For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಉಳಿದ ಪಂದ್ಯಗಳಿಗೆ ಇಂಗ್ಲೆಂಡ್‌ನ ಈ ಸ್ಟಾರ್ ಆಟಗಾರ ಅಲಭ್ಯ ಸಾಧ್ಯತೆ

Jos Buttler is expected to miss the second half of the IPL 2021 in UAE

ಬೆಂಗಳೂರು, ಆಗಸ್ಟ್ 4: ಕೊರೊನಾವೈರಸ್‌ನಿಂದಾಗಿ ಅರ್ಧಕ್ಕೆ ಸ್ಥಗಿತವಾಗಿದ್ದ 14ನೇ ಆವೃತ್ತಿಯ ಐಪಿಎಲ್ ಪುನಾರಂಭಕ್ಕೆ ವೇಳಾಪಟ್ಟಿ ನಿಗದಿ ಪಡಿಸಲಾಗಿದೆ. ಆದರೆ ಈ ಸಂರ್ಭದಲ್ಲಿ ಕೆಲ ಅಂತಾರಾಷ್ಟ್ರೀಯ ಪಂದ್ಯಗಳು ನಿಗದಿಯಾಗಿರುವ ಕಾರಣ ಕೆಲ ತಂಡಗಳ ಆಟಗಾರರ ಸದಸ್ಯರು ಐಪಿಎಲ್‌ನಲ್ಲಿ ಭಾಗಿಯಾಗುವ ಬಗ್ಗೆ ಅನುಮಾನಗಳಿವೆ.

ಇಂಥದ್ದೇ ಅನುಮಾನ ಇಂಗ್ಲೆಂಡ್ ಆಟಗಾರರ ಬಗ್ಗೆಯೂ ಇತ್ತು. ಆದರೆ ಬಿಸಿಸಿಐ ಮಂಗಳವಾರ ಈ ಬಗ್ಗೆ ಖಚಿತಪಡಿಸಿದ್ದು ಇಂಗ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಯವುದಕ್ಕೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಒಪ್ಪಿಗೆ ನೀಡಿರುವುದಾಗಿ ತಿಳಿಸಿತ್ತು. ಹಾಗಿದ್ದರೂ ಇಂಗ್ಲೆಂಡ್‌ನ ಪ್ರಮುಖ ಆಟಗಾರ ಜೋಸ್ ಬಟ್ಲರ್ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಲಭ್ಯವಿರುವುದು ಅನುಮಾನ ಎನ್ನಲಾಗಿದೆ. ಇದಕ್ಕೆ ಕಾರಣವೂ ಇದೆ.

ವರದಿಗಳ ಪ್ರಕಾರ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ದಂಪತಿ ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಜೋಸ್ ಬಟ್ಲರ್ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಧಿಕೃತ ಪ್ರಸಾರಕರಾದ ಸ್ಕೈ ಸ್ಪೋರ್ಟ್ಸ್‌ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಐಪಿಎಲ್ ಟೂರ್ನಿಯಲ್ಲಿ ಜೋಸ್ ಬಟ್ಲರ್ ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಇದಕ್ಕೂ ಐಪಿಎಲ್‌ನ ಎರಡನೇ ಚರಣದ ಪಂದ್ಯಗಳಿಂದ ಇಂಗ್ಲೆಂಡ್ ತಂಡದ ಆಟಗಾರರು ಭಾಗವಹಿಸುವುದಿಲ್ಲ ಎನ್ನಲಾಗಿತ್ತು. ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ನಿಗದಿಯಾಗಿರುವ ಕಾರಣ ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು ಇಸಿಬಿ. ಆದರೆ ಈ ಬಗ್ಗೆ ಬಿಸಿಸಿಐ ಸತತ ಮಾತುಕತೆ ನಡೆಸಿದ ಬಳಿಕ ಇಸಿಬಿ ಮನವೊಲಿಸುಲ್ಲಿ ಬಿಸಿಸಿಐ ಯಶಸ್ವಿಯಾಗಿದ್ದು ಇಂಗ್ಲೆಂಡ್ ಆಟಗಾರರನ್ನು ಐಪಿಎಲ್‌ಗೆ ಕಳುಹಿಸಲು ಒಪ್ಪಿಕೊಂಡಿದೆ. ಇನ್ನು ಈ ಸಂದರ್ಭದಲ್ಲಿ ಆಯೋಜನೆಯಾಗಿದ್ದ ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿ ರದ್ದಾಗುವ ಸಾಧ್ಯತೆ ದಟ್ಟವಾಗಿದೆ.

ಅದ್ಭುತ ಪ್ರದರ್ಶನ ನೀಡಿದ್ದ ಬಟ್ಲರ್: ಐಪಿಎಲ್‌ನ ಮೊದಲಾರ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಜೋಸ್ ಬಟ್ಲರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಂಜು ಸ್ಯಾಮ್ಸನ್ ನೇತೃತ್ವದ ತಂಡದ ಸ್ಟಾರ್ ಆಟಗಾರನಾಗಿ ಬಟ್ಲರ್ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಬಟ್ಲರ್ ಆಡಿದ ಏಳು ಪಂದ್ಯಗಳಲ್ಲಿ 254 ರನ್‌ಗಳಿಸಿದ್ದಾರೆ. 36.29 ಸರಾಸರಿ ಹಾಗೂ 153.01ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಇನ್ನು ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ಕೂಡ ರಾಜಸ್ಥಾನ ತಂಡಕ್ಕೆ ಕೈಗೊಡುವ ಸಾಧ್ಯತೆಯೂ ಇದೆ. ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅನಿರ್ದಿಷ್ಟಾವಧಿಯ ವಿರಾಮ ಪಡೆದುಕೊಳ್ಳುವುದಾಗಿ ತಿಳಿಸಿದರು. ಈ ಸರಣಿಯ ಮುಕ್ತಾಯದ ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿರುವ ಕಾರಣ ಅವರ ಲಭ್ಯತೆಯ ಬಗ್ಗೆಯೂ ಅನುಮಾನಗಳು ಎದ್ದಿದೆ.

ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುತ್ತಿದ್ದು ಈ ಸರಣಿಯ ಅಂತ್ಯವಾಗುತ್ತಿದ್ದಂತೆಯೇ ಭಾರತ ಹಾಗೂ ಇಂಗ್ಲೆಂಡ್ ಆಟಗಾರರು ಒಂದೇ ಚಾರ್ಟರ್ ಫ್ಲೈಟ್ ಮೂಲಕ ಯುಎಇಗೆ ಪ್ರಯಾಣಿಸಲಿದ್ದಾರೆ. ಈ ಮೂಲಕ ಒಂದು ಬಯೋಬಬಲ್‌ನಿಂದ ಮತ್ತೊಂದು ಬಯೋಬಬಲ್‌ಗೆ ಸೇರ್ಪಡೆಯಾಗಲಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ. ಇದಾದ ಬಳಿಕ ಕೇವಲ 5 ದಿನಗಳ ಅಂತರದಲ್ಲಿ ಐಪಿಎಲ್ ಪುನಾರಂಭವಾಗಲಿದೆ.

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಲಭ್ತವಾಗಲಿದ್ದಾರೆ ಎಂಬುದನ್ನು ಈ ಮೊದಲೇ ಖಚಿತಪಡಿಸಿದೆ. ದಕ್ಷಿಣ ಆಫ್ರಿಕಾ ಆಟಗಾರರು ಕೂಡ ಭಾಗಿಯಾಗುವುದು ನಿಶ್ಚಿತ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳ ನಿರ್ಧಾರ ಕುತೂಹಲ ಮೂಡಿಸಿದೆ. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಸರಣಿಗಳು ನಿಗದಿಯಾಗಿರುವ ಕಾರಣ ಅಲ್ಲಿನ ಆಟಗಾರರ ಲಭ್ಯತೆಯ ಬಗ್ಗೆ ಖಚಿತವಿಲ್ಲ. ಒಂದು ವೇಳೆ ಆಟಗಾರರು ಅಲಭ್ಯವಾದಲ್ಲಿ ಆ ಸ್ಥಾನಕ್ಕೆ ಬೇರೆ ಆಟಗಾರರನ್ನು ಸೇರ್ಪಡೆಗೊಳಿಸುವ ಅವಕಾಶ ದೊರೆಯಲಿದೆ.

Story first published: Wednesday, August 4, 2021, 21:46 [IST]
Other articles published on Aug 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+