ಜಾಂಟಿ ರೋಡ್ಸ್ ಮನಸೂರೆಗೊಳಿಸಿದ ಮೂವರು ಭಾರತೀಯ ಆಟಗಾರರು

ಜಾಂಟಿ ರೋಡ್ಸ್ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ. ತನ್ನ ಅದ್ಭುತ ಫೀಲ್ಡಿಂಗ್ ಮೂಲಕ ಜಾಂಟಿ ರೋಡ್ಸ್ ಕ್ರಿಕೆಟ್ ಲೋಕವನ್ನು ಚಕಿತಗೊಳ್ಳುವಂತೆ ಮಾಡಿದ ಆಟಗಾರ. ಇತ್ತೀಚೆಗಷ್ಟೇ ಮುಂದೂಡಲ್ಪಟ್ಟ ದಿಗ್ಗಜರ ಕ್ರಿಕೆಟ್ ಟೂರ್ನಿ "ರೋಡ್ ಸೇಫ್ಟಿ ವಿಶ್ವಚಾಂಪಿಯನ್ಶಿಪ್"ನಲ್ಲ ಜಾಂಟಿ ರೋಡ್ಸ್ ಪಾಲ್ಗೊಂಡಿದ್ದರು.
ಖಾಸಗಿ ಮಾಧ್ಯಮದ ಜೊತೆಗೆ ಮಾತನಾಡಿದ ಜಾಂಟಿ ರೋಡ್ಸ್ ಕ್ರಿಕೆಟ್ ಮೂಲಕ ತನ್ನ ಮನಗೆದ್ದ ಟೀಮ್ ಇಂಡಿಯಾದ ಮೂವರು ಆಟಗಾರರನ್ನು ಹೆಸರಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಈ ಆಟಗಾರರು ದಿಗ್ಗಜ ಆಟಗಾರನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ದಿಗ್ಗಜನ ಮೆಚ್ಚುಗೆಗೆ ಪಾತ್ರವಾದ ಮೊದಲ ಆಟಗಾರ ಬೇರೆ ಯಾರೂ ಅಲ್ಲ. ಅದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ. ಬ್ಯಾಟಿಂಗ್ ಮತ್ತು ನಾಯಕತ್ವದ ಮೂಕ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕನನ್ನು ಜಾಂಟಿ ರೋಡ್ಸ್ ಹಾಡಿ ಹೊಗಳಿದ್ದಾರೆ.
ಜಾಂಟಿ ರೋಡ್ಸ್ ಅವರಿಂದ ಮೆಚ್ಚುಗೆಗೆ ಪಾತ್ರವಾದ ಮತ್ತೋರ್ವ ಆಟಗಾರ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರಿತ್ ಬೂಮ್ರಾ. ಅದ್ಭುತ ಲೈನ್ ಮತ್ತು ಲೆಂತ್ ಹಾಗೂ ಪರ್ಫೆಕ್ಟ್ ಯಾರ್ಕರ್ ಮೂಲಕ ಬೂಮ್ರಾ ಎದುರಾಳಿಗಳನ್ನು ನಡುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಮ್ ಇಂಡಿಯಾದಿಂದ ಸದ್ಯ ಬೇರ್ಪಟ್ಟಿರುವ ಸುರೇಶ್ ರೈನಾ ಕೂಡ ಜಾಂಟಿರೋಡ್ಸ್ ಅವರ ಮೆಚ್ಚಿನ ಆಟಗಾರನಾಗಿದ್ದಾರೆ. ಅದ್ಭುತ ಫೀಲ್ಡರ್ ಆಗಿ ಮಿಂಚಿರುವ ಸುರೇಶ್ ರೈನಾ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದು ಟೀಮ್ ಇಂಡಿಯಾಗೆ ಮರಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications