For Quick Alerts
ALLOW NOTIFICATIONS  
For Daily Alerts
 

IPL 2025: ಆರ್‌ಸಿಬಿಯಲ್ಲಿದ್ದರೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದೂ ಪಂದ್ಯವನ್ನಾಡದ ಸ್ಟಾರ್ ಬೌಲರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯುವ ಹಾಗೂ ಅನುಭವಿ ಆಟಗಾರರನ್ನು ಒಗ್ಗೂಡಿಸಿ ಹೊಸ ತಂಡವನ್ನು ರಚಿಸಿದೆ. ಐಪಿಎಲ್ 2025ರ ಚಾಂಪಿಯನ್ ಆಗುವ ಎಲ್ಲಾ ಅವಕಾಶವನ್ನು ಆರ್‌ಸಿಬಿ ಹೊಂದಿದೆ. ಆದರೆ, ಆರ್‌ಸಿಬಿ ಆಟಗಾರರ ಪ್ರದರ್ಶನದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.

ಆರ್‌ಸಿಬಿ ಫ್ರಾಂಚೈಸಿ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮೊಹಮ್ಮದ್ ಸಿರಾಜ್, ವಿಲ್ ಜಾಕ್ವೆಸ್ ಅವರಂತಹ ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಮಾತ್ರ ಆರ್‌ಸಿಬಿ ಉಳಿಸಿಕೊಂಡಿತ್ತು. ಇದಾದ ನಂತರ ನಡೆದ ಮೆಗಾ ಹರಾಜಿನಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್‌ರೌಂಡರ್ ಆಟಗಾರರಿಗೆ ಒತ್ತು ನೀಡುವ ಮೂಲಕ ಆರ್‌ಸಿಬಿ ಬಲಿಷ್ಠ ತಂಡವನ್ನು ಕಟ್ಟಿದೆ.

Josh Hazlewood Despite Being in RCB Squad Never Played a Match at Chinnaswamy Stadium

ಈ ಬಾರಿ ಮೆಹಾ ಹರಾಜಿನಲ್ಲಿ ಆರ್‌ಸಿಬಿ ಬೌಲಿಂಗ್‌ಗೆ ಹೆಚ್ಚು ಗಮನ ನೀಡಿದೆ. ಆರ್‌ಸಿಬಿ ಫ್ರಾಂಚೈಸಿಯು ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್, ಲುಂಗಿ ಎನ್‌ಗಿಡಿ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಹ್ಯಾಜಲ್‌ವುಡ್ ಆರ್‌ಸಿಬಿಯ ಹಳೆಯ ಆಟಗಾರರಾಗಿದ್ದರು. ಅವರು ಐಪಿಎಲ್ 2022 ಮತ್ತು 2023ರ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಭಾಗವಾಗಿದ್ದರು. ಗಾಯದ ಕಾರಣ ಅವರು ಐಪಿಎಲ್ 2024 ರಿಂದ ಹೊರಗುಳಿದಿದ್ದರು.

ಇದೀಗ ಮತ್ತೊಮ್ಮೆ ಜೋಶ್ ಹ್ಯಾಜಲ್‌ವುಡ್ ಅವರ ಮೇಲೆ ನಂಬಿಕೆ ಇಟ್ಟು ಮೆಗಾ ಹರಾಜಿನಲ್ಲಿ 12.50 ಕೋಟಿ ರೂ. ನೀಡುವ ಮೂಲಕ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಇಲ್ಲಿಯವರೆಗೆ ಒಟ್ಟು 27 ಐಪಿಎಲ್ ಪಂದ್ಯಗಳನ್ನು ಆಡಿದ್ದು, 23.14 ರ ಸರಾಸರಿ ಮತ್ತು 8.05 ರ ಆರ್ಥಿಕತೆಯಲ್ಲಿ ಒಟ್ಟು 35 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ 25 ರನ್‌ಗಳಿಗೆ 4 ವಿಕೆಟ್‌ಗಳು. ಆದರೆ ಆರ್‌ಸಿಬಿ ಪರ 15 ಪಂದ್ಯಗಳನ್ನಾಡಿದ್ದು, 23 ವಿಕೆಟ್ ಕಬಳಿಸಿದ್ದಾರೆ. ಆದರೆ ಅವರು ಒಮ್ಮೆಯೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದಿಲ್ಲ.

ಆರ್‌ಸಿಬಿ ಪರ 15 ಪಂದ್ಯಗಳನ್ನು ಆಡಿರುವ ಜೋಶ್ ಹ್ಯಾಜಲ್‌ವುಡ್ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಒಂದೇ ಒಂದು ಐಪಿಎಲ್ ಪಂದ್ಯ ಅಥವಾ ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ. ಆರ್‌ಸಿಬಿಯ ತವರು ಮೈದಾನದಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದೀಗ ಐಪಿಎಲ್ 2025 ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಅವರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Story first published: Tuesday, December 3, 2024, 7:00 [IST]
Other articles published on Dec 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+