For Quick Alerts
ALLOW NOTIFICATIONS  
For Daily Alerts
 

IND vs ENG T20: ಭಾರತದ ವಿರುದ್ಧ ಸರಣಿಯಲ್ಲಿ ಇತಿಹಾಸ ಬರೆಯುವ ತವಕದಲ್ಲಿ ಇಂಗ್ಲೆಂಡ್ ಬ್ಯಾಟರ್

ಜನವರಿ 22ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಸರಣಿಗಳು ಆರಂಭವಾಗಲಿವೆ. ಈ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರು ಸಹ ಭಾಗವಹಿಸಲಿದ್ದಾರೆ. ಈ ವೇಳೆ ಎಲ್ಲರ ಕಣ್ಣು ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್‌ಗಳ ಮೇಲೆ ನೆಟ್ಟಿರಲಿದೆ. ಈ ಬ್ಯಾಟರ್ಸ್‌ ತಮ್ಮ ಧಮಾಕೆದಾರ ಬ್ಯಾಟಿಂಗ್‌ನಿಂದ ಸ್ಪೋಟಕ ಆಟ ಆಡಲು ಹೆಸರುವಾಸಿ. ಇಂಗ್ಲೆಂಡ್‌ ತಂಡದ ಭರವಸೆಯ ಸ್ಟಾರ್ ಬ್ಯಾಟರ್‌ ಭಾರತದ ವಿರುದ್ಧದ ಪಂದ್ಯದಲ್ಲಿ ಇತಿಹಾಸ ರಚಿಸುವ ಕನಸಿನಲ್ಲಿದ್ದಾರೆ.

ಇಂಗ್ಲೆಂಡ್ ತಂಡದ ಸ್ಟಾರ್ ಪ್ಲೇಯರ್ಸ್‌ ಈಗಾಗಲೇ ಭಾರತದ ಪರ ಹಲವು ಸರಣಿಗಳಲ್ಲಿ ಆಡಿದ್ದಾರೆ. ಅಲ್ಲದೆ ಭಾರತದಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಈ ಪ್ಲೇಯರ್‌ಗಳಿಗೆ ಭಾರತದ ಪಿಚ್‌ಗಳ ಮರ್ಮ್ ತಿಳಿದಿದೆ.ಈ ಸ್ಟಾರ್ ಬ್ಯಾಟರ್‌ಗಳು ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಚೇಂಜ್ ಮಾಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರನೇ ಜೋಸ್ ಬಟ್ಲರ್.

Jos Buttler Set to Create History in T20 Series Against India

ಯಾವ ದಾಖಲೆ ಬರೆಯಲಿದ್ದಾರೆ ಇಂಗ್ಲೆಂಡ್ ಬ್ಯಾಟರ್

ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್‌ ಭಾರತದ ವಿರುದ್ಧ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಇವರು ಭಾರತದ ವಿರುದ್ಧ 22 ಟಿ20 ಪಂದ್ಯಗಳನ್ನು ಆಡಿದ್ದು, 498 ರನ್ ಸಿಡಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕ ಸಹ ಸೇರಿವೆ. ಇವರು ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್‌. ಇನ್ನು ಇದೇ ತಿಂಗಳು ಆರಂಭವಾಗಲಿರುವ ಸರಣಿಯಲ್ಲಿ ಇವರು ಎರಡು ರನ್ ಬಾರಿಸಿದರೆ ಮತ್ತೊಂದು ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ.

ಜೋಸ್ ಬಟ್ಲರ್, ಭಾರತದ ವಿರುದ್ಧ ಟಿ20ಐ ಕ್ರಿಕೆಟ್‌ನಲ್ಲಿ 500 ರನ್‌ಗಳನ್ನು ಪೂರ್ಣಗೊಳಿಸುತ್ತಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ ಪರ ಯಾವುದೇ ಬ್ಯಾಟರ್‌ ಚುಟುಕು ಫಾರ್ಮೆಟ್‌ನಲ್ಲಿ ಈ ಸಾಧನೆ ಮಾಡಿಲ್ಲ.

Jos Buttler Set to Create History in T20 Series Against India

ಭಾರತದ ವಿರುದ್ಧ ಗರಿಷ್ಠ ರನ್ ಸಾಧಕರು

ಭಾರತದ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯನ್ನು ನೋಡುತ್ತಾ ಹೋದರೆ, ಈ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್ ತಂಡದ ನಿಕೋಲಸ್ ಪೂರನ್‌ ಎದ್ದು ಕಾಣುತ್ತಾರೆ. ಇವರು ಭಾರತದ ವಿರುದ್ಧ 592 ರನ್ ಸಿಡಿಸಿದ್ದಾರೆ. ಇದಾದ ಬಳಿಕ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 574 ರನ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 524 ರನ್ ಹಾಗೂ ಆಸೀಸ್ ತಂಡದ ಮಾಜಿ ನಾಯಕ ಏರಾನ್ ಫಿಂಚ್ 500 ರನ್ ಬಾರಿಸಿದ್ದಾರೆ. ಈಗ ಈ ಸಾಲಿಗೆ ಸೇರಲು ಜೋಸ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಬಟ್ಲರ್ ಸಾಧನೆ

ಜೋಸ್‌ ಬಟ್ಲರ್‌ ಇಂಗ್ಲೆಂಡ್ ಬ್ಯಾಟಿಂಗ್‌ ವಿಭಾಗಕ್ಕೆ ಆನೆ ಬಲ ನೀಡಿರುವ ಆಟಗಾರ. ಇವರು ತಮ್ಮ ಸ್ಫೋಟಕ ಆಟದಿಂದಲೇ ತಂಡಕ್ಕೆ ನೆರವಾಗಿದ್ದಾರೆ. ಇವರು ಇಂಗ್ಲೆಂಡ್ ಪರ 129 ಟಿ20 ಪಂದ್ಯಗಳಲ್ಲಿ 3389 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 25 ಅರ್ಧಶತಕಗಳು ಸೇರಿವೆ. ಬಟ್ಲರ್ ನಾಯಕತ್ವದಲ್ಲಿ, ಇಂಗ್ಲೆಂಡ್ 2022 ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು.

Story first published: Tuesday, January 14, 2025, 13:40 [IST]
Other articles published on Jan 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+