Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ಟೆಸ್ಟ್ ಒಪ್ಪಂದದ ಪಟ್ಟಿಯಲ್ಲಿ ಎಸ್‌ಆರ್‌ಎಚ್‌ನ ಜಾನಿ ಬೇರ್ಸ್ಟೋವ್ ಇಲ್ಲ

Jonny Bairstow excluded from Test contract by ECB

ಲಂಡನ್: ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್, 2020-21ರ ಟೆಸ್ಟ್ ಸೀಸನ್‌ಗೆ ಸಂಬಂಧಿಸಿ ಒಪ್ಪಂದದ ಪಟ್ಟಿ ಪ್ರಕಟಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಆಡುವ, ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಇಂಗ್ಲೆಂಡ್‌ನ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಜಾನಿ ಬೇರ್ಸ್ಟೋವ್ ಮೊದಲ ಆಯ್ಕೆಯ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಬೇರ್ಸ್ಟೋವ್ ಕಡೇಯ ಟೆಸ್ಟ್ ಪಂದ್ಯ ಆಡಿದ್ದರು. ಸದ್ಯ ಐಪಿಎಲ್‌ನಲ್ಲಿ ಆಡುತ್ತಿರುವ ಬೇರ್ಸ್ಟೋವ್ ಆಡಿರುವ ಮೂರು ಪಂದ್ಯಗಳಲ್ಲಿ 119 ರನ್ ಗಳಿಸಿದ್ದಾರೆ.

ಬುಧವಾರ (ಸೆಪ್ಟೆಂಬರ್ 30) ಇಸಿಬಿ ಪ್ರಕಟಿಸಿದ ಕೇಂದ್ರೀಯ ಒಪ್ಪಂದದ ಪಟ್ಟಿಯಲ್ಲಿ ಯುವ ಬ್ಯಾಟ್ಸ್‌ಮನ್ ಝಾಕ್ ಕ್ರಾಲೆ, ಆಲಿ ಪೋಪ್ ಮತ್ತು ಡಾಮ್ ಸಿಬ್ಮಿ ಕಾಣಿಸಿಕೊಂಡಿದ್ದಾರೆ. ಈ ಮೂವರಲ್ಲದೆ ಒಟ್ಟಾರೆ 12 ಮಂದಿ ಆಟಗಾರರು ರೆಡ್‌ ಬಾಲ್ ಕ್ರಿಕೆಟ್‌ನ ಒಪ್ಪಂದ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇಸಿಬಿ ಸೆಂಟ್ರಲ್ ಒಪ್ಪಂದದ ಆಟಗಾರರ ಪಟ್ಟಿ
* ಟೆಸ್ಟ್ ಮತ್ತು ವೈಟ್-ಬಾಲ್: ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್.
* ಟೆಸ್ಟ್ ಮಾತ್ರ: ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಝಾಕ್ ಕ್ರಾಲೆ, ಆಲಿ ಪೋಪ್, ಡಾಮ್ ಸಿಬ್ಲಿ, ಸ್ಯಾಮ್ ಕರ್ರನ್.
* ವೈಟ್-ಬಾಲ್ ಮಾತ್ರ: ಮೊಯೀನ್ ಅಲಿ, ಜಾನಿ ಬೈರ್‌ಸ್ಟೋವ್, ಟಾಮ್ ಕರ್ರನ್, ಇಯಾನ್, ಆದಿಲ್ ರಶೀದ್, ಜೇಸನ್ ರಾಯ್, ಮಾರ್ಕ್ ವುಡ್.

Story first published: Tuesday, October 6, 2020, 14:54 [IST]
Other articles published on Oct 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+