IPL 2025: ಐಪಿಎಲ್ ಆರಂಭವಾಗುವ ಮುನ್ನವೇ ಆರ್‌ಸಿಬಿಗೆ ಪೆಟ್ಟು: ಸ್ಟಾರ್ ಆಟಗಾರನಿಗೆ ಗಾಯ
ಇಂಡಿಯನ್ ಪ್ರೀಮಿಯರ್ ಲೀಗ್ ಒಂದು ವಾರ ಮುಂದೂಡಲ್ಪಟ್ಟಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲು ಮುಂದೂಡಲಾಗಿದೆ. ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಸ್ಥಗಿತ ಗೊಳಿಸಿದ ಬಿಸಿಸಿಐ, ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಆದರೆ ಈಗ ಪರಿಸ್ಥಿತಿ ಶಾಂತವಾಗುವಂತೆ ಕಾಣುತ್ತದೆ. ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗಿದೆ. ಹೀಗಾಗಿ ಐಪಿಎಲ್ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.
ಐಪಿಎಲ್ ಒಂದು ವಾರ ಮುಂದೂಡಲ್ಪಟ್ಟ ಬಳಿಕ ವಿದೇಶಿ ಆಟಗಾರರು ಹಾಗೂ ದೇಶೀಯ ಆಟಗಾರರು ತವರಿನತ್ತ ಮುಖ ಮಾಡಿದ್ದಾರೆ. ಅಲ್ಲದೆ ಬಿಸಿಸಿಐ, ಐಪಿಎಲ್ ಮಾಲೀಕರಿಗೆ ಆಟಗಾರರನ್ನು ಕರೆಸಿಕೊಳ್ಳುವಂತೆ ಸೂಚನೆ ನೀಡಿದೆ. ಈ ವೇಳೆ ಆರ್‌ಸಿಬಿ ಸಹ ತನ್ನ ಸ್ಟಾರ್ ಆಟಗಾರರನ್ನು ತವರಿಗೆ ಕಳುಹಿಸಿದೆ. ಈಗ ಈ ಆಟಗಾರರ ಗುಂಪಿನಲ್ಲಿ ಒಬ್ಬ ಸ್ಟಾರ್ ಪ್ಲೇಯರ್ ಆರ್‌ಸಿಬಿ ಕ್ಯಾಂಪ್ ಸೇರುವುದು ಡೌಟ್ ಎಂದು ಹೇಳಲಾಗುತ್ತಿದೆ.

ಆ ಸ್ಟಾರ್ ಪ್ಲೇಯರ್ ಯಾರು?
ಆರ್‌ಸಿಬಿ ತಂಡದ ಸ್ಟಾರ್ ಪ್ಲೇಯರ್ ಜೋಶ್ ಹ್ಯಾಜಲ್‌ವುಡ್ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಐಪಿಎಲ್ 2025ರಲ್ಲಿ ಅಮೋಘ ಪ್ರದರ್ಶನ ನೀಡಿ ತಮ್ಮ ಪ್ರಭಾವ ಬೀರಿದ್ದರು. ಈಗ ಇವರಿಗೆ ಗಾಯವಾಗಿರುವ ಸುದ್ದಿ ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇವರು ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿರಲಿಲ್ಲ. ಇನ್ನು ಎಲ್‌ಎಸ್‌ಜಿ ಪಂದ್ಯಕ್ಕೂ ಮುನ್ನ ಇವರು ಟೂರ್ನಿಯಿಂದ ಹೊರ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈಗಾಗಲೇ ವಿದೇಶಿ ಆಟಗಾರರು ತವರಿನತ್ತ ಮುಖ ಮಾಡಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯಂತೆ ಜೋಶ್ ಹ್ಯಾಜಲ್‌ವುಡ್ ಮುಂದಿನ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ಲೇಯರ್ ಮೇ 16 ರಿಂದ ಆರಂಭವಾಗುವ ಸಾಧ್ಯತೆ ಇರುವ ಟೂರ್ನಿಯಿಂದ ದೂರ ಉಳಿಯಲಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಸಹ ಆಟಗಾರರ ಮೇಲೆ ಯಾವುದೇ ಒತ್ತಡವನ್ನು ಹೇರುವುದಿಲ್ಲ ಎಂದು ತಿಳಿದು ಬಂದಿದೆ.
ಜೋಶ್ ಹೇಳಿದ್ದೇನು?
ಈ ಬಗ್ಗೆ ಹೇಳಿಕೆ ನೀಡಿರುವ ಜೋಶ್ ತಾವು ಐಪಿಎಲ್ ವೇಳೆ ಗಾಯದಿಂದ ಚೇತರಿಕೆಯತ್ತ ಗಮನ ಹರಿಸಿದ್ದಾಗಿ ತಿಳಿಸಿದ್ದಾರೆ. ತಮ್ಮ ಫಿಟ್ನೆಸ್ ಮೇಲೆ ಹೆಚ್ಚಿನ ಒತ್ತು ನೀಡಿದ್ದಾಗಿ ಜೋಶ್ ತಿಳಿಸಿದ್ದಾರೆ. ಇವರು ಈ ವರ್ಷ ಗಾಯಕ್ಕೆ ತುತ್ತಾಗಿದ್ದರಿಂದ ಕೆಲವು ಸರಣಿಗಳನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ಇವರ ಅವಶ್ಯಕತೆ ಜೂನ್‌ನನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ತಂಡಕ್ಕೆ ಬಹುವಾಗಿ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಇವರು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಇವರ ಅವಶ್ಯಕತೆ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚಾಗಿದೆ. ಪ್ರಸಕ್ತ ವರ್ಷ ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್ ಅಮೋಘ ದಾಳಿ ಸಂಘಟಿಸಿ 10 ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications