ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಕ್ರಿಕೆಟ್ ಹೊಸ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ಆಯ್ಕೆ

Justin Langer named new Australia coach, replacing Darren Lehmann

ಸಿಡ್ನಿ, ಮೇ 3: ಚೆಂಡು ವಿರೂಪ ಪ್ರಕರಣದ ಮೂಲಕ ಇಡೀ ಆಸ್ಟ್ರೇಲಿಯಾವೇ ತಲೆ ತಗ್ಗಿಸುವಂತೆ ಮಾಡಿದ್ದ ಆಸೀಸ್ ತಂಡದ ಹೊಸ ತರಬೇತುದಾರರಾಗಿ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಜಸ್ಟಿನ್ ಲ್ಯಾಂಗರ್ ಆಯ್ಕೆಯಾಗಿದ್ದಾರೆ.

ಆಸೀಸ್ ತಂಡದ ಚೆಂಡು ವಿರೂಪ ಪ್ರಕರಣದಿಂದ ಮನನೊಂದು ಡ್ಯಾರೆನ್ ಲೆಹ್ಮನ್ ಸ್ಪ-ಪ್ರೇರಣೆಯಿಂದ ತನ್ನ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಹೊಸ ಮುಖ್ಯ ಕೋಚ್ ಆಗಿ ಲ್ಯಾಂಗರ್ ಆಯ್ಕೆಯಾಗಿದ್ದಾರೆ.

ಬಾಲ್ ಟ್ಯಾಂಪರಿಂಗ್ ಕಪ್ಪುಚುಕ್ಕೆ
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಪ್ರಕರಣ ನಡೆದಿದತ್ತು. ಆಸೀಸ್ ಕ್ಯಾಪ್ಟನ್ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ನಲ್ಲಿ ಪಾಲ್ಗೊಂಡು ಛೀಮಾರಿಗೀಡಾಗಿದ್ದರು.

ಈ ಪ್ರಕರಣ ಇಡೀ ವಿಶ್ವದಾದ್ಯಂತ ಸದ್ದು ಮಾಡಿತ್ತು. ಜೊತೆಗೆ ಕ್ರಕೆಟ್ ರಂಗದಲ್ಲಿ ಖ್ಯಾತಿ ಮೂಡಿಸಿದ್ದ ಆಸೀಸ್ ಗೆ ಕಪ್ಪುಚುಕ್ಕೆಯಾಗಿಯೂ ಪರಿಣಮಿಸಿತ್ತು. ಈ ತಪ್ಪಿಗಾಗಿ ನಾಯಕ ಸ್ಮಿತ್ ಮತ್ತು ಉಪ ನಾಯಕ ವಾರ್ನರ್ ಇಬ್ಬರಿಗೂ ಒಂದು ವರ್ಷಗಳ ನಿಷೇಧ ಹೇರಲಾಗಿದೆ. ಬ್ಯಾನ್‌ಕ್ರಾಫ್ಟ್ ಅವರೂ ಒಂಭತ್ತು ತಿಂಗಳ ನಿಷೇಧಕ್ಕೆ ಗುರಿಯಾಗಿದ್ದಾರೆ.

ಲೆಹ್ಮನ್ ಭಾವುಕ ವಿದಾಯ
ತನ್ನ ತಂಡದ ಆಟಗಾರರು ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದು ಆಗಿನ ಕೋಚ್ ಡ್ಯಾರೆನ್ ಲೆಹ್ಮನ್ ಅವರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ವಿಚಾರಣೆ ವೇಳೆ ಲೆಹ್ಮನ್ ಗೂ 'ವಿರೂಪ' ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ತಿಳಿದು ಬಂದರೂ ಲೆಹ್ಮನ್ ಕಣ್ಣೀರಿಟ್ಟು ಕೋಚ್ ಹುದ್ದೆಗೆ ಭಾವುಕ ವಿದಾಯ ಹೇಳಿದ್ದರು.

2013ರಲ್ಲಿ ಆಸೀಸ್ ಗೆ ಕೋಚ್ ಆಗಿ ಆಯ್ಕೆಯಾಗಿದ್ದ ಲೆಹ್ಮನ್ 2019ರ ವರೆಗೂ ಕೋಚ್ ಆಗಿ ಮುಂದುವರೆಯುವುದರಲ್ಲಿದ್ದರು. ಆದರೆ ಬಾಲ್ ಟ್ಯಾಂಪರಿಂಗ್ ಪ್ರಕರಣ ಆಸೀಸ್ ಕ್ರಿಕೆಟ್ ನಲ್ಲಿ ಕೆಟ್ಟ ತಿರುವೊಂದಕ್ಕೆ ಕಾರಣವಾಯಿತು.

ಜಸ್ಟಿನ್‌ಗೆ 4 ವರ್ಷಗಳ ಒಪ್ಪಂದ
ಮಾಜಿ ಆಸೀಸ್ ಆಟಗಾರರಾಗಿರುವ ಜಸ್ಟಿನ್ ಲ್ಯಾಂಗರ್ ಕೋಚ್ ಆಗಿ ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಪರ್ತ್ ಸ್ಕಾರ್ಚರ್ಸ್ ನ ಜವಾಬ್ದಾರಿ ವಹಿಸಲಿದ್ದು, 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

23 ಜನವರಿ 1993ರಂದು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ನಲ್ಲಿ ಆಸೀಸ್ ತಂಡವನ್ನು ಪ್ರತಿನಿಧಿಸಿದ್ದ ಜಸ್ಟಿನ್, 5 ಜನವರಿ 2007ರಂದು ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಆಸೀಸ್ ಏಕದಿನ ತಂಡದಲ್ಲಿ ಜಸ್ಟಿನ್ 14 ಏಪ್ರಿಲ್ 1994 ರಿಂದ 25 ಮೇ 1997ರ ವರೆಗೆ ಗುರುತಿಸಿಕೊಂಡಿದ್ದರು. ಒಟ್ಟು 105 ಟೆಸ್ಟ್ ಪಂದ್ಯಗಳಲ್ಲಿ 7,696 ರನ್ ಸಾಧನೆ ಲ್ಯಾಂಗರ್ ಅವರಿಂದಾಗಿದೆ.

Story first published: Thursday, May 3, 2018, 17:51 [IST]
Other articles published on May 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X