For Quick Alerts
ALLOW NOTIFICATIONS  
For Daily Alerts
 

Jos Buttler: ಇಂಗ್ಲೆಂಡ್‌ ಕ್ರಿಕೆಟ್‌ನಲ್ಲಿ ಬೀಸುತ್ತಾ ಬದಲಾವಣೆಯ ಗಾಳಿ: ನಾಯಕತ್ವ ತ್ಯಜಿಸುತ್ತಾರಾ ಬಟ್ಲರ್

ಬುಧವಾರ ಲಾಹೋರ್‌ನಲ್ಲಿ ಅಫ್ಘಾನಿಸ್ತಾನ ತಂಡ ಇತಿಹಾಸ ಬರೆದಿದೆ. ಅಂದು ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ ಜನಕರಿಗೆ ಸೋಲಿಸಿದ್ದ, ಅಫ್ಘಾನಿಸ್ತಾನ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಇದೇ ಸಾಧನೆ ಮಾಡಿದೆ. ಇಂಗ್ಲೆಂಡ್‌ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೈ ಚೆಲ್ಲಿತು. ಈ ಸೋಲಿನಿಂದ ಇಂಗ್ಲೆಂಡ್‌ ಕ್ಯಾಂಪ್‌ನಲ್ಲಿ ಸೂತಕದ ಛಾಯೆ ಕಾಣಿಸಿಕೊಂಡಿದೆ. ಇಂಗ್ಲೆಂಡ್‌ ನಾಯಕ ಜೋಸ್‌ ಬಟ್ಲರ್‌ ನಾಯಕತ್ವ ತ್ಯಜಿಸುತ್ತಾರಾ ಎಂಬ ಪ್ರಶ್ನೆಗಳು ಈಗ ಮನೆ ಮಾಡಿವೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 325 ರನ್‌ ಸೇರಿಸಿತು. ಈ ವೇಳೆ ಆಂರಭಿಕ ಇಬ್ರಾಹಿಂ ಜರ್ದಾನ್ ದಾಖಲೆಯ ಇನಿಂಗ್ಸ್‌ ಕಟ್ಟಿ ತಂಡಕ್ಕೆ ನೆರವಾದರು. ಬೃಹತ್ ಮೊತ್ತವನ್ನು ಚೇಸ್ ಮಾಡಿದ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಜೋ ರೂಟ್‌ ಶತಕ ಸಿಡಿಸಿದರು. ಆದರೆ ಇವರ ಆಟ ಗೆಲುವಿಗೆ ಸಾಕಾಗಾಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 317 ರನ್‌ ಸೇರಿಸಿ ಸೋಲು ಕಂಡಿತು. ಐಸಿಸಿ ಟೂರ್ನಿಯಲ್ಲಿ ಇಂಗ್ಲೆಂಡ್‌, ಅಫ್ಘಾನಿಸ್ತಾನ ವಿರುದ್ಧ ಎರಡನೇ ಸೋಲನ್ನು ಕಂಡಿತು.

Jos Buttler s Captaincy Under Question as England Faces Champions Trophy Setback

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಬಳಿಕ ಇಂಗ್ಲೆಂಡ್‌ ನಾಯಕ ಜೋಸ್‌ ಬಟ್ಲರ್, ನಾಯಕತ್ವ ತ್ಯಜಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಜೋಸ್‌ ಉತ್ತರ ನೀಡಿದ್ದಾರೆ. "ನಾನು ಈಗ ಯಾವುದೇ ಭಾವನಾತ್ಮಕ ಹೇಳಿಕೆ ನೀಡಲು ಸಿದ್ಧನಿಲ್ಲ. ಈ ಬಗ್ಗೆ ಈಗಲೇ ಏನನ್ನಾದ್ರೂ ಹೇಳುವುದು ಕಷ್ಟ. ಆದರೆ ಭವಿಷ್ಯದಲ್ಲಿ ಎಲ್ಲ ಸಾಧ್ಯತೆಗಳು ತೆರೆದುಕೊಂಡಿವೆ. ಸದ್ಯ ನಾನು ನಾಯಕತ್ವವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ. ಇನ್ನು ಕೆಲವರು ನಾಯಕತ್ವ ನನ್ನಗೆ ಸರಿ ಹೊಂದುವುದಿಲ್ಲ ಎಂದು ಹೇಳುತ್ತಾರೆ ಆದರೆ ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ಗೆ ಕೊನೆಯ ಸ್ಥಾನ

ಚಾಂಪಿಯನ್ಸ್‌ ಟ್ರೋಫಿ "ಬಿ" ಗುಂಪಿನ ಪಂದ್ಯದಲ್ಲಿ ಸ್ತಾನ ಪಡೆದಿರುವ ಇಂಗ್ಲೆಂಡ್‌ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ ಸೋಲು ಕಂಡಿದ್ದ ಆಂಗ್ಲರು, ಎರಡನೇ ಪಂದ್ಯದಲ್ಲಿ 8 ರನ್‌ಗಳಿಂದ ಅಫ್ಘಾನಿಸ್ತಾನ ವಿರುದ್ಧ ಆಘಾತ ಅನುಭವಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಕೊನೆಯ ಸ್ಥಾನದಲ್ಲಿದೆ. ಇನ್ನು ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಮಾರ್ಚ್‌ 1 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳುವ ಇರಾದೆ ಇಂಗ್ಲೆಂಡ್ ತಂಡದ್ದಾಗಿದೆ.

Jos Buttler s Captaincy Under Question as England Faces Champions Trophy Setback

ನಾಯಕನಾಗಿ ಬಟ್ಲರ್ ಸಾಧನೆ

ಇಂಗ್ಲೆಂಡ್‌ ತಂಡದ ನಾಯಕನಾಗಿ ಜೋಸ್‌ ಬಟ್ಲರ್ ಸಾಧನೆ ಹೇಳಿಕೊಳ್ಳುವಂತದ್ದೇನು ಇಲ್ಲ. ಇವರು ತಂಡವನ್ನು 44 ಪಂದ್ಯಗಳಲ್ಲಿ ಮುನ್ನಡೆಸಿದ್ದು, ತಂಡ 18 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 25 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಇವರ ಗೆಲುವಿನ ಸರಾಸರಿ 41.86 ಆಗಿದೆ.

Story first published: Thursday, February 27, 2025, 9:39 [IST]
Other articles published on Feb 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+