Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೆಹ್ವಾಗ್ ಜಿಮ್‌ಗೆ ಹೋಗದಿರಲು ನೀಡುತ್ತಿದ್ದ ತಮಾಷೆಯ ಕಾರಣ ಹೇಳಿದ ಜಾನ್‌ರೈಟ್

John Wright Reveals The Funny Reason Why Virender Sehwag Never Wanted To Visit The Gym

ನ್ಯೂಜಿಲೆಂಡ್‌ನ ಮಾಜಿ ನಾಯಕ ಜಾನ್‌ರೈಟ್ ಟೀಮ್ ಇಂಡಿಯಾಗೆ 2000ನೇ ಇಸವಿಯಿಂದ 2005ರವರೆಗೆ ಕೋಚ್ ಆಗಿದ್ದವರು. ಟೀಮ್ ಇಂಡಿಯಾ ಆಟಗಾರರು ಮತ್ತು ಮತ್ತು ಅಂದಿನ ನಾಯಕ ಸೌರವ್‌ ಗಂಗೂಲಿ ಜೊತೆಗೆ ಅತ್ಯುತ್ತಮ ಬಾಂದವ್ಯ ಹೊಂದಿದ್ದ ಜಾನ್‌ರೈಟ್ ವಿದೇಶಿ ನೆಲದಲ್ಲಿ ಭಾರತ ತಂಡದ ಯಶಸ್ಸಿಗೆ ಕಾರಣರಾಗಿದ್ದರು.

ಖಾಸಗೀ ಕ್ರೀಡಾ ವಾಹಿನಿಯ ಕಾರ್ಯಕ್ರಮದಲ್ಲಿ ಜಾನ್‌ರೈಟ್ ಟೀಮ್ ಇಂಡಿಯಾದೊಂದಿಗೆ ಕೋಚ್ ಆಗಿದ್ದ ಸಂದರ್ಭದ ಕೆಲ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಜಿಮ್‌ಗೆ ಹೋಗದೇ ಇರುವ ವಿಚಾರ ಮತ್ತು ಅದರ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಜಿಮ್‌ ತುಂಬಾ ತಂಪಿದೆ

ಜಿಮ್‌ ತುಂಬಾ ತಂಪಿದೆ

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಯಾವತ್ತೂ ಜಿಮ್‌ಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಅದಕ್ಕೆ ಕಾರಣ ಮಾತ್ರ ತುಂಬಾ ತಮಾಷೆಯೆನಿಸುತ್ತದೆ. ಜಿಮ್‌ನಲ್ಲಿ ತುಂಬಾ ತಂಪಿದೆ, ಚಳಿಯಾಗುತ್ತದೆ ಎಂದು ಹೇಳಿ ಅವರು ತಪ್ಪಿಸಿಕೊಳ್ಳುತ್ತಿದ್ದರು ಎಂದು ಜಾನ್‌ರೈಟ್ ವಿವರಿಸಿದ್ದಾರೆ.

ಸೆಹ್ವಾಗ್‌ಗೆ ನಂಬಿಕೆಯಿರಲಿಲ್ಲ

ಸೆಹ್ವಾಗ್‌ಗೆ ನಂಬಿಕೆಯಿರಲಿಲ್ಲ

ವೀರೇಂದ್ರ ಸೆಹ್ವಾಗ್ ಅವರನ್ನು ಮೆಷಿನ್‌ ಮೂಲಕ ಓಡುವಂತೆ ಸೂಚಿಸಿದರೂ ಅವರು ಕೇಳಿಸಿಕೊಳ್ಳುತ್ತಿರಲ್ಲ. ವೀರೇಂದ್ರ ಸೆಹ್ವಾಗ್ ಮೆಷಿನ್‌ಗಳ ಮೂಲಕ ಅಭ್ಯಾಸ ಮಾಡುವುದರಲ್ಲಿ ನಂಬಿಕೆ ಹೊಂದಿರಲಿಲ್ಲ ಎಂದು ಜಾನ್‌ರೈಟ್ ಹೇಳಿದ್ದಾರೆ.

ಶ್ರೇಷ್ಠ ಆರಂಭಿಕ ಆಟಗಾರ

ಶ್ರೇಷ್ಠ ಆರಂಭಿಕ ಆಟಗಾರ

ವೀರೇಂದ್ರ ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ 2015ರಲ್ಲಿ ನಿವೃತ್ತರಾದರು. ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಲ್ಪಡುವ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ ದಾಖಲಿಸಿದ ಕೇವಲ ನಾಲ್ಕು ಆಟಗಾರರಲ್ಲಿ ಒಬ್ಬರಾಗಿದ್ದಾರೆ.

14 ವರ್ಷಗಳ ಕ್ರಿಕೆಟ್ ವೃತ್ತಿ ಜೀವನ

14 ವರ್ಷಗಳ ಕ್ರಿಕೆಟ್ ವೃತ್ತಿ ಜೀವನ

14 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ 8586 ಟೆಸ್ಟ್ ರನ್‌ಗಳನ್ನು 49.34ರ ಸರಾಸರಿಯಲ್ಲಿ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಸೆಹ್ವಾಗ್ ಸ್ಟ್ರೈಕ್ ರೇಟ್ ಭರ್ಜರಿ 82.23 ಆಗಿದೆ. 251 ಏಕದಿನ ಪಂದ್ಯಗಳಲ್ಲಿ ಸೆಹ್ವಾಗ್ 8273 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಸೆಹ್ವಾಗ್ 35.05 ಸರಾಸರಿಯನ್ನು ಹೊಂದಿದ್ದಾರೆ.

Story first published: Wednesday, June 3, 2020, 16:36 [IST]
Other articles published on Jun 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+