AUS vs ENG: ಇಂಗ್ಲೆಂಡ್ ದಾಖಲೆಯ ಮೊತ್ತವನ್ನು ಚೇಸ್ ಮಾಡಿದ ಆಸ್ಟ್ರೇಲಿಯಾ ಇತಿಹಾಸ: ಇಂಗ್ಲಿಸ್ ಶತಕ
ಆಸ್ಟ್ರೇಲಿಯಾ ತಂಡದ ಭರವಸೆಯ ಆಟಗಾರ ಜೋಶ್ ಇಂಗ್ಲಿಸ್ ಅವರ ಅಬ್ಬರದ ಶತಕದ ನೆರವಿಂದ ಐದು ವಿಕೆಟ್‌ಗಳಿಂದ ಚಾಂಪಿನ್ಸ್ ಟ್ರೋಫಿಯ "ಬಿ" ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ದಾಖಲೆಯ ಮೊತ್ತ ಹಿಂಬಾಲಿಸದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸೀಸ್ ಶುಭಾರಂಭ ಮಾಡಿದೆ.
ಚಾಂಪಿಯನ್ಸ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಶನಿವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 8 ವಿಕೆಟ್‌ಗೆ 351 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 47.3 ಓವರ್‌ಗಳಲ್ಲಿ 5 ವಿಕೆಟ್‌ಗೆ 356 ರನ್ ಸಿಡಿಸಿ ಜಯ ಸಾಧಿಸಿತು.

ಜೋಶ್ ಇಂಗ್ಲಿಸ್ ಆರ್ಭಟ
ಆಸ್ಟ್ರೇಲಿಯಾದ 30 ವರ್ಷದ ಭರವಸೆಯ ಆಟಗಾರ ಜೋಶ್ ಇಂಗ್ಲಿಸ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ 26ನೇ ಏಕದಿನ ಪಂದ್ಯದಲ್ಲಿ ಮೊದಲ ಶತಕವನ್ನು ಬಾರಿಸಿದರು. ಅದು ಐಸಿಸಿ ಬಿಗ್ ಈವೆಂಟ್‌ನಲ್ಲಿ ತಂಡಕ್ಕೆ ಅಗತ್ಯವಿದ್ದಾಗ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಜೋಶ್ ಇಂಗ್ಲಿಸ್ ಅಬ್ಬರಿಸಿದರು. ಈ ಮೂಲಕ ಸೋಲುವ ಪಂದ್ಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು.
ಆಸ್ಟ್ರೇಲಿಯಾ ಪರ ಜೋಶ್ ಇಂಗ್ಲಿಸ್ ಕೇವಲ 84 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 113 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು.
ಭರ್ಜರಿ ಜೊತೆಯಾಟದ ಕಾಣಿಕೆ
ಐದನೇ ವಿಕೆಟ್‌ಗೆ ಜೋಶ್ ಇಂಗ್ಲಿಸ್ ಹಾಗೂ ಅಲೆಕ್ಸ್ ಕ್ಯಾರಿ ಜೋಡಿ ಅಮೋಘ ಜೊತೆಯಾಟವನ್ನು ನೀಡಿತು. ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ಜೋಡಿ 116 ಎಸೆತಗಳಲ್ಲಿ 146 ರನ್ ಸೇರಿಸಿತು. ಈ ವೇಳೆ ಅಲೆಕ್ಸ್ ಕ್ಯಾರಿ 8 ಬೌಂಡರಿ ನೆರವಿನಿಂದ 69 ರನ್ ಬಾರಿಸಿ ಔಟ್ ಆದರು.
ಎರಡು ವಿಕೆಟ್‌ಗಳನ್ನು ಬಹುವಾಗಿ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಮ್ಯಾಥ್ಯೂ ಶಾರ್ಟ್ ಹಾಗೂ ಮಾರ್ನಸ್ ಲಂಬುಶೇನ್ (47) ಜೋಡಿ 91 ಎಸೆತಗಳಲ್ಲಿ 95 ರನ್ ಸಿಡಿಸಿದರು. ಮ್ಯಾಥ್ಯೂ ಶಾರ್ಟ್ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 63 ರನ್ ಸಿಡಿಸಿ ಔಟ್ ಆದರು.

ಬೆನ್ ಡಕೆಟ್ ಶತಕ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಪರ ಆರಂಭಿಕ ಬೆನ್ ಡಕೆಟ್ ಅಬ್ಬರಿಸಿದರು. ಇವರು 143 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಸಹಾಯದಿಂದ 165 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಉಳಿದಂತೆ ಜೋ ರೂಟ್ 68, ಜೋಸ್ ಬಟ್ಲರ್ 23, ಜೋಫ್ರಾ ಆರ್ಚರ್ 21 ರನ್ ಸಿಡಿಸಿ ಅಬ್ಬರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications