SL vs NZ: ಕಿವೀಸ್ ಕಿವಿ ಹಿಂಡಿಂದ ಕಮಿಂದು ಮೆಂಡಿಸ್
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಗಾಲೆಯಲ್ಲಿ ನಡೆಯುತ್ತಿದೆ. ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ದಿನದಾಟದ ಅಂತ್ಯಕ್ಕೆ ಲಂಕಾ 7 ವಿಕೆಟ್‌ಗೆ 302 ರನ್ ಸೇರಿಸಿದೆ.
ಎರಡನೇ ದಿನಕ್ಕೆ ರಮೇಶ್ ಮೆಂಡಿಸ್ ಔಟಾಗದೆ 14 ರನ್ ಗಳಿಸಿದ್ದರೆ, ಪ್ರಭಾತ್ ಜಯಸೂರ್ಯ ಖಾತೆ ತೆರೆಯದೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದ ಹೀರೋ ಶ್ರೀಲಂಕಾ ಮಧ್ಯಮ ಕ್ರಮಾಂಕದ ಬ್ಯಾಟರ್ ಕಮಿಂದು ಮೆಂಡಿಸ್. ಕಿವೀಸ್ ತಂಡದ ಕಿವಿ ಹಿಂಡಿದ್ದ ಕಮಿಂದು ಮೆಂಡಿಸ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಕಮಿಂದು ಶತಕ
ಕಮಿಂದು ಮೆಂಡಿಸ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಕಮಿಂದು ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ಇವರು ತಮ್ಮ 10 ಇನಿಂಗ್ಸ್‌ಗಳಲ್ಲಿ 7 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು.
ಶ್ರೀಲಂಕಾ ತಂಡದ ಸ್ಕೋರ್ 69 ರನ್‌ಗಳಿಗೆ 2 ವಿಕೆಟ್ ಆಗಿದ್ದಾಗ ಕಮಿಂದು ಕ್ರೀಸ್‌ಗೆ ಬಂದರು. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿದ ಕಮಿಂದು ಅಬ್ಬರಿಸಿದರು. ಈಗಾಗಲೇ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನು ನಮೂದಿಸಿರುವ ಕಮಿಂದು ಮತ್ತೊಮ್ಮೆ, ದಾಖಲೆಯ ಪುಟಕ್ಕೆ ಕೆಲಸ ನೀಡಿದರು.
ಬ್ರಾಡ್ಮನ್ ದಾಖಲೆಯ ಸಮ
ಕಮಿಂದು ಆರನೇ ವಿಕೆಟ್‌ಗೆ ಏಂಜೆಲೊ ಮ್ಯಾಥ್ಯೂಸ್ ಅವರೊಂದಿಗೆ 72 ರನ್‌ಗಳ ಜೊತೆಯಾಟವಾಡಿದರೆ, ಏಳನೇ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಅವರೊಂದಿಗೆ 103 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 300 ಗಡಿ ಡಾಟಿಸುವಲ್ಲಿ ಶ್ರಮಿಸಿದರು,. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ಶ್ರೀಲಂಕಾದ ಆಟಗಾರ ಎಂಬ ಹೆಗ್ಗಳಿಕೆಗೆ ಕಮಿಂದು ಪಾತ್ರರಾಗಿದ್ದಾರೆ. ಈ ಹಿಂದೆ 21 ಇನ್ನಿಂಗ್ಸ್‌ಗಳಲ್ಲಿ ಮೈಕಲ್ ವ್ಯಾನ್‌ಡೋರ್ಟ್ ಈ ಸಾಧನೆ ಮಾಡಿದ್ದರು. ಈ ಶತಕದೊಂದಿಗೆ ಕಮಿಂದು ಅವರು ಟೆಸ್ಟ್‌ನಲ್ಲಿ 11ನೇ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಶತಕ ಸಿಡಿಸಿದ್ದ ಡಾನ್ ಬ್ರಾಡ್ಮನ್ ಅವರ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕಡಿಮೆ ಇನಿಂಗ್ಸ್‌ಗಳಲ್ಲಿ 4 ಶತಕ ಬಾರಿಸಿದ ಆಟಗಾರ ಯಾರು?
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 4 ಶತಕ ಬಾರಿಸಿದ ಪಟ್ಟಿಯಲ್ಲಿ ಜಾರ್ಜ್ ಹೆಡ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಸುನಿಲ್ ಗವಾಸ್ಕರ್, ವಿನೋದ್ ಕಾಂಬ್ಳೆ ಎಂಟು ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ 9 ಇನಿಂಗ್ಸ್‌ಗಳಲ್ಲಿ ಹರ್ಬರ್ಟ್ ಸಟ್ಕ್ಲಿಫ್, ಎವರ್ಟನ್ ವೀಕ್ಸ್, ಹ್ಯಾರಿ ಬ್ರೂಕ್ ಈ ಸಾಧನೆ ಮಾಡಿದ್ದಾರೆ.
ಶ್ರೀಲಂಕಾ ಪರ ಪತನು ನಿಸ್ಸಂಕಾ (27), ದಿನೇಶ್ ಚಂಡೀಮಲ್ (30), ಆಂಜಿಲೋ ಮ್ಯಾಥ್ಯೂಸ್ (36) ತಂಡಕ್ಕೆ ಆಧಾರವಾದರು. ಉಳಿದಂತೆ ಕುಸಾಲ್ ಮೆಂಡಿಸ್ 68 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 50 ರನ್ ಬಾರಿಸಿ ಆರ್ಭಟಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications