ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) 2024ರ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾರ್ವಕಾಲಿಕ ದಿಗ್ಗಜ ಬ್ಯಾಟರ್ ಡಾನ್ ಬ್ರಾಡ್‌ಮನ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ ಸ್ಫೋಟಕ ಬ್ಯಾಟರ್ 2024ರ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶ್ರೀಲಂಕಾದ ಯುವ ಬ್ಯಾಟರ್ ಕಮಿಂದು ಮೆಂಡಿಸ್ ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಕಮಿಂದು ಮೆಂಡಿಸ್ 2024 ರಲ್ಲಿ ಎಲ್ಲಾ ಮೂರು ಕ್ರಿಕೆಟ್ ಸ್ವರೂಪಗಳಲ್ಲಿ ಒಟ್ಟು 34 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು 50 ರ ಸರಾಸರಿಯಲ್ಲಿ 1458 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು 5 ಶತಕಗಳು ಮತ್ತು ಅರ್ಧ ಶತಕಗಳನ್ನು ಬಾರಿಸಿದ್ದರು. ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಯನ್ನು ಕಮಿಂದು ಮೆಂಡಿಸ್ ಗೆಲ್ಲುವಲ್ಲಿ 148 ಬೌಂಡರಿಗಳು ಮತ್ತು 33 ಸಿಕ್ಸರ್‌ಗಳು ಕೂಡ ದೊಡ್ಡ ಪಾತ್ರವನ್ನು ವಹಿಸಿವೆ.

ಕಮಿಂದು ಮೆಂಡಿಸ್ 2024 ರ ಮೊದಲು ಶ್ರೀಲಂಕಾ ಪರ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ವರ್ಷದ ಕೊನೆಯಲ್ಲಿ ಅವರು ಎಲ್ಲಾ ಸ್ವರೂಪಗಳಲ್ಲಿ ಶ್ರೀಲಂಕಾ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. ಅನೇಕ ಸಂದರ್ಭಗಳಲ್ಲಿ ತಂಡದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರು. ಇದು ಅವರಿಗೆ ಉತ್ತಮ ವರ್ಷವಾಗಿತ್ತು. ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಅನೇಕ ದಾಖಲೆಗಳನ್ನು ಮಾಡಿದರು.
ಇತ್ತೀಚೆಗೆ ಮುಕ್ತಾಯಗೊಂಡ ಕ್ಯಾಲೆಂಡರ್ ವರ್ಷದಲ್ಲಿ 1000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ಮಧ್ಯಮ ಕ್ರಮಾಂಕ ಬ್ಯಾಟರ್‌ಗಲ್ಲಿ ಕಮಿಂದು ಮೆಂಡಿಸ್ ಕೂಡ ಒಬ್ಬರು. ಕಾಮಿಂದು 2024 ರಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 74.92 ರ ಸರಾಸರಿಯಲ್ಲಿ 1049 ರನ್ ಕೆಲ ಹಾಕಿದ್ದಾರೆ. ಅಲ್ಲದೆ, 5 ಶತಕಗಳು ಮತ್ತು 3 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದು ಶ್ರೀಲಂಕಾವನ್ನು ಅನೇಕ ಸಂದರ್ಭಗಳಲ್ಲಿ ಗೆಲ್ಲಲು ಸಹಾಯ ಮಾಡಿದೆ.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕಮಿಂದು ಮೆಂಡಿಸ್ ಪುರುಷರ ಟೆಸ್ಟ್ ಪಂದ್ಯಗಳಲ್ಲಿ 1000 ರನ್ ಗಳಿಸಿದ ಜಂಟಿ ಮೂರನೇ ಅತಿ ವೇಗದ ಆಟಗಾರ ಎನಿಸಿಕೊಂಡರು. ಅವರು 13 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಸರ್ ಡಾನ್ ಬ್ರಾಡ್‌ಮನ್ ಅವರ ದಾಖಲೆಯನ್ನು ಸರಿಗಟ್ಟಿದರು.
ಕಮಿಂದು ಮೆಂಡಿಸ್ ಅವರ ಬ್ಯಾಟಿಂಗ್ ಬಲದಿಂದ ಶ್ರೀಲಂಕಾ ತಂಡವು ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ ಪ್ರಮುಖ ಟೆಸ್ಟ್ ವಿಜಯಗಳನ್ನು ಸಾಧಿವಾಯಿತು. ಅವರು ತವರು ಮತ್ತು ವಿದೇಶಿ ನೆಲಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೆಂಡಿಸ್ ಇಂಗ್ಲೆಂಡ್‌ನಲ್ಲಿ ನಡೆದ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಶ್ರೀಲಂಕಾದ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದರು. ಒಂದು ದಶಕದ ಕಾಯುವಿಕೆಯ ನಂತರ ಇಂಗ್ಲೆಂಡ್ ನೆಲದಲ್ಲಿ ಶ್ರೀಲಂಕಾ ತಂಡದ ಮೊದಲ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.