For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಡಿಡಿಸಿಎಗೆ ಪತ್ರಕರ್ತ ರಜತ್ ಶರ್ಮ ಹೊಸ ಬಾಸ್

By Mahesh
ಡಿಡಿಸಿಎಗೆ ಪತ್ರಕರ್ತ ರಜತ್ ಶರ್ಮ ಹೊಸ ಬಾಸ್ | Oneindia Kananda
Journalist Rajat Sharma is new DDCA boss

ನವದೆಹಲಿ, ಜುಲೈ 02: ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರಾಗಿ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ) ನಲ್ಲಿ ನಿಯುಕ್ತಿಗೊಂಡ ಬೆನ್ನಲ್ಲೇ, ಡಿಡಿಸಿಎಯ ಹೊಸ ಬಾಸ್ ಆಗಿ ಪತ್ರಕರ್ತ ರಜತ್ ಶರ್ಮ ಆಯ್ಕೆಯಾಗಿದ್ದಾರೆ.

ಕ್ರಿಕೆಟ್ ಸಂಬಂಧಿಸಿದ ನಿರ್ಧಾರಗಳನ್ನು ಗಂಭೀರ್ ತೆಗೆದುಕೊಂಡರೆ, ಆಡಳಿತಾತ್ಮಕ ನಿರ್ಧಾರಗಳನ್ನು ಚುನಾಯಿತ ಪ್ರತಿನಿಧಿಗಳು ನೋಡಿಕೊಳ್ಳಲಿದ್ದಾರೆ ಎಂದು ಡಿಡಿಸಿಎ ಪ್ರಕಟಣೇ ಹೊರಡಿಸಿದೆ.

ಚುನಾವಣೆ ಫಲಿತಾಂಶ: ಡಿಡಿಸಿಎ ಚುನಾವಣೆ ಫಲಿತಾಂಶ ಸೋಮವಾರ (ಜುಲೈ 02)ದಂದು ಪ್ರಕಟಗೊಂಡಿದ್ದು, ರಜತ್ ಶರ್ಮ ಬಣ 12 ಸ್ಥಾನಗಳನ್ನು ಗೆದ್ದು ಜಯಭೇರಿ ಬಾರಿಸಿದೆ.

ಶರ್ಮ ಅವರಿಗೆ 1531 ಮತಗಳು ಬಂದರೆ, ಮಾಜಿ ಟೆಸ್ಟ್ ಕ್ರಿಕೆಟರ್ ಲಾಲ್ ಅವರಿಗೆ 1004 ಮತಗಳು ಸಿಕ್ಕಿವೆ, ವಕೀಲ ವಿಕಾಸ್ ಸಿಂಗ್ ಗೆ 232 ಮತಗಳು ಬಂದಿವೆ.

ಕಾರ್ಯದರ್ಶಿ ಸ್ಥಾನ ಗೆದ್ದ ವಿನೋದ್ ತಿಹಾರಾ(1374 ಮತಗಳು) ಅವರು ಮನ್ಜೀತ್ ಸಿಂಗ್ (998) ಸೋಲಿಸಿದರು. ಜಂಟಿ ಕಾರ್ಯದರ್ಶಿ ಸ್ಥಾನ ರಜನ್ ಮನ್ಚಂದಾ (1402) ಅವರಿಗೆ ಲಭಿಸಿದ್ದು, ಅವರು ಪುಷ್ಪೇಂದ್ರ ಚೌಹಾಣ್ (953) ಸೋಲಿಸಿದರು.

ಸಂಜಯ್ ಭಾರದ್ವಾಜ್, ಅಪೂರ್ವ್ ಜೈನ್ ನಿರ್ದೇಶಕರಾಗಿ ಆಯ್ಕೆಗೊಂಡರೆ, ರೇಣು ಖನ್ನ ಮಹಿಳಾ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ(ಪಿಟಿಐ)

Story first published: Tuesday, July 3, 2018, 0:10 [IST]
Other articles published on Jul 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+