Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ತೆರೆಯ ಮರೆಯ ಕತೆ ಹೇಳಲು ಜಾಹ್ನವಿ ಮೆಹ್ತಾ ಸಜ್ಜು

Juhi Chawla’s Daughter Jahnavi Mehta All Set To Give information Of The IPL Auction

ಕೋಲ್ಕತ್ತಾ: ಹಿಂದೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬಿಡ್ಡಿಂಗ್ ಟೇಬಲ್‌ನಲ್ಲಿ ಒಬ್ಬಳು ಸ್ಫುರದ್ರೂಪಿ ಹುಡುಗಿ ಗಮನ ಸೆಳೆದಿದ್ದರು. ಆಕೆ ಹೆಸರು ಜಾಹ್ನವಿ ಮೆಹ್ತಾ. ಅದೇ ಜಾಹ್ನವಿ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನ ವೇಳೆಯೂ ಕಾಣಿಸಿಕೊಳ್ಳಲಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕತ್ವ ಹೊಂದಿರುವ ಬಾಲಿವುಡ್ ನಟಿ, ಕನ್ನಡದಲ್ಲೂ ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಜೂಹಿ ಚಾವ್ಲಾ ಮತ್ತು ಉದ್ಯಮಿ ಜಯ್ ಮೆಹ್ತಾ ಅವರ ಪುತ್ರಿ ಹೆಸರೇ ಜಾಹ್ನವಿ ಮೆಹ್ತಾ. ಕೆಕೆಆರ್‌ಗೆ ಬಾಲಿವುಡ್ ನಟ ಶಾರೂಖ್ ಖಾನ್ ಕೂಡ ಮಾಲೀಕರಾಗಿದ್ದಾರೆ. ಇದೇ ಕಾರಣಕ್ಕೆ ಜಾಹ್ನವಿ ಐಪಿಎಲ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು.

ಹಿಂದೊಮ್ಮೆ ಹರಾಜಿನ ವೇಳೆ ಬಿಡ್ಡಿಂಗ್ ಟೇಬಲ್‌ನಲ್ಲಿ ಕಾಣಿಸಿಕೊಂಡಿದ್ದ ಜಾಹ್ನವಿ 2021ರ ಹರಾಜಿನ ವೇಳೆಯೂ ಕೆಕೆಆರ್‌ ಜೊತೆಗಿರಲಿದ್ದಾರೆ. ಆದರೆ ಈ ಬಾರಿ ಕೆಕೆಆರ್‌ನ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಜಾಹ್ನವಿ ವಹಿಸಿಕೊಳ್ಳಲಿದ್ದಾರೆ. ಹರಾಜಿನ ವೇಳೆ ತೆರೆಯ ಹಿಂದಿನ ಚಿತ್ರಣಗಳನ್ನು ಜಾಹ್ನವಿ ಅಭಿಮಾನಿಗಳ ಮುಂದಿಡಲಿದ್ದಾರೆ.

ಕೆಕೆಆರ್‌ನ ಇನ್‌ಸ್ಟಾಗ್ರಾಮ್ ಖಾತೆ, ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ಹೊತ್ತುಕೊಳ್ಳಲಿರುವ ಜಾಹ್ನವಿ ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಹರಾಜಿನ ವೇಳೆ ಮಾಹಿತಿ ಒದಗಿಸಲಿದ್ದಾರೆ. ಈ ಬಗ್ಗೆ ಸ್ವತಃ ಜಾಹ್ನವಿ ಅವರೇ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೆ, ಕೆಕೆಆರ್ ಕೂಡ ಈ ಸಂಗತಿ ತಿಳಿಸಿದೆ. ಅಂದ್ಹಾಗೆ ಐಪಿಎಲ್ ಹರಾಜು ಫೆ. 18ರಂದು ಸುಮಾರು 3 pm ಹೊತ್ತಿಗೆ ಆರಂಭವಾಗುವ ನಿರೀಕ್ಷೆಯಿದೆ.

Story first published: Wednesday, February 17, 2021, 17:48 [IST]
Other articles published on Feb 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+