ವಿಭಿನ್ನ '3ಟಿಸಿ ಸಾಲಿಡಾರಿಟಿ ಕಪ್'ನಿಂದ ಹಿಂದೆ ಸರಿದ ರಬಾಡ, ಕ್ರಿಸ್ ಮೋರಿಸ್

ಕೇಪ್‌ಟೌನ್, ಜುಲೈ 16: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪ್ರಮುಖ ವೇಗಿ ಕಾಗಿಸೊ ರಬಾಡ ಮತ್ತು ಆಲ್ ರೌಂಡರ್ ಕ್ರಿಸ್ ಮೋರಿಸ್, ವಿಭಿನ್ನ '3 ಟೀಮ್ ಕ್ರಿಕೆಟ್ ಸಾಲಿಡಾರಿಟಿ ಕಪ್' ಉದ್ಘಾಟನಾ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ. ಮತ್ತೊಬ್ಬ ಮಧ್ಯಮ ವೇಗಿ ಸಿಸಂದ ಮಗಾಲ ಕೂಡ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನಿಂದ ನಿಲುಗಡೆಯಾಗಿರುವ ಕ್ರಿಕೆಟ್, '3 ಟೀಮ್ ಕ್ರಿಕೆಟ್ ಸಾಲಿಡಾರಿಟಿ ಕಪ್' ಮೂಲಕ ಶನಿವಾರದಿಂದ (ಜುಲೈ 18) ಪುನರಾರಂಭವಾಗಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಾಲಿಗೆ ಐತಿಹಾಸಿಕ ಎನಿಸಿರುವ ಈ 3ಟಿಸಿ ಪಂದ್ಯದಿಂದ ಪ್ರಮುಖ ಆಟಗಾರರು ಹಿಂದೆ ಸರಿದ್ದಾರೆ.
ಕಿಂಗ್‌ಫಿಶರ್ಸ್ ತಂಡದ ನಾಯಕರಾಗಿದ್ದ ವೇಗಿ ಕಾಗಿಸೊ ರಬಾಡ ಮತ್ತು ಸಿಸಂದ ಮಗಾಲ ಅವರ ಕುಟುಂಬದ ಸದಸ್ಯರು ನಿಧನರಾಗಿದ್ದಾರೆ. ಹೀಗಾಗಿ ಇಬ್ಬರೂ ಪಂದ್ಯದಿಂದ ಹೊರಗುಳಿಯುವ ನಿರ್ಧಾರ ತಾಳಿದ್ದಾರೆ. ಇನ್ನು 33ರ ಹರೆಯದ ಕ್ರಿಸ್ ಮೋರಿಸ್ ಕೂಡ ಸೂಪರ್‌ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ಹೇಳಿದೆ.
ದಕ್ಷಿಣ ಅಫ್ರಿಕಾ ಮಾಜಿ ವೇಗಿ ಮಖಾಯ ಎನ್‌ಟಿನಿ ಅವರ ಪುತ್ರ ಥಾಂಡೋ ಎನ್ಟಿನಿ ಅವರನ್ನ ಕಿಂಗ್‌ಫಿಶರ್ಸ್‌ಗೆ, ಜಾರ್ನ್ ಫಾರ್ಚುಯಿನ್ ಅವರನ್ನು ಈಗಲ್ಸ್‌ಗೆ, ಜೆರಾಲ್ಡ್ ಕೋಟ್ಜೀ ಅವರನ್ನು ಕಿಂಗ್‌ಫಿಶರ್ಸ್‌ಗೆ ಬದಲಿ ಆಟಗಾರರಾಗಿ ಹೆಸರಿಸಲಾಗಿದೆ.
ರಬಾಡ ಅನುಪಸ್ಥಿತಿಯಲ್ಲಿ ಹೆನ್ರಿಕ್ ಕ್ಲಾಸೆನ್ ಕಿಂಗ್‌ಫಿಶರ್ಸ್ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಎಬಿ ಡಿ ವಿಲಿಯರ್ಸ್ ಅವರು ಈಗಲ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಕೈಟ್ಸ್ ತಂಡದ ಕ್ಯಾಪ್ಟನ್ಸಿ ಹೊತ್ತುಕೊಂಡಿದ್ದಾರೆ. 3ಟಿಸಿ ಒಂದು ಪಂದ್ಯದಲ್ಲಿ 3 ತಂಡಗಳು ಕಾದಾಡಲಿವೆ. ಪ್ರತೀ ತಂಡಕ್ಕೆ ಇನ್ನಿಂಗ್ಸ್ ಒಂದಕ್ಕೆ 12 ಓವರ್‌ಗಳಂತೆ ಒಟ್ಟಿಗೆ 36 ಓವರ್‌ಗಳ ಪಂದ್ಯವಿದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications