For Quick Alerts
ALLOW NOTIFICATIONS  
For Daily Alerts
 

ಡಾನ್ ಬ್ರಾಡ್ಮನ್ ದಾಖಲೆಯ ಸಮಕ್ಕೆ ನಿಂತ ಮೆಂಡಿಸ್: ಲಂಕಾ ತಂಡಕ್ಕೆ ಸಿಕ್ಕ ಹೊಸ ರನ್‌ ಮ‍ಷೀನ್

ಗಾಲೆ: ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ಲಂಕಾ ತಂಡದ ಬ್ಯಾಟರ್‌ ಚಮಿಂದು ಮೆಂಡಿಸ್‌ ದಾಖಲೆ ನಿರ್ಮಿಸಿದ್ದಾರೆ. ಪ್ರತಿ ಇನಿಂಗ್ಸ್‌ ಆಡಲು ಮೈದಾನಕ್ಕೆ ಇಳಿದಾಗಲೂ ದಾಖಲೆಯ ಪುಟಕ್ಕೆ ಕೆಲಸ ನೀಡುವ ಚಮಿಂದು ಮೆಂಡಿಸ್, ಮತ್ತೊಂದು ರೆಕಾರ್ಡ್‌ ಬರೆದಿದ್ದಾರೆ.

ಶುಕ್ರವಾರ ನಡೆದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ಮೊದಲ ಇನಿಂಗ್ಸ್‌ನ್ನು 3 ವಿಕೆಟ್‌ಗೆ 306 ರನ್‌ಗಳಿಂದ ಮುಂದುವರೆಸಿ, 5 ವಿಕೆಟ್‌ಗೆ 602 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 2 ವಿಕೆಟ್‌ಗೆ 22 ರನ್‌ಗಳನ್ನು ಕಲೆ ಹಾಕಿದೆ. ಕೇನ್‌ ವಿಲಿಯಮ್ಸನ್‌ ಹಾಗೂ ಅಜೀಜ್ ಪಟೇಲ್‌ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Kamindu Mendis Equals Don Bradman s Record with 1000 Test Runs in 13 Innings

ಮೆಂಡಿಸ್‌ ಅಬ್ಬರ

ಕಮಿಂದು ಮೆಂಡಿಸ್‌ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು 250 ಎಸೆತಗಳನ್ನು ಎದುರಿಸಿ 182 ರನ್‌ಗಳ ಇನಿಂಗ್ಸ್ ಕಟ್ಟಿದ್ದಾರೆ. ಇದರಲ್ಲಿ 16 ಬೌಂಡರಿ, 4 ಸಿಕ್ಸರ್ ಸೇರಿವೆ.

ಶ್ರೀಲಂಕಾದ ಬ್ಯಾಟ್ಸ್‌ಮನ್ ಕಮಿಂದು ಮೆಂಡಿಸ್ ಎರಡನೇ ಇನಿಂಗ್ಸ್‌ನಲ್ಲೂ ಅಮೋಘ ಬ್ಯಾಟಿಂಗ್ ಮುಂದುವರೆಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದ 13ನೇ ಇನ್ನಿಂಗ್ಸ್‌ನಲ್ಲಿ ಮೆಂಡಿಸ್‌ ಒಂದು ಸಾವಿರ ರನ್‌ಗಳ ಗಡಿ ಮುಟ್ಟಿ ಸಂಭ್ರಮಿಸಿದ್ದಾರೆ. ಈ ಮೂಲಕ ಮೆಂಡಿಸ್‌ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ 1,000 ರನ್ ಗಳಿಸಿದ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮೆಂಡಿಸ್ ತಮ್ಮ ವೃತ್ತಿಜೀವನದ 13 ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಡಾನ್ ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 1000 ರನ್ ಪೂರ್ಣಗೊಳಿಸಲು 13 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

8 ಪಂದ್ಯಗಳಲ್ಲಿ 5 ಶತಕ

ಶ್ರೀಲಂಕಾ ತಂಡದ ಭರವಸೆಯ ಆಟಗಾರ ಕಮಿಂದು ಮೆಂಡಿಸ್‌ ಕಡಿಮೆ ಇನಿಂಗ್ಸ್‌ನಲ್ಲಿ ಐದು ಶತಕ ಬಾರಿಸಿ ಸಾಧನೆ ಮಾಡಿದ್ದಾರೆ. ಇವರು ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವನ್ನು 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. ಪದಾರ್ಪಣೆ ಪಂದ್ಯದಲ್ಲಿ ಮೆಂಡಿಸ್‌ 61 ರನ್‌ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಮೆಂಡಿಸ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅವರ 13 ಇನ್ನಿಂಗ್ಸ್‌ಗಳಲ್ಲಿ ಅವರು 5 ಶತಕ ಮತ್ತು 4 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ವಿಶ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಧಮಾಕೆದಾರ ಬ್ಯಾಟಿಂಗ್ ಶೈಲಿಯಿಂದ ಎಲ್ಲರ ಚಿತ್ತ ಕದ್ದಿರುವ ಕಮಿಂಡು ಮೆಂಡಿಸ್‌ ಈಗ ಅಬ್ಬರಿಸುತ್ತಿದ್ದಾರೆ. ಇವರು ವೇಗವಾಗಿ ಸಾವಿರ ರನ್‌ ಗಳಿಸಿದ ಏಷ್ಯಾದ ಆಟಗಾರರ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ವಿನೋದ್ ಕಾಂಬ್ಳೆ ಅವರ ಹೆಸರಿನಲ್ಲಿತ್ತು. ಇವರು ಇಷ್ಟು ರನ್ ಬಾರಿಸಲು 14 ಇನಿಂಗ್ಸ್‌ ತೆಗೆದುಕೊಂಡಿದ್ದರು.

Story first published: Friday, September 27, 2024, 18:54 [IST]
Other articles published on Sep 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+