Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾಗೆ ಭಾರತ ಪ್ರವಾಸ ಅತ್ಯಂತ ಕಠಿಣ: ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

Justin Langer statement on India tour said it is hardest but Australia have a well-balanced team

ಫೆಬ್ರವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಮೊದಲಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯ ಮೇಲೆ ಈಗ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದ್ದು ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಈಗಾಗಲೇ ಪ್ರಕಟಿಲಾಗಿದ್ದು ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡ ಕೂಡ ಪ್ರಕಟವಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ ನೀಡಿದ್ದಾರೆ.

ಆಸ್ಟ್ರೇಲಿಯಾ ತಂಡ ಭಾರತದಲ್ಲಿ 2004ರಿಂದ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಕೊನೆಯ ಬಾರಿ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸಿದಾಗಾಸಿಸ್ ತಂಡದ ನಾಯಕನಾಗಿದ್ದವರು ಆಡಂ ಗಿಲ್‌ಕ್ರಿಸ್ಟ್. ಅದಕ್ಕೂ ಮುನ್ನ 1969ರಲ್ಲಿ ಬಿಲ್ ಲಾರಿ ನೇತೃತ್ವದಲ್ಲಿ ಆಸಿಸ್ ಪಡೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು.

"ಭಾರತದಲ್ಲಿ ಬಹಳ ಕಾಲದಿಂದ ಟೆಸ್ಟ್ ಗೆಲ್ಲಿದುವುದರ ಬಗ್ಗೆ ಬೇಸರವಿಲ್ಲ. ಅದರಿಂದ ನಾನು ಮುಂದುವರಿದಿದ್ದೇನೆ. ಆದರೆ ನಮ್ಮ ಹುಡುಗರು ಅಲ್ಲಿ ಸರಣಿ ಗೆಲ್ಲವುದನ್ನು ನೋಡಲು ಬಯಸಿತ್ತೇನೆ. ಅವರು ಗೆಲ್ಲಲು ಸಾಧ್ತವಾದರೆ ಅದು ಶ್ರೇಷ್ಠ ಸಂಗತಿಯಾಗಲಿದೆ. ಈ ಸರಣಿಯನ್ನು ನೋಡಲು ನಾನು ಕಾತರಿಸುತ್ತಿದ್ದೇನೆ. 2004ರಲ್ಲಿ 35 ವರ್ಷಗಳ ಬಳಿಕ ಮೊದಲ ಬಾರಿಗೆ ಟೆಸ್ಟ್ ಗೆಲುವು ಸಾಧಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ಗೆಲುವಿನ ಬಗ್ಗೆ ಈಗಲೂ ನೆನಪು ಹಸಿರಾಗಿದೆ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್.

"ಆಸ್ಟ್ರೇಲಿಯಾ ತಂಡ ಬಹಳ ಸಮತೋಲಿತವಾಗಿದ್ದು ಆತ್ಮವಿಶ್ವಾಸದಿಂದ ಕೂಡಿದೆ. ಈ ತಂಡ ಬಹಳ ಗೆಲುವುಗಳನ್ನು ಸಾಧಿಸಿಕೊಂಡು ಬಂದಿದೆ. ಈಗ ಬಾರತದಲ್ಲಿಯೂ ಅವರು ಗೆಲುವು ಸಾಧಿಸುವ ಅದ್ಭುತ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಈ ಹಿಂದಿನ ನನ್ನ ಪ್ರವಾಸ ಮೌಂಟ್ ಎವರೆಸ್ಟ್ ಪ್ರವಾಸವಾಗಿತ್ತು. ನಾನು ಈ ಹಿಂದಿನ ಸಾಧನೆಯನ್ನು ಮತ್ತೊಮ್ಮೆ ಮಾಡಲು ಬಯಸುತ್ತೇನೆ ಯಾಕೆಂದರೆ ಅದು ಬಹಳ ಕಠಿಣವಾದ ಸವಾಲಾಗಿದೆ" ಎಂದಿದ್ದಾರೆ ಲ್ಯಾಂಗರ್.

ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್

Story first published: Saturday, January 14, 2023, 14:31 [IST]
Other articles published on Jan 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+