ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫೀಲ್ಡರ್ ಎಂದಾಗ ಮೊದಲು ನೆನಪಾಗುವುದೇ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಂಟಿ ರೋಡ್ಸ್. ಅವರು ಫೀಲ್ಡಿಂಗ್ ವೇಗವನ್ನು ಇಲ್ಲಿವರೆಗೂ ಯಾವ ಆಟಗಾರರನೂ ಕಂಡುಕೊಂಡಿಲ್ಲ.
ಜಾಂಟಿ ರೋಡ್ಸ್ ಅವರಿಂದ ಭೇಷ್ ಅನಿಸಿಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬ ಆಟಗಾರನಲ್ಲಿಯೂ ಇರುತ್ತದೆ. ಈಗ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಲ್‌ರೌಂಡರ್‌ಗಳನ್ನು ಅವರಯ ಹೊಗಳಿದ್ದಾರೆ.

ಟೀಮ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಅವರನ್ನು ಜಾಂಟಿ ರೋಡ್ಸ್ ಗುಣಗಾನ ಮಾಡಿದ್ದಾರೆ. ಅಲ್ಲದೆ, ರವೀಂದ್ರ ಜಡೇಜಾ ಅವರನ್ನು ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್ ಎಂದು ಕರೆದಿದ್ದಾರೆ.
ಪ್ರೊ ಕ್ರಿಕೆಟ್ ಲೀಗ್ ಟ್ರೋಫಿ ಮತ್ತು ಜೆರ್ಸಿ ಅನಾವರಣ ಸಮಾರಂಭದಲ್ಲಿ ಮಾತನಾಡಿರುವ ಜಾಂಟಿ ರೋಡ್ಸ್, 'ನಾನು ಯಾವಾಗಲೂ ಇಬ್ಬರು ಆಟಗಾರರನ್ನು ಅತ್ಯುತ್ತಮ ಫೀಲ್ಡರ್‌ಗಳು ಎಂದು ಹೇಳಿದ್ದೇನೆ. ಅವರು ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ. ಇವರಿಬ್ಬರೂ ಅತ್ಯುತ್ತಮ ಭಾರತೀಯ ಫೀಲ್ಡರ್‌ಗಳು.ಆದರೆ
ಆಧುನಿಕ ಕ್ರಿಕೆಟ್‌ನ ಬಗ್ಗೆ ನೋಡುವುದಾರೇ, ಅತ್ಯುತ್ತಮ ಫೀಲ್ಡರ್ ಖಂಡಿತವಾಗಿಯೂ ರವೀಂದ್ರ ಜಡೇಜಾ. ಅವರನ್ನು ನೀವೆಲ್ಲರೂ ಪ್ರೀತಿಯಿಂದ ಸರ್ ಜಡೇಜಾ ಎಂದು ಕರೆಯುತ್ತೀರಿ. ಮೈದಾನದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಫೀಲ್ಡಿಂಗ್ ಮಾಡುವಲ್ಲಿ ಅವರು ಚತುರರಾಗಿದ್ದಾರೆ. ಈ ಕಾರಣ ಅವರು ಅತ್ಯುತ್ತಮ ಫೀಲ್ಡರ್.
ಅಂತರಾಷ್ಟ್ರೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರಾದ ರೋಡ್ಸ್ 1992 ರಿಂದ 2003 ರವರೆಗೆ ದಕ್ಷಿಣ ಆಫ್ರಿಕಾ ಪರ ಆಡಿದ್ದಾರೆ. ಏಕದಿನದಲ್ಲಿ 100 ಕ್ಯಾಚ್‌ಗಳನ್ನು ಪಡೆದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿವೃತ್ತಿಯ ನಂತರ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ತಂಡಗಳಿಗೆ ಫೀಲ್ಡಿಂಗ್ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ಸೇರಿದಂತೆ ಹಲವಾರು ತಂಡಗಳೊಂದಿಗೆ ಫೀಲ್ಡಿಂಗ್ ತರಬೇತುದಾರರಾಗಿ ಸಂಬಂಧ ಹೊಂದಿದ್ದಾರೆ.