Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jos Buttler: ವಿರಾಟ್‌ ಕೊಹ್ಲಿ ಜೊತೆ ವಿಶೇಷ ಕ್ಲಬ್‌ ಸೇರಿದ ಜೋಸ್ ಬಟ್ಲರ್

ಜೋಸ್‌ ಬಟ್ಲರ್‌ ಹೆಸರು ಕಿವಿಗೆ ಬೀಳುತ್ತಲೆ ಅವರ ಧಮಾಕೆದಾರ್ ಬ್ಯಾಟಿಂಗ್ ಕಣ್ಣ ಮುಂದೆ ಬರುತ್ತದೆ. ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸುವ ಸ್ಫೋಟಕ ಬ್ಯಾಟರ್‌, ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿಲ್ಲ. ಆದರೆ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಹಂಡ್ರೆಡ್‌ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈ ಲೀಗ್‌ನಲ್ಲೂ ಜೋಸ್‌ ತಮ್ಮ ಆರ್ಭಟ ಮುಂದುವರೆಸಿದ್ದಾರೆ. ಈ ಲೀಗ್‌ನಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿದ ಜೋಶ್‌ ವಿಶೇಷ ಕ್ಲಬ್‌ಗೆ ಸ್ಥಾನ ಪಡೆದಿದ್ದಾರೆ.

ಜೋಸ್‌ ಬಟ್ಲರ್‌ ಐಪಿಎಲ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಭಾರತೀಯ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದ್ದಾರೆ. ಜೋಸ್‌ ಬಟ್ಲರ್‌ ದಿ ಹಂಡ್ರೆಡ್‌ ಲೀಗ್‌ನಲ್ಲಿ ಮ್ಯಾಂಚೆಸ್ಟರ್‌ ಒರಿಜಿನಲ್ಸ್ ಪರ ಆಡುತ್ತಿದ್ದಾರೆ. ನಾರ್ದರ್ನ್ ಸೂಪರ್‌ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್‌ ವಿರಾವೇಶದ ಬ್ಯಾಟಿಂಗ್ ನಡೆಸಿದರು. ಮೊದಲು ಬ್ಯಾಟ್ ಮಾಡಿದ ನಾರ್ದರ್ನ್ ಸೂಪರ್‌ಚಾರ್ಜರ್ಸ್ 100 ಎಸೆತಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 139 ರನ್ ಗಳಿಸಿತು. ತಂಡದ ಪರ ಸಮೀತ್ ಪಟೇಲ್ (42) ಗರಿಷ್ಠ ರನ್ ಬಾರಿಸಿದ ಸಾಧನೆ ಮಾಡಿದರು.

Jos Buttler Joins Elite T20 Club After Blazing Knock in The Hundred Tournament

ಮ್ಯಾಂಚೆಸ್ಟರ್‌ ಒರಿಜಿನಲ್ಸ್‌ ಉತ್ತಮ ಆರಂಭವನ್ನು ಪಡೆಯುವಲ್ಲಿ ವಿಫಲರಾದರು. ಇನ್ನು ಆರಂಭಿಕರು ತಂಡದ ಮೊತ್ತ 31 ರನ್‌ ಆಗಿದ್ದಾಗ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಮೂರನೇ ವಿಕೆಟ್‌ಗೆ ಜೋಸ್ ಬಟ್ಲರ್‌ ಆರ್ಭಟಸಿದರು. ಜೋಸ್ ಬಟ್ಲರ್ 37 ಎಸೆತಗಳಲ್ಲಿ 70 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಈ ವೇಳೆ 7 ಬೌಂಡರಿ, 5 ಸಿಕ್ಸರ್‌ ಬಾರಿಸಿದರು. ಇದೇ ವೇಳೆ ರಾಚಿನ್ ರವೀಂದ್ರ ಸಹ 23 ಎಸೆತಗಳಲ್ಲಿ 47 ರನ್‌ ಇನ್ನಿಂಗ್ಸ್‌ ಕಟ್ಟಿ ತಂಡಕ್ಕೆ ಆಧಾರವಾದರು. ಇವರಿಬ್ಬರ ಆಟದ ನೆರವಿನಿಂದ ಮ್ಯಾಂಚೆಸ್ಟರ್‌ 84 ಎಸೆತಗಳಲ್ಲಿ ಗೆಲುವು ದಾಖಲಿಸಿತು. 3 ನೇ ವಿಕೆಟ್‌ಗೆ ಬಟ್ಲರ್ ಹಾಗೂ ರಾಚಿನ್ ಜೋಡಿ 99 ರನ್‌ ಸೇರಿಸಿತು.

ವಿಶೇಷ ಕ್ಲಬ್‌ಗೆ ಎಂಟ್ರಿ

ಟಿ20 ಕ್ರಿಕೆಟ್‌ನಲ್ಲಿ ಜೋಸ್‌ ಬಟ್ಲರ್‌ ಮತ್ತೊಂದು ದಾಖಲೆ ಬರೆದರು. ಇವರು 1200 ಬೌಂಡರಿಗಳನ್ನು ಪೂರೈಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ವಿಶ್ವ ಕ್ರಿಕೆಟ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಕೇವಲ ಐವರು ಬ್ಯಾಟರ್‌ಗಳು ಮಾತ್ರ 1200 ಬೌಂಡರಿಗಳನ್ನು ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಲೆಕ್ಸ್ ಹೆಲ್ಸ್‌ ಇದ್ದು, ಇವರು 1516 ಬೌಂಡರಿ ಸಿಡಿಸಿದ್ದಾರೆ. ಜೇಮ್ಸ್ ವಿನ್ಸ್ 1417 ಬೌಂಡರಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್‌ 1394 ಬೌಂಡರಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 1210 ಬೌಂಡರಿ ಸಿಡಿಸಿದ್ದಾರೆ.

Story first published: Wednesday, August 27, 2025, 18:05 [IST]
Other articles published on Aug 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+