ಫಿಲ್ ಸಾಲ್ಟ್ ಇಂಗ್ಲೆಂಡ್ ತಂಡದ ನೂತನ ಟಿ20 ನಾಯಕ
ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಗಾಯಕ್ಕೆ ತುತ್ತಾಗಿದ್ದರಿಂದ, ಈ ಸರಣಿಗೆ ಅಲಭ್ಯ. ಇವರ ಅನುಪಸ್ಥಿತಿಯಲ್ಲಿ ಬಟ್ಲರ್ ಅವರನ್ನು ಸ್ಫೋಟಕ ಬ್ಯಾಟರ್ ಅವರಿಗೆ ಇಸಿಬಿ ಪಟ್ಟ ಕಟ್ಟಲಾಗಿದೆ.
ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬದಲಿಗೆ, ಸರ್ರೆ ಆಲ್‌ರೌಂಡರ್ ಜೇಮಿ ಓವರ್ಟನ್ ಅವರಿಗೆ ಅವಕಾಶ ನೀಡಲಾಗಿದೆ. ಈ ವೇಳೇ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದ್ದು, ಸೆಪ್ಟೆಂಬರ್ 11 ರಂದು ಮೊದಲ ಟೆಸ್ಟ್‌ನಲ್ಲಿ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

ಪಟ್ಟ ಯಾರಿಗೆ?
ಜೋಸ್ ಬಟ್ಲರ್‌ಗೆ ಗಾಯವಾಗಿದ್ದು, ಇವರ ಸ್ಥಾನವನ್ನು ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ ಫಿಲ್ ಸಾಲ್ಟ್ ತುಂಬಲಿದ್ದಾರೆ. ಇವರು ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇವರು ಇತ್ತೀಚಿಗೆ ದಿ ಹಂಡ್ರೆಡ್‌ನಲ್ಲಿ ಮ್ಯಾಂಚೆಸ್ಟರ್ ಟೂರ್ನಿಯಲ್ಲಿ ಒರಿಜಿನಲ್ಸ್ ತಂಡದ ಪರ ನಾಯಕರಾಗಿ ಯಶಸ್ವು ಕಂಡಿದ್ದಾರೆ. ಬಟ್ಲರ್ ಅವರಿಗೆ ಗಾಯವಾಗಿದ್ದು, ಅವರು ಏಕದಿನ ಸರಣಿಯಲ್ಲಿ ಆಡುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಇಂಗ್ಲೆಂಡ್ ಟಿ20 ಸರಣಿಯ ನಂತರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಟಿ20 ಸರಣಿಗೆ ಇಂಗ್ಲೆಂಡ್ ತಂಡ
ಫಿಲ್ ಸಾಲ್ಟ್ (ನಾಯಕ) ಜೋಫ್ರಾ ಆರ್ಚರ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋರ್ಡಾನ್ ಕಾಕ್ಸ್, ಸ್ಯಾಮ್ ಕರ್ರಾನ್, ಜೋಶ್ ಹಲ್, ವಿಲ್ ಜಾಕ್ವೆಸ್, ಲಿಯಾಮ್ ಲಿವಿಂಗ್‌ಸ್ಟೋನ್, ಸಾಕಿಬ್ ಮಹಮೂದ್, ಡಾನ್ ಮೌಸ್ಲಿ, ಜೇಮೀ ಓವರ್‌ಟನ್, ಆದಿಲ್ ರಶೀದ್, ರೀಸ್ ಟೋಪ್ಲಿ, ಜಾನ್ ಟರ್ನರ್.
ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ಜೋಶ್ ಹಲ್, ವಿಲ್ ಜ್ಯಾಕ್ಸ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೇಮೀ ಸ್ಮಿತ್, ರೀಸ್ ಟೋಪ್ಲಿ, ಜಾನ್ ಟುರ್ನರ್ .

ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯ
1 ನೇ T20: 11 ಸೆಪ್ಟೆಂಬರ್ 2024
2 ನೇ T20: 13 ಸೆಪ್ಟೆಂಬರ್ 2024
3 ನೇ T20: 15 ಸೆಪ್ಟೆಂಬರ್ 2024
ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ
1 ನೇ ಏಕದಿನ, 19 ಸೆಪ್ಟೆಂಬರ್ 2024
2ನೇ ಏಕದಿನ, 21 ಸೆಪ್ಟೆಂಬರ್ 2024
3ನೇ ಏಕದಿನ, 24 ಸೆಪ್ಟೆಂಬರ್ 2024
4ನೇ ಏಕದಿನ, 27 ಸೆಪ್ಟೆಂಬರ್ 2024
5ನೇ ಏಕದಿನ, 29 ಸೆಪ್ಟೆಂಬರ್ 2024
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications