದ್ದಂತೆ ಕಂಡ ಬಂದಿತು. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸುದ್ದಿಯೊಂದು ಕೌಂಟಿ ಕ್ರಿಕೆಟ್‌ನಿಂದ ಬಂದಿದೆ. ಇಂಗ್ಲೆಂಡ್ ತಂಡದ ಘಾತಕ ವೇಗದ ಬೌಲರ್ ಜೋಫ್ರಾ ಪ್ರಥಮ ದರ್ಜೆ ಕ್ರಿಕೆಟ್‌ಗೆ ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ಪರ ಮೈದಾನಕ್ಕೆ ಇಳಿದ ಜೋಫ್ರಾ ಆರ್ಭಟಿಸಿದರು. ಈ ಮೂಲಕ ಜೋಫ್ರಾ ಆರ್ಚರ್ ಭಾರತದ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಮೋಘ ಪ್ರದರ್ಶನ ನೀಡಿದ್ದರು. ಆದರೆ ಇವರು ಬಹು ದಿನಗಳಿಂದ ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. ಇವರು 2021ರಲ್ಲಿ ಭಾರತ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡಿದ್ದರು. ಜೋಫ್ರಾ ಆರ್ಚರ್, ಬಹುದಿನಗಳಿಂದ ಇವರು ಗಾಯಕ್ಕೆ ತುತ್ತಾಗಿದ್ದರು. ಇವರು 2 ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2022ರಲ್ಲಿ ಬೆನ್ನು ನೋವಿನ ಸಮಸ್ಯೆ ಎದುರಿಸಿದರು. ಹೀಗಾಗಿ ಇವರ ವೃತ್ತಿ ಜೀವನದ ಮೇಲೆ ಹಲವು ಪ್ರಶ್ನೆಗಳು ಇದ್ದವು.
ಕಂ ಬ್ಯಾಕ್ ಕನಸು
ಸಸೆಕ್ಸ್ ತಂಡದ ಪರ ಆಡಿದ ಆರ್ಚರ್ ತಮ್ಮ ಮೊನಚಾದ ದಾಳಿಯಿಂದ ಗಮನ ಸೆಳೆದರು. ಮೊದಲ ಡರ್ಹ್ಯಾಮ್‌ನ ಎಮಿಲಿಯೊ ಗೇ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು. ಈ ಮೂಲಕ ಸುಮಾರು 1501ದಿನಗಳ ಬಳಿಕ ಚೊಚ್ಚಲ ಪ್ರಥಮ ದರ್ಜೆ ವಿಕೆಟ್ ಪಡೆದರು. ಈ ಮೂಲಕ ತಮ್ಮಲ್ಲಿ ಇನ್ನು ಕ್ಷಮತೆ ಇರುವುದಾಗಿ ತಿಳಿಸಿದ್ದಾರೆ. ಇನ್ನು ಇತ್ತಿಚಿಗೆ ಬೆನ್ ಸ್ಟೋಕ್ಸ್ ಇವರ ಬಗ್ಗೆ ಮಾತನಾಡಿದ್ದು, ಆರ್ಚರ್ ರಾಷ್ಟ್ರೀಯ ತಂಡದ ಜೊತೆ ಸಂಪರ್ಕ ಹೊಂದಿರುವುದಾಗ ತಿಳಿಸಿದ್ದರು. ಈ ಎಲ್ಲ ಸನ್ನಿವೇಶಗಳನ್ನು ಒಮ್ಮೆ ಮೆಲಕು ಹಾಕಿದಾಗ, ಆರ್ಚರ್ ಟೆಸ್ಟ್ ತಂಡದಲ್ಲಿ ಆಡಬಹುದು ಎಂದು ಅನಿಸುತ್ತಿದೆ. ಇವರು ಮುಂದಿನ ವಾರ ತಮ್ಮ ಫಿಟ್ನೆಸ್ ಸಾಬೀತು ಪಡಿಸುವಲ್ಲಿ ಸಫಲರಾದರೆ ಮತ್ತೆ ತಂಡಕ್ಕೆ ಮರಳಬಹುದು.

ಜೋಫ್ರಾ ಆರ್ಚರ್ ಈ ವರೆಗೆ ಕೇವಲ 13 ಟೆಸ್ಟ್ ಆಡಿದ್ದು, ಇದರಲ್ಲಿ42 ವಿಕೆಟ್ ಕಬಳಿಸಿದ್ದಾರೆ. ಇವರು ಭಾರತ ವಿರುದ್ಧ 2 ಟೆಸ್ಟ್ ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications