Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಟೆಸ್ಟ್ ಅಭ್ಯಾಸ ಪಂದ್ಯದಲ್ಲಿ ಪ್ರಮುಖ ಆಟಗಾರರು ಇರುವ ಸುಳಿವು ನೀಡಿದ ಆಸಿಸ್ ಕೋಚ್

Justin Langer hints at playing more Test regulars in second warm-up game

ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಮೊದಲ ಮೂರು ದಿನಗಳ ಅಭ್ಯಾಸ ಪಂದ್ಯ ಅಂತ್ಯವಾಗಿದೆ. ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಎರಡನೇ ಅಭ್ಯಾಸ ಪಂದ್ಯ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮತ್ತಷ್ಟು ಹೆಚ್ಚಿನ ಟೆಸ್ಟ್ ಆಟಗಾರರು ಪಾಲ್ಗೊಳ್ಳುವ ಬಗ್ಗೆ ಆಸ್ಟ್ರೇಲಿಯಾ ತಂಡದ ಕೋಚ್ ಸುಳಿವು ನೀಡಿದ್ದಾರೆ.

ಮೊದಲ ಮೂರು ದಿನಗಳ ಅಭ್ಯಾಸ ಪಂದ್ಯದ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಚುಟುಕು ಸರಣಿ ನಡೆಯುತ್ತಿತ್ತು. ಈ ಕಾರಣದಿಂದಾಗಿ ಟಿ20 ತಂಡದಲ್ಲಿ ಇಲ್ಲದ ಆಟಗಾರರು ಮಾತ್ರವೇ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಹೋಗಾಗಿ ಎರಡನೇ ಪಂದ್ಯದ ಸಂದರ್ಭದಲ್ಲಿ ಮತ್ತಷ್ಟು ಆಟಗಾರರು ಸೇರಿಕೊಳ್ಳುವ ಸಾಧ್ಯತೆಯಿದೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಎರಡನೇ ಅಭ್ಯಾಸ ಪಂದ್ಯ ಡಿಸೆಂಬರ್ 11ರಿಂದ ಆರಂಭವಾಗಿ 13ನೇ ತಾರೀಕಿನ ವರೆಗೆ ನಡೆಯಲಿದೆ. ಈ ಎರಡನೇ ಅಭ್ಯಾಸ ಪಂದ್ಯ ಹಗಲು ರಾತ್ರಿ ಪಂದ್ಯವಾಗಿರಲಿದೆ. ಅದಾದ ಬಳಿಕ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ತಂಡಗಳು ಪಾಲ್ಗೊಳ್ಳಲಿದ್ದು ಅಡಿಲೇಡ್‌ನಲ್ಲಿ ನಡೆಯಲಿರುವ ಈ ಪಂದ್ಯ ಡೇ-ನೈಟ್ ಪಂದ್ಯವಾಗಿರಲಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಈಗಾಗಲೇ ಸಾಕಷ್ಟು ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಆರಂಬಿಕ ಆಟಗಾರ ಡೇವಿಡ್ ವಾರ್ನರ್, ವೇಗಿ ಜೋಶ್ ಹ್ಯಾಜಲ್‌ವುಡ್, ಸ್ಪಿನ್ನರ್ ಆಷ್ಟನ್ ಆಗರ್ ಗಾಯಾಳುಗಳಾಗಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್, ಮಿಚೆಲ್ ಸ್ಟಾರ್ಕ್ ಕೂಡ ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳಿಂದ ಹೊರಗಿಳಿದಿದ್ದಾರೆ.

"ನಾನು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಯಲ್ಲಿ ಮಾತನಾಡಿದ್ದೇನೆ. ಈ ಜಿದ್ದಾಜೊದ್ದಿನ ಸರಣಿಯ ಸಂದರ್ಭದಲ್ಲಿ ನಮಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿದೆ. ನಮ್ಮ ತಂಡದಲ್ಲಿ ಆರು ಆಟಗೃಆರು ಗಾಯಾಳಾಗಿದ್ದಾರೆ. ಸಾಮಾನ್ಯವಾಗಿ ಈ ರೀತಿ ನಡೆಯುವುದಿಲ್ಲ. ನಾವು ಪುನರ್‌ಪರಿಶೀಲನೆಯನ್ನು ನಡೆಸಲಿದ್ದೇವೆ. ಆಟಗಾರರು ಎಲ್ಲಾ ಸರಣಿಯಲ್ಲಿ ಪಾಲ್ಗೊಳ್ಳಬೇಕಾದಾಗ ವಿಶೇಷ ವಿಂಗಡನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ" ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟೀನ್ ಲ್ಯಾಂಗರ್ ಹೇಳಿಕೆಯನ್ನು ನೀಡಿದ್ದಾರೆ.

Story first published: Tuesday, December 8, 2020, 16:37 [IST]
Other articles published on Dec 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+