For Quick Alerts
ALLOW NOTIFICATIONS  
For Daily Alerts
 

Josh Hazlewood: ಎರಡನೇ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾ ಆಘಾತ: ಆರ್‌ಸಿಬಿ ವೇಗಿ ಔಟ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 6 ರಿಂದ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಒತ್ತಡದಲ್ಲಿ ಆಸೀಸ್‌ ಪಡೆ ಇದೆ. ಈಗಾಗಲೇ ಮೊದಲ ಟೆಸ್ಟ್‌ ಪಂದ್ಯ ಸೋತಿರುವ ಆಸ್ಟ್ರೇಲಿಯಾ, ಎರಡನೇ ಪಂದ್ಯದಲ್ಲಿ ಗೆಲುವಿನ ಕನಸು ಕಾಣುತ್ತಿದೆ. ಈ ಟೆಸ್ಟ್‌ ಆರಂಭಕ್ಕೂ ಮುನ್ನ ಕಾಂಗರೂ ಪಡೆಗೆ ಆಘಾತವಾಗಿದೆ. ಆಡಿಲೇಡ್‌ನಲ್ಲಿ ನಡೆಯಲಿರುವ ಟೆಸ್ಟ್‌ ಡೇ-ಆಂಡ್ಯ ನೈಟ್‌ ಆಗಿರಲಿದೆ. ಹೀಗಾಗಿ ಈ ಟೆಸ್ಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿಯಂತೆ ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ ಎರಡನೇ ಟೆಸ್ಟ್‌ನಿಂದ ದೂರ ಉಳಿದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಸೀನ್ ಅಬಾಟ್ ಮತ್ತು ಬ್ರೆಂಡನ್ ಡಾಗೆಟ್ ತಂಡವನ್ನು ಸೇರಿದ್ದಾರೆ. ಆದರೆ ಇವರಿಬ್ಬರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟ.

Josh Hazlewood Ruled Out of Adelaide Pink Ball Test Against India Big Setback for Australia

ಜೋಶ್‌ ಹ್ಯಾಜಲ್‌ವುಡ್‌ ಅನುಪಸ್ಥಿತಿಯಲ್ಲಿ ತಂಡ ಸೇರಿರುವ ಇಬ್ಬರು ಆಟಗಾರರು ತಂಡ ಸೇರುವುದು ಕಷ್ಟ. ಈಗಾಗಲೇ ಸ್ಕಾಟ್ ಬೋಲ್ಯಾಂಡ್ ತಂಡ ಸೇರಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹ್ಯಾಜಲ್‌ವುಡ್ ಸ್ಥಿರ ಬೌಲಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದರು. ಇವರು ಪರ್ತ್‌ ಟೆಸ್ಟ್‌ನ ಮೊದಲು ಇನಿಂಗ್ಸ್‌ನಲ್ಲಿ ನಾಲ್ಕು ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಪಡೆದಿದ್ದಾರೆ. ಇದೀಗ ಅವರ ಅನುಪಸ್ಥಿತಿ ತಂಡ ದೊಡ್ಡ ಪೆಟ್ಟು ಬಿದ್ದಿದೆ.

ಗೆಲುವಿನ ಅನಿವಾರ್ಯತೆ

ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು 150 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತ ಸಹ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಇನಿಂಗ್ಸ್‌ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ನಡೆಸಿದ್ದರಿಂದ, ಆತಿಥೇಯ ತಂಡಕ್ಕೆ ಸವಾಲಿನ ಗುರಿಯನ್ನು ನೀಡಲಾಯಿತು. ಆದರೆ ಆಸೀಸ್ ಬ್ಯಾಟರ್‌ಗಳು ಟೀಮ್ ಇಂಡಿಯಾದ ಉತ್ತಮ ಬೌಲಿಂಗ್‌ ಎದುರಿಸುವಲ್ಲಿ ವಿಫಲರಾಗಿ ಪಂದ್ಯ ಸೋತರು.

Josh Hazlewood Ruled Out of Adelaide Pink Ball Test Against India Big Setback for Australia

ಈ ಟೆಸ್ಟ್‌ ಸರಣಿ ಉಭಯ ತಂಡಗಳಿಗೂ ಮಹತ್ವದಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ತಲುಪುವ ದೃಷ್ಟಿಯಿಂದ ಈ ಟೆಸ್ಟ್‌ ಸರಣಿ ಮಹತ್ವದಾಗಿದೆ. ಆಸ್ಟ್ರೇಲಿಯ ತಂಡ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯನ್ ಪರ 71 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 278 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 138 ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 67 ವಿಕೆಟ್‌ ಕಬಳಿಸಿದ್ದಾರೆ.

ಐಪಿಎಲ್‌ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಭಾರೀ ಮೊತ್ತವನ್ನು ನೀಡಿ ಆಸ್ಟ್ರೇಲಿಯಾದ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇವರ ಆಗಮನದಿಂದ ಆರ್‌ಸಿಬಿ ಬೌಲಿಂಗ್‌ ಲೈನ್‌ ಅಪ್‌ ಬಲಿಷ್ಠವಾಗಿರಲಿದೆ. ಇವರ ಪವರ್ ಪ್ಲೇ ಹಾಗೂ ಡೆತ್‌ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಬಲ್ಲರು.

Story first published: Saturday, November 30, 2024, 11:29 [IST]
Other articles published on Nov 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+