Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಕ್ಯಾಂಪ್‌ "ಜೋಶ್‌" ಹೆಚ್ಚಿಸಿದ ಆಸ್ಟ್ರೇಲಿಯಾ ವೇಗಿ

ಆರ್‌ಸಿಬಿ ಲೀಗ್‌ ಹಂತದ ಮುಂದಿನ ಪಂದ್ಯವನ್ನು ಇದೇ 27 ರಂದು ಲೀಗ್‌ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಲಕ್ನೋ ಮೈದಾನ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದು ಅಗ್ರ ಎರಡು ಸ್ಥಾನಗಳನ್ನು ಭದ್ರ ಪಡಿಸಿಕೊಳ್ಳುವ ಇರಾದೆ ಆರ್‌ಸಿಬಿ ತಂಡದ್ದಾಗಿದೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಕ್ಯಾಂಪ್‌ನಿಂದ ಗುಡ್‌ ನ್ಯೂಸ್‌ ಬಂದಿದೆ. ಈ ಸುದ್ದಿ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಲಿದೆ. ಹಾಗಿದ್ದರೆ ಆ ಸುದ್ದಿ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಆರ್‌ಸಿಬಿ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಈ ಬಾರಿ ಆರ್‌ಸಿಬಿ ಆಡಿದ 13 ಪಂದ್ಯಗಳಲ್ಲಿ 8 ಜಯ ಸಾಧಿಸಿದ್ದು, 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯವನ್ನು ಗೆದ್ದು ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ. ಈ ವೇಳೆ ಆರ್‌ಸಿಬಿ ತಂಡಕ್ಕೆ ಸ್ಟಾರ್‌ ವೇಗದ ಬೌಲರ್‌ ಎಂಟ್ರಿ ನೀಡಿದ್ದಾರೆ.

Josh Hazlewood Returns to Boost RCB Ahead of Final League Match Against LSG

ಭಾರತ ಹಾಗೂ ಪಾಕ್‌ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಒಂದು ವಾರ ಮುಂದೂಡಲ್ಪಟ್ಟಿದ್ದ ಐಪಿಎಲ್‌ ಪುನರಾರಂಭವಾಗಿದೆ. ಈ ವೇಳೆ ತಮ್ಮ ತಮ್ಮ ತವರಿಗೆ ಮರಳಿದ್ದ ಸ್ಟಾರ್‌ ಆಟಗಾರರು ಮತ್ತೆ ತಮ್ಮ ಫ್ರಾಂಚೈಸಿ ಸೇರಿದ್ದಾರೆ. ಆದರೆ ಆರ್‌ಸಿಬಿ ತಂಡದ ಆ ಒಬ್ಬ ಪ್ಲೇಯರ್‌ ಇನ್ನು ತವರಿನಿಂದ ಭಾರತಕ್ಕೆ ಬಂದಿರಲಿಲ್ಲ. ಆದರೆ ಈಗ ಅವರು ಆರ್‌ಸಿಬಿ ಕ್ಯಾಂಪ್‌ ಸೇರಿದ್ದು ತಂಡದ ಜೋಶ್‌ ಹೆಚ್ಚಾಗಿದೆ. ಹೌದು ತಂಡವನ್ನು ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ ಎಂಟ್ರಿ ಪಡೆದಿದ್ದಾರೆ.

ಗ್ರ್ಯಾಂಡ್‌ ಎಂಟ್ರಿ

ಪಂದ್ಯದ ಗತಿಯನ್ನೇ ಬುಡಮೇಲು ಮಾಡುವ ಬೌಲರ್‌ ಆಗಮನದಿಂದ ಆರ್‌ಸಿಬಿ ಜೋಶ್‌ ನಿಜಕ್ಕೂ ಹೆಚ್ಚಾಗಿದೆ. ಜೋಶ್‌ ಹ್ಯಾಜಲ್‌ವುಡ್‌ ಕರಾರುವಕ್ ದಾಳಿಗೆ ಹೆಸರುವಾಸಿ. ಇವರು ಆರ್‌ಸಿಬಿ ತಂಡದ ಪರ ಈಗಾಗಲೇ 10 ಪಂದ್ಯಗಳನ್ನು ಆಡಿದ್ದು 17.27ರ ಸರಾಸರಿಯಲ್ಲಿ 18 ವಿಕೆಟ್‌ ಕಬಳಿಸಿದ್ದಾರೆ. ಇವರ ಪವರ್‌ ಪ್ಲೇನಲ್ಲಿ ಹಾಗೂ ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರುವಾಸಿ. ಜೋಶ್‌ ಹ್ಯಾಜಲ್‌ವುಡ್‌ ಪ್ರಸಕ್ತ ಐಪಿಎಲ್‌ನಲ್ಲಿ ಹೆಚ್ಚು ಡಾಟ್‌ ಬೌಲ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಪ್ಲೇ ಆಫ್‌ ಪಂದ್ಯಗಳನ್ನು ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಆದರೆ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಹ್ಯಾಜಲ್‌ವುಡ್‌ ತಂಡದ ಮನೋಬಲವನ್ನು ಹೆಚ್ಚಿಸಲಿದ್ದಾರೆ.

ಆರ್‌ಸಿಬಿ ಟಾರ್ಗೆಟ್‌

ಜೋಶ್‌ ಹ್ಯಾಜಲ್‌ವುಡ್‌ ಆಗಮನದಿಂದ ಆರ್‌ಸಿಬಿ ಹುಮ್ಮಸ್ಸು ಇಮ್ಮಡಿಯಾಗಿದೆ. ಬೆಂಗಳೂರು ತಂಡ ಈ ಬಾರಿ ಐಪಿಎಲ್‌ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನದ ಮೇಲೆ ಕಣ್ಣು ನೆಟ್ಟಿದೆ. ಎಲ್‌ಎಸ್‌ಜಿ ವಿರುದ್ಧದ ಲೀಗ್‌ ಹಂತದ ಕೊನೆಯ ಪಂದ್ಯ ಗೆದ್ದು ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ.

Story first published: Sunday, May 25, 2025, 14:43 [IST]
Other articles published on May 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+