ಲಂಡನ್, ಜುಲೈ 09 : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ನೀತಿ ಸಂಹಿತೆ ಮುರಿದ ಕಾರಣ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಈ ಮೂಲಕ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಐಸಿಸಿ ಖಡಕ್ ಸಂದೇಶ ರವಾನಿಸಿದೆ.
ನಿಷೇಧಕ್ಕೊಳಗಾಗಿರುವ ರಬಾಡ ಅವರು ಇಂಗ್ಲೆಂಡ್ ವಿರುದ್ಧದ ಟ್ರೆಂಟ್ ಬ್ರಿಜ್ ನ ಎರಡನೇ ಟೆಸ್ಟ್‌ನಲ್ಲಿ ಆಡುವಂತಿಲ್ಲ. ಇಂಗ್ಲೆಂಡ್ ವಿರುದ್ಧ -ಲಾರ್ಡ್ಸ್ ಮೈದಾನದಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಬೆನ್ ಸ್ಟೋಕ್ಸ್ ಅವರ ವಿಕೆಟ್ ಪಡೆದಾಗ ರಬಾಡ ಅವರು ನಡೆದುಕೊಂಡ ರೀತಿಯನ್ನು ಪರಿಶೀಲಿಸಿದ ಐಸಿಸಿ ಮ್ಯಾಚ್ ರೆಫ್ರಿ ಅವರು ರಬಾಡ ಮೇಲೆ ನಿಷೇಧ ಹೇರಿದ್ದಾರೆ.
