'ಎಂಎಸ್‌ಎಲ್ 2018'ರ ಚಾಂಪಿಯನ್ ಆಗಿ ಮಿನುಗಿದ ಜೋಝಿ ಸ್ಟಾರ್ಸ್

ಕೇಪ್‌ಟೌನ್, ಡಿಸೆಂಬರ್ 16: ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಡಿಸೆಂಬರ್ 16) ನಡೆದ ಮಝನ್ಸಿ ಸೂಪರ್ ಲೀಗ್ 2018ರ ಫೈನಲ್ ಪಂದ್ಯದಲ್ಲಿ ಕೇಪ್ ಟೌನ್ ಬ್ಲಿಟ್ಜ್ ವಿರುದ್ಧ ಜೋಝಿ ಸ್ಟಾರ್ಸ್ ತಂಡ ಚಾಂಪಿಯನ್ ಕಿರೀಟ ಅಲಂಕರಿಸಿದೆ. ರಾಸ್ಸಿ ವ್ಯಾನ್ ಡೆರ್ ಡಸೆನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಸ್ಟಾರ್ಸ್ 8 ವಿಕೆಟ್ ಗೆಲುವನ್ನಾಚರಿಸಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕೇಪ್‌ಟೌನ್ ಬ್ಲಿಟ್ಜ್‌ಗೆ ಬ್ಯಾಟ್ಸ್ಮನ್‌ಗಳ ಬೆಂಬಲ ದೊರೆಯಲಿಲ್ಲ. ಕೈಲ್ ವೆರ್ರಿನ್ನೆ 23, ನಾಯಕ ಫಾರನ್ ಬೆಹಾರ್ಡಿಯನ್ 23 ರನ್ ನೆರವಿನೊಂದಿಗೆ ಕೇಪ್‌ಟೌನ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 113 ರನ್ ಪೇರಿಸಿತು. ಈ ವೇಳೆ ಸ್ಟಾರ್ಸ್ ಪರ ಬ್ಯೂರಾನ್ ಹೆಂಡ್ರಿಕ್ಸ್ ಮತ್ತು ಡುವಾನ್ನೆ ಒಲಿವಿಯರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಚೇಸಿಂಗ್‌ಗೆ ಇಳಿದ ಜೋಝಿ ಸ್ಟಾರ್ಸ್ ಪರ ರೀಜಾ ಹೆಂಡ್ರಿಕ್ಸ್ 33, ರಾಸ್ಸಿ ವ್ಯಾನ್ ಡೆರ್ ಡಸೆನ್ ಅಜೇಯ 59 ರನ್ ಗಳಿಸಿದ್ದು ತಂಡದ ಗೆಲುವನ್ನು ಬರೆಯಿತು. ಸ್ಟಾರ್ಸ್ 17.3 ಓವರ್‌ನಲ್ಲಿ 2 ವಿಕೆಟ್ ಕಳೆದು 115 ರನ್ ಪೇರಿಸುವುದರೊಂದಿಗೆ ಚೊಚ್ಚಲ ಆವೃತ್ತಿಯ ಚಾಂಪಿಯನ್ ಎನಿಸಿತು. ಜೋಝಿ ಸ್ಟಾರ್ಸ್ ನ ಬ್ಯೂರಾನ್ ಹೆಂಡ್ರಿಕ್ಸ್ ಪಂದ್ಯಶ್ರೇಷ್ಠರೆನಿಸಿದರೆ, ಕೇಪ್‌ಟೌನ್ ಬ್ಲಿಟ್ಜ್‌ನ ಕ್ವಿಂಟನ್ ಡಿ ಕಾಕ್ ಸರಣಿಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications