Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Gabba Test: ಆಸ್ಟ್ರೇಲಿಯಾ ಗೆಲುವಿನ ಮನೋಬಲ ವೃದ್ಧಿ: ತಂಡಕ್ಕೆ ಎಂಟ್ರಿ ಪಡೆದ RCB ವೇಗಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಶನಿವಾರ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಗೆಲುವು ದಾಖಲಿಸಲು ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಟೀಮ್ ಇಂಡಿಯಾಗೆ ಕಾಡಲು ಆಸ್ಟ್ರೇಲಿಯಾದ ಇನ್ನೋಬ್ಬ ವೇಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಗಾಯದ ಕಾರಣದಿಂದ ತಂಡದಿಂದ ದೂರ ಉಳಿದಿದ್ದ ವೇಗಿ ಈಗ ಮತ್ತೆ ತಂಡ ಸೇರಿರುವುದು ಆಸ್ಟ್ರೇಲಿಯಾ ತಂಡದ ಮನೋಬಲವನ್ನು ಹೆಚ್ಚಿಸಿದೆ.

ಆಸ್ಟ್ರೇಲಿಯಾ ಹಾಗೂ ಭಾರತದ ನಡುವಣ ಮೂರನೇ ಟೆಸ್ಟ್ ಗಬ್ಬಾದಲ್ಲಿ ನಡೆಯಲಿದೆ. ಈ ವೇಳೆ ಆರ್‌ಸಿಬಿ ತಂಡದ ಸ್ಟಾರ್‌ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ ತಂಡಕ್ಕೆ ಎಂಟ್ರಿ ನೀಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಹ್ಯಾಜಲ್‌ವುಡ್‌ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಕಾಟ್ ಬೋಲ್ಯಾಂಡ್ ತಂಡದಿಂದ ಹೊರ ನಡೆದಿದ್ದಾರೆ. ಜೋಶ್‌ ಹ್ಯಾಜಲ್‌ವುಡ್ ಚೇತರಿಸಿಕೊಂಡಿದ್ದು ನಿಜಕ್ಕೂ ತಂಡದ ಬೌಲಿಂಗ್ ವಿಭಾಗಕ್ಕೆ ಬೂಸ್ಟ್‌ ನೀಡಿದಂತೆ ಆಗುತ್ತದೆ. ಸ್ನಾಯು ಸೆಳೆತದಿಂದ ಹ್ಯಾಜಲ್‌ವುಡ್‌ ಎರಡನೇ ಟೆಸ್ಟ್‌ ಮಿಸ್ ಮಾಡಿಕೊಂಡಿದ್ದರು.

Josh Hazlewood Returns Boosts Australia s Morale for Third Test Against India

ಆರ್‌ಸಿಬಿ ವೇಗಿ ಫಿಟ್‌

ಆರ್‌ಸಿಬಿಯ ವೇಗಿ ಚೇತರಿಸಿಕೊಂಡು ತಂಡಕ್ಕೆ ಸೇರಿರುವುದು ಆಸ್ಟ್ರೇಲಿಯಾ ಬೌಲಿಂಗ್ ವಿಭಾಗಕ್ಕೆ ಆನೆ ಬಲ ತುಂಬಲಿದೆ. ಸ್ಕಾಟ್ ಬೋಲ್ಯಾಂಡ್ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 2 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದು ಬೀಗಿದ್ದರು. ಇವರ ಸ್ಥಾನದಲ್ಲಿ ಈಗ ಜೋಶ್‌ ಹ್ಯಾಜಲ್‌ವುಡ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಗುರುವಾರ ಅಭ್ಯಾಸ

ಹ್ಯಾಜಲ್‌ವುಡ್‌ ಬ್ರಿಸ್ಬೇನ್‌ನಲ್ಲಿ ಗುರುವಾರ ಫಿಟ್ನೆಸ್‌ ಸಾಬೀತು ಪಡಿಸಿದರು. ಇರುವ ವ್ಯವಸ್ಥೆಗಳಲ್ಲೇ ಇವರು ತಾವು ಫಿಟ್‌ ಆಗಿರುವುದಾಗಿ ತೋರಿಸಿದರು. ಅಲ್ಲದೆ ತಮ್ಮ ನೈಜ ಬೌಲಿಂಗ್ ಲೈನ್‌ ಅಪ್‌ನಲ್ಲಿ ಬೌಲಿಂಗ್ ನಡೆಸಿದರು. ಇದೇ ವೇಳೆ ಇವರು ಅಭ್ಯಾಸದ ವೇಳೆ ಮಿಚೆಲ್ ಸ್ಟಾರ್ಕ್ ಅವರೊಂದಿಗೆ ಬೌಲ್‌ ಹಂಚಿಕೊಂಡರು. ಹ್ಯಾಜಲ್‌ವುಡ್‌ ಬೌಲಿಂಗ್ ಮೇಲೆ ಬೌಲಿಂಗ್‌ ಕೋಚ್‌ ಡೇನಿಯಲ್ ವೆಟ್ಟೋರಿ ನಿಗಾ ಇಟ್ಟಿದ್ದರು.

Josh Hazlewood Returns Boosts Australia s Morale for Third Test Against India

ಹ್ಯಾಜಲ್‌ವುಡ್‌ ಸಂಪೂರ್ಣ ಚೇತರಿಸಿಕೊಂಡಂತೆ ಕಂಡು ಬಂದಿದ್ದಾರೆ. ಇವರ ಮೇಲೆ ವೈದ್ಯಕೀಯ ತಂಡದ ಮೇಲ್ವಿಚಾರಣೆ ನಡೆದಿದೆ. ಆಡಿಲೇಡ್‌ನಲ್ಲೂ ಇವರು ಕೆಲವು ಓವರ್‌ ಬೌಲಿಂಗ್ ನಡೆಸಿದ್ದರು ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ತಿಳಿಸಿದ್ದಾರೆ.

ಹ್ಯಾಜಲ್‌ವುಡ್‌ ತಂಡಕ್ಕೆ ವಾಪಸ್‌ ಆಗುತ್ತಾರೆ ಎಂದರೆ ಬೋಲೆಂಡ್‌ ತಂಡದಿಂದ ಹೊರ ನಡೆಯುತ್ತಾರೆ ಎಂಬುವುದು ಸ್ಪಷ್ಟ. ಇವರಿಗೆ ನಾಲ್ಕನೇ ಹಾಗೂ ಐದನೇ ಟೆಸ್ಟ್‌ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಇವೆ. ಬೋಲೆಂಡ್‌ ಕ್ಷಮತೆಯನ್ನು ಗುರುತಿಸಿದ ತಂಡ ಇವರಿಗೆ ಮತ್ತೆ ಅವಕಾಶ ನೀಡುವ ಸಾಧ್ಯತೆಗಳು ಇವೆ ಎಂಬುದು ಕಮಿನ್ಸ್‌ ಅವರ ಮಾತಿನಿಂದ ತಿಳಿದು ಬರುತ್ತಿದೆ.

ಬೋಲೆಂಡ್‌ ಅವರನ್ನು ತಂಡದಿಂದ ಹೊರಗಿಡುವುದು ದೊಡ್ಡ ನಿರ್ಧಾರ. ಇವರು ಬೆಂಚ್‌ ಮೇಲೆ ಕೊಂಚ ದಿನ ಕಾಯಬೇಕಾಗುತ್ತದೆ. ಇವರು ಸಿಕ್ಕ ಅವಕಾಶದಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್‌ ತಿಳಿಸಿದ್ದಾರೆ.

Story first published: Friday, December 13, 2024, 9:09 [IST]
Other articles published on Dec 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+