Team India: ಟೀಮ್ ಇಂಡಿಯಾಗೆ ಜೂನಿಯರ್ 'ಅಶ್ವಿನ್' ಆಗಮನ
ಟೀಮ್ ಇಂಡಿಯಾ ಸುದೀರ್ಘ ವಿರಾಮದ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು ಟೀಮ್ ಇಂಡಿಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸರಣಿಯೂ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ.
ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಕೊನೆಯದಾಗಿ ಏಕದಿನ ಸರಣಿ ಆಡಿತ್ತು. ಈ ಸರಣಿ ಮುಗಿದ ನಂತರ ಒಂದು ತಿಂಗಳಿಗೂ ಹೆಚ್ಚು ಕಾಲ ಆಟಗಾರರು ವಿಶ್ರಾಂತಿಯಲ್ಲಿದ್ದರು. ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಸೆಪ್ಟೆಂಬರ್ 13-18ರವರೆಗೆ ಚೆನ್ನೈನಲ್ಲಿ ಅಭ್ಯಾಸ ಶಿಬಿರವನ್ನು ಆಯೋಜಿಸಿದೆ.

ಜೂನಿಯರ್ ಅಶ್ವಿನ್ ಯಾರು?
ಅಭ್ಯಾಸ ಶಿಬಿರಕ್ಕೆ ಆಯ್ಕೆಯಾಗಿರುವ ಎಲ್ಲ ಟೀಮ್ ಇಂಡಿಯಾ ಆಟಗಾರರು ಸೆಪ್ಟೆಂಬರ್ 12ರಂದು ಚೆನ್ನೈಗೆ ತೆರಳುವಂತೆ ಸೂಚಿಸಲಾಗಿದೆ. ದುಲೀಪ್ ಟ್ರೋಫಿಯಲ್ಲಿ ಆಡುತ್ತಿರುವವರು ಮೊದಲ ಪಂದ್ಯದ ನಂತರ ಚೆನ್ನೈಗೆ ಹೋಗಲಿದ್ದಾರೆ. ಇದರ ಮಧ್ಯೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಗಮನವನ್ನು ಜೂನಿಯರ್ ಅಶ್ವಿನ್ ಎಂದು ಖ್ಯಾತಿ ಪಡೆದಿರುವ ಯುವ ಸ್ಪಿನ್ನರ್ ಸೆಳೆದಿದ್ದಾರೆ.
ಜೂನಿಯರ್ ಅಶ್ವಿನ್ ಬೇರೆ ಯಾರು ಅಲ್ಲ, ಮುಂಬೈನ ಯುವ ಸ್ಪಿನ್ನರ್ ಹಿಮಾಂಶು ಸಿಂಗ್. ಈಗ ಅವರನ್ನು ಟೀಮ್ ಇಂಡಿಯಾ ಶಿಬಿರಕ್ಕೆ ಕರೆಯಲಾಗಿದೆ. ಶಿಬಿರದಲ್ಲಿ ಅವರು ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಅವರು ಸ್ಪಿನ್ ಬೌಲಿಂಗ್ ಆಕ್ಷನ್ ದಿಗ್ಗಜ ಬೌಲರ್ ರವಿಚಂದ್ರನ್ ಅಶ್ವಿನ್‌ನಂತಿದೆ.
ಬಾಂಗ್ಲಾದೇಶದ ಸ್ಪಿನ್ನರ್‌ಗಳ ವಿರುದ್ಧ ತಯಾರಾಗಲು ಬ್ಯಾಟರ್‌ಗಳಿಗೆ ಸಹಾಯವಾಗಲೆಂದು ಅಭ್ಯಾಸ ಶಿಬರಕ್ಕೆ ಜೂನಿಯರ್ ಅಶ್ವಿನ್ ಅವರನ್ನು ಕರೆತರಲಾಗಿದೆ. ಅವರು ಎತ್ತರ (ಆರು ಅಡಿ ನಾಲ್ಕು ಇಂಚು) ಸಹಾ ಅಶ್ವಿನ್‌ನಂತೆಯೇ ಇದೆ.
ಈ ವರ್ಷ ಟೀಮ್ ಇಂಡಿಯಾ ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಮುಂದಿನ ಟೆಸ್ಟ್ ಸರಣಿಗಳಿಗೆ ಹಿಮಾಂಶು ಸಿಂಗ್ ಆಯ್ಕೆಯಾಗುವ ಸಾಧ್ಯತೆ ಇದೆ. ಅವರು ಈಗಾಗಲೇ ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರವೀಂದ್ರ ಜಡೇಜಾ ಮತ್ತು ಅಶ್ವಿನ್ ನಂತರ ಟೀಮ್ ಇಂಡಿಯಾಕ್ಕೆ ಹಿಮಾಂಶು ಸಿಂಗ್ ಪ್ರಮುಖ ಸ್ಪಿನ್ನರ್ ಆಗುವ ಅವಕಾಶವನ್ನು ಹೊಂದಿದ್ದಾರೆ.
ಬಾಂಗ್ಲಾ ತಂಡವನನ್ನು ಹೊಗಳಿದ ಯಶಸ್ವಿ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೂ ಮುನ್ನ ಭಾರತದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಎದುರಾಳಿ ತಂಡವನ್ನು ಹೊಗಳಿದ್ದಾರೆ. ಇತ್ತೀಚೆಗೆ ಉತ್ತಮ ಆಟ ತೋರಿದ್ದಾರೆ ಎಂದಿದ್ದಾರೆ. ಬಾಂಗ್ಲಾದೇಶ ಅಗ್ರ ಫಾರ್ಮ್‌ನಲ್ಲಿದೆ. ಪಾಕಿಸ್ತಾನವನ್ನು ವೈಟ್‌ವಾಶ್ ಮಾಡಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಜಯ ದಾಖಲಿಸಿದ್ದು, ಎರಡನೇ ಪಂದ್ಯದಲ್ಲಿ ತಂಡ ಆರು ವಿಕೆಟ್‌ಗಳ ಜಯ ಸಾಧಿಸಿದೆ ಎಂದು ಹೇಳದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications