Turning Point: ಮುಂಬೈ ಗೆಲುವಿನ ಕನಸಿಗೆ ಪೆಟ್ಟು ನೀಡಿದ್ದೇ ಆರ್‌ಸಿಬಿ ವೇಗಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ಮುಂದುವರೆಸಿದೆ. ಮುಂಬೈನ ವಾಂಖೇಡೆ ಅಂಗಳದಲ್ಲಿ 10 ವರ್ಷಗಳ ಬಳಿಕ ಗೆಲುವಿನ ನಗೆ ಬೀರಿದೆ. ಆರ್‌ಸಿಬಿ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಮುಂಬೈ ಎಡವಿದೆ. 12 ರನ್‌ಗಳಿಂದ ಪಂದ್ಯ ಸೋತ ಮುಂಬೈ ಇಂಡಿಯನ್ಸ್ 4 ಸೋಲು ಕಂಡಿದೆ. ಒಂದು ಹಂತದಲ್ಲಿ ಮುಂಬೈ ಮುಷ್ಠಿಯಲ್ಲಿದ್ದ ಗೆಲುವನ್ನು ಕಸಿದು ಕೊಂಡ ಕೀರ್ತಿ ಆರ್‌ಸಿಬಿ ಬೌಲರ್‌ಗಳ ಸಲ್ಲುತ್ತದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 ರನ್ ಸೇರಿಸಿ ಸೋಲು ಕಂಡಿದೆ. ಮುಂಬೈ ಪ್ರಸಕ್ತ ಆವೃತ್ತಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 1 ಜಯ, 4 ಸೋಲು ಕಂಡಿದ್ದು, 2 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನು ಅಮೋಘ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ 4 ಪಂದ್ಯಗಳಲ್ಲಿ 3 ಜಯ, 1 ಸೋಲು ದಾಖಲಿಸಿದ್ದು 6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಮುಂಬೈ 12 ಓವರ್‌ಗಳ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 99 ರನ್ ಕಲೆ ಹಾಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾದವರೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ, ಈ ಜೋಡಿ ಆರ್‌ಸಿಬಿ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿತು. ರನ್ ರೇಟ್ ಒಂದು ಬದಿಯಲ್ಲಿ ಆಕಾಶದತ್ತ ಮುಖ ಮಾಡಿದ್ದರೆ, ಇವರು ಇನ್ನೊಂದು ಬದಿಯಲಲ್ಲಿ ಮುಗಿಲೆತ್ತರದ ಸಿಕ್ಸರ್‌ಗಳನ್ನು ಬಾರಿಸಿ ರನ್ ವೇಗವನ್ನ ತಗ್ಗಿಸುವ ಕಾರ್ಯಕ್ಕೆ ಮುಂದಾದರು.
ಪಂದ್ಯಕ್ಕೆ ತಿರುವು ನೀಡಿದ್ದು ಇವರೇ...
ಸುಯೇಶ್ ಶರ್ಮಾ ಎಸೆದ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ತಿಲಕ್ ವರ್ಮಾ ಆರ್ಭಟ ನಡೆಸಿದರು. 6 ಎಸೆತಗಳಲ್ಲಿ ತಿಲಕ್ 17 ರನ್ ಬಾರಿಸಿ ರನ್ ರೇಟ್ ಕೊಂಚ ತಗ್ಗಿಸುವ ಪ್ರಯತ್ನ ಮಾಡಿದರು. 14ನೇ ಓವರ್ ಜೋಶ್ ಹ್ಯಾಜಲ್‌ವುಡ್ ಮಾಡಿದರು. ವಿಶ್ವದ ಖ್ಯಾತ ಬೌಲರ್‌ನ್ನು ಹಾರ್ದಿಕ್ ಪಾಂಡ್ಯ ದಂಡಿಸಿ, 22 ರನ್ ಚಚ್ಚಿದರು. ಇಲ್ಲಿಂದ ಈ ಜೋಡಿ ಪ್ರತಿ ಓವರ್‌ನಲ್ಲೂ ಬೌಂಡರಿ ಸಿಕ್ಸರ್ ಬಾರಿಸುತ್ತಲೆ ಸಾಗಿತ್ತು. 15 ಎಸೆತಗಳಲ್ಲಿ 34 ರನ್ ಬೇಕಿದ್ದಾಗ ತಿಲಕ್ ವರ್ಮಾ ಇಲ್ಲದ ಶಾಟ್ ಬಾರಿಸಲು ಹೋಗಿ ಔಟ್ ಆದರು. ನಮನ್ ಧೀರ್ ಬರುತ್ತಿದ್ದಂತೆ ಸಿಕ್ಸರ್ ಬಾರಿಸಿ ಅಬ್ಬರಿಸಿದರು.

19ನೇ ಓವರ್ ಜೋಶ್ ಹ್ಯಾಜಲ್‌ವುಡ್ ಬೌಲ್ ಮಾಡಿದರು. ಈ ಓವರ್‌ನ ಮೊದಲ ಎಸೆತದಲ್ಲೇ ಜೋಶ್ ಮುಂಬೈ ತಂಡಕ್ಕೆ ಗೆಲುವಿನ ಕನಸಿಗೆ ಬ್ರೇಕ್ ಹಾಕಿದರು. ಜೋಶ್ ಹ್ಯಾಜಲ್‌ವುಡ್ ಲೆಗ್ ಸ್ಟಾಂಪ್ ಮೇಲೆ ಹಾಕಿದ ಚೆಂಡನ್ನು ಹಾರ್ದಿಕ್ ಪಾಂಡ್ಯ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಲು ಹೋಗಿ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಕ್ಯಾಚ್ ನೀಡಿದರು. ಇವರು ಔಟ್ ಆಗುವ ಮುನ್ನ 15 ಎಸೆತಗಳಲ್ಲಿ 42 ರನ್ ಬಾರಿಸಿ ಆರ್‌ಸಿಬಿ ಪಾಳಯದಲ್ಲಿ ಚಿಂತೆಯ ಗೆರೆ ಮೂಡಿಸಿದ್ದರು. ಆದರೆ ಜೋಶ್ ಇವರ ವಿಕೆಟ್ ಪಡೆಯುತ್ತಿದ್ದಂತೆ ಪಂದ್ಯದ ಚಿತ್ರಣವೇ ಬದಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications