ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ದ ಟಿ20 ಮತ್ತು ಏಕದಿನ ಸರಣಿಯನ್ನು ಗೆದ್ದಿದೆ. ಈ ಎರಡು ಸರಣಿಗಳ ಸೋಲಿನ ಬಳಿಕ, ರೋಹಿತ್ ಶರ್ಮಾ ಅವರನ್ನು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹೊಗಳಿದ್ದಾರೆ. ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಎರಡನೇ ಏಕದಿನ ಪಂದ್ಯದ ಮೂಲಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿದ್ದು, ಅವರು 76 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 32 ಶತಕಗಳನ್ನು ಪೂರೈಸಿದ್ದಾರೆ.
ರೋಹಿತ್ ಶರ್ಮಾ ತಮ್ಮ ಸ್ಪೋಟಕ ಇನ್ನಿಂಗ್ಸ್ ಆಡಿದರು. ಅವರು 90 ಎಸೆತಗಳಲ್ಲಿ 132.22 ಸ್ಟ್ರೈಕ್ ರೇಟ್‌ನಲ್ಲಿ 7 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳ ನೆರವಿನಿಂದ 119 ರನ್ ಕಲೆ ಹಾಕಿದರು. ಇಂಗ್ಲೆಂಡ್ ನೀಡಿದ್ದ 305 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, 44.3 ಓವರ್‌ಗಳಲ್ಲಿ 308 ರನ್‌ಗಳನ್ನು ಗಳಿಸಿ ಪಂದ್ಯ ಮತ್ತು ಸರಣಿಯನ್ನು ಗೆದ್ದುಕೊಂಡಿತು. ಟೀಮ್ ಇಂಡಿಯಾ ಗೆಲುವಿಗೆ ಸ್ಪೋಟಕ ಇನ್ನಿಂಗ್ಸ್ ಆಡಿದ ನಾಯಕ ರೋಹಿತ್ ಶರ್ಮಾ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರು.

ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದು, 76 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಅವರ ಏಕದಿನ ಕ್ರಿಕೆಟ್ ವೃತ್ತಿಜೀವನದ ಎರಡನೇ ವೇಗದ ಶತಕವಾಗಿದೆ. ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ರೋಹಿತ್ ಶರ್ಮಾ ಬಗ್ಗೆ ಮಾತನಾಡಲು ಈ ಅಂಕಿ ಅಂಶ ಸಾಕು. ಪಂದ್ಯದ ನಂತರ, ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಕಟಕ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಸ್ಫೋಟಕ ಇನ್ನಿಂಗ್ಸ್ 'ಬ್ಯಾಡ್ಜ್‌ಬಾಲ್' ಕ್ರಿಕೆಟ್ ಆಡಲು ಸರಿಯಾದ ಮಾರ್ಗ ಎಂದು ತೋರಿಸುತ್ತದೆ ಎಂದು ಹೇಳಿದ್ದಾರೆ.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೋಸ್ ಬಟ್ಲರ್, ರೋಹಿತ್ 50 ಓವರ್‌ಗಳ ಕ್ರಿಕೆಟ್ ಅನ್ನು ಆಧುನಿಕ ರೀತಿಯಲ್ಲಿ ಹೇಗೆ ಆಡಬೇಕೆಂದು ತೋರಿಸಿದರು. ಅವರು ಬ್ಯಾಟಿಂಗ್ ಮಾಡುತ್ತಿದ್ದ ವೇಗವು ಅವರ ವಿಧಾನ ಸರಿಯಾಗಿದೆ ಎಂದು ತೋರಿಸುತ್ತದೆ. ನಾವು ಆಡಲು ಬಯಸುವ ರೀತಿಯೇ ಕ್ರಿಕೆಟ್‌ನಲ್ಲಿ ಪಂದ್ಯಗಳನ್ನು ಗೆಲ್ಲಲು ಸರಿಯಾದ ಮಾರ್ಗ ಎಂಬುದನ್ನು ಸ್ಪಷ್ಟಪಡಿಸುತ್ತದೆ. ರೋಹಿತ್ ಶರ್ಮಾ ದೀರ್ಘಕಾಲದವರೆಗೆ ಉತ್ತಮ ಆಟಗಾರ. ಎರಡೂ ತಂಡಗಳ ಆಟಗಾರರು ಅವರನ್ನು ನೋಡಿ ಕಲಿಯುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರೋಹಿತ್ ಶರ್ಮಾ ಅವರಂತಹ ಆಟಗಾರ ಒತ್ತಡಕ್ಕೆ ಒಳಗಾದಾಗ, ನಾವು ನಮ್ಮ ಬಗ್ಗೆ ಸ್ವಲ್ಪ ಮೃದುವಾಗಿರಬೇಕು ಎಂಬುದನ್ನು ಇದು ನಮಗೆಲ್ಲರಿಗೂ ನೆನಪಿಸುತ್ತದೆ. ಅವರು ಬಹಳ ಸಮಯದಿಂದ ಉತ್ತಮ ಆಟಗಾರರಾಗಿದ್ದಾರೆ. ಸ್ಟಾರ್ ಅನುಭವಿ ಆಟಗಾರರು ಸಾಮಾನ್ಯವಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ. ಇಂದು ಅವರು ಅದನ್ನು ಮಾಡಿದ್ದಾರೆ. ನೀವು ಉತ್ತಮ ಆಟಗಾರರ ವಿರುದ್ಧ ಆಡಿದಾಗ ಮತ್ತು ಅವರು ಅಂತಹ ಇನ್ನಿಂಗ್ಸ್ ಆಡಿದಾಗ, ಎರಡೂ ತಂಡಗಳ ಆಟಗಾರರು ಅವರನ್ನು ನೋಡಿ ಕಲಿಯುತ್ತಾರೆ ಎಂಬುದು ಗೊತ್ತಿದೆ. ಅವರು ಅದ್ಭುತ ಇನ್ನಿಂಗ್ಸ್ ಆಡಿದರು. ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂದು ತೋರಿಸಿದರು. ನಂತರ ಎದುರಾಳಿ ತಂಡದ ಮೇಲೆ ಹೆಚ್ಚಿನ ಒತ್ತಡ ಹೇರಿದರು ಎಂದು ರೋಹಿತ್ ಶರ್ಮಾ ಇನ್ನಿಂಗ್ಸ್ ಬಗ್ಗೆ ಬಟ್ಲರ್ ಮಾತನಾಡಿದ್ದಾರೆ.