Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಮಗುವಿನ ಜನ್ಮ ಮಿಸ್ ಮಾಡಿಕೊಳ್ಳಲು ಯಾವತ್ತೂ ಆಟಗಾರರಿಗೆ ಹೇಳಲ್ಲ'

Justin Langer hails Virat Kohli’s decision to take paternity leave

ಸಿಡ್ನಿ: ಮುಂಬರಲಿರುವ ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೆಸ್ಟ್ ಸರಣಿಯುದ್ದಕ್ಕೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇರುವುದಿಲ್ಲ. ತನಗೆ ಚೊಚ್ಚಲ ಮಗು ಜನಿಸಲಿರುವುದರಿಂದ ಕೊಹ್ಲಿ ಆ ವೇಳೆ ಪಿತೃತ್ವದ ರಜೆಯಲ್ಲಿರಲಿದ್ದಾರೆ. ಕೊಹ್ಲಿ ನಿರ್ಧಾರವನ್ನು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಹೊಗಳಿದ್ದಾರೆ.

ಪ್ರಮುಖ ಸರಣಿಯಿಂದ ದೂರ ಇರಲು ನಿರ್ಧರಿಸಿದ ವಿರಾಟ್ ಕೊಹ್ಲಿ ಬಗ್ಗೆ ಕೆಲವರು ಟೀಕಿಸತೊಡಗಿದ್ದಾರೆ. ಕೊಹ್ಲಿ ಆಡದಿದ್ದರೆ ತಂಡ ಸೋಲುವ ಸಾಧ್ಯತೆ ಹೆಚ್ಚಿದೆ. ಕೊಹ್ಲಿ ಟೆಸ್ಟ್ ಸರಣಿಯಿಂದ ಹೊರಗುಳಿಯುವ ನಿರ್ಧಾರ ತಾಳಬಾರದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಲ್ಯಾಂಗರ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

'ಭಾರತಕ್ಕೆ ವಾಪಸ್ಸಾಗಲು ಕೊಹ್ಲಿ ಮಾಡಿರುವ ನಿರ್ಧಾರವನ್ನು ನಾವು ಗೌರವಿಸಬೇಕು. ನಮ್ಮಂತೆ ಅವರೂ ಮನುಷ್ಯರೆ. ನಾನೊಂದು ವೇಳೆ ನನ್ನ ಆಟಗಾರರಿಗೆ ಸಲಹೆ ನೀಡುವುದಿದ್ದರೆ, ನಿಮ್ಮ ಮಗುವಿನ ಜನ್ಮವನ್ನು ಯಾವತ್ತೂ ಮಿಸ್ ಮಾಡಿಕೊಳ್ಳಬೇಡಿ ಎನ್ನುತ್ತೇನೆ. ಯಾಕೆಂದರೆ ಅದು ನಿಮ್ಮ ಪಾಲಿಗೆ ಬಲುದೊಡ್ಡ ಮತ್ತು ವಿಶೇಷ ಸಂಗತಿ,' ಎಂದು ಲ್ಯಾಂಗರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮುಂಬರುವ ಜನವರಿಯಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಹೀಗಾಗಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಆರಂಭದಲ್ಲಿ ನಡೆಯುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾಗವಹಿಸಿದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಟೆಸ್ಟ್ ಸರಣಿಯಲ್ಲಿ ಒಟ್ಟು 4 ಪಂದ್ಯಗಳಿರಲಿದ್ದು, ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭವಾಗಲಿದೆ.

Story first published: Friday, November 20, 2020, 15:04 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+