ಬೌಲಿಂಗ್ ವೇಳೆ ರಕ್ತವಾಂತಿ: ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್ ಹೇಸ್ಟಿಂಗ್ಸ್

ಮೆಲ್ಬೋರ್ನ್, ನವೆಂಬರ್ 14: ಬೌಲಿಂಗ್ ಮಾಡುವ ವೇಳೆ ಶ್ವಾಶಕೋಸದಿಂದ ರಕ್ತಸ್ರಾವವಾಗುವ ಸಮಸ್ಯೆಯಿಂದ ಬಳಲುತ್ತಿದ್ದ ಆಸ್ಟ್ರೇಲಿಯಾ ವೇಗಿ ಜಾನ್ ಹೇಸ್ಟಿಂಗ್ಸ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅನಾರೋಗ್ಯದ ಸಮಸ್ಯೆ ಹೇಸ್ಟಿಂಗ್ಸ್ ಅವರನ್ನು ಕ್ರಿಕೆಟ್ ಬದುಕಿನಿಂದ ಅನಿವಾರ್ಯವಾಗಿ ದೂರ ನಿಲ್ಲುವಂತೆ ಮಾಡಿದೆ.
ತನಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತ ಹೇಸ್ಟಿಂಗ್ಸ್, 'ಅದನ್ನು ವಿವರಿಸೋದೆ ಕಷ್ಟ. ನನ್ನ ಖುಷಿ ನಾಶವಾಗಲು ಇದೇ ಪ್ರಮುಖ ಕಾರಣವಾಗಿತ್ತು. ಯಾವಾಗ, ಎಲ್ಲಿ ಈ ಪೀಡೆ ಒಕ್ಕರಿಸುತ್ತೆ ಅನ್ನೋದನ್ನೇ ಊಹಿಸುವಂತಿರಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗಿನ್ನೂ 33ರ ಹರೆಯದ ಹೇಸ್ಟಿಂಗ್ಸ್ ಅಕ್ಟೋಬರ್ 2017ರಲ್ಲೇ ಪ್ರಥಮದರ್ಜೆ ಮತ್ತು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅನಾರೋಗ್ಯ ಸಮಸ್ಯೆ ತೀವ್ರಗೊಂಡ ಕಾರಣ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಹೇಸ್ಟಿಂಗ್ಸ್ ದೂರ ಉಳಿಯುವಂತಾಗಿದೆ. 29 ಏಕದಿನ ಪಂದ್ಯಗಳನ್ನಾಡಿದ್ದ ಜಾನ್, 1256 ರನ್ ಮತ್ತು 42 ವಿಕೆಟ್ ಪಡೆದಿದ್ದಾರೆ. 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 7 ವಿಕೆಟ್ ಸಾಧನೆ ಹೊಂದಿದ್ದಾರೆ.
ಬೌಲಿಂಗ್ ಮಾಡುವಾಗೆಲ್ಲ ಹೇಸ್ಟಿಂಗ್ಸ್ ಶ್ವಾಸಕೋಶದಿಂದ ರಕ್ತಸ್ರಾವವಾಗುತ್ತಿತ್ತು. ಈ ವೇಳೆ ಕೆಮ್ಮೂ ಶುರುವಾಗುತ್ತಿತ್ತು. ಕೆಮ್ಮಿದಾಗ ಬಾಯಲ್ಲಿ ರಕ್ತ ಒಸರುತ್ತಿತ್ತು. ಹೀಗಾಗಿ ಜಾನ್ ಕ್ರಿಕೆಟ್‌ನಿಂದ ದೂರ ಉಳಿಯಲೇಬೇಕಾಗಿದೆ. ಇಲ್ಲದಿದ್ದರೆ ಈ ಸಮಸ್ಯೆ ಜೀವಕ್ಕೇ ಎರವಾಗುವ ಸಾಧ್ಯತೆಯಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications