For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಭಾರತೀಯ ಬೌಲರ್ ಬೆನ್ನಿಗೆ ನಿಂತ ಇಯಾನ್ ಮಾರ್ಗನ್

Kamlesh Nagarkoti didnt have enough runs to defend in last over: Eoin Morgan

ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್‌ ಹಾದಿ ಈಗ ಕಠಿಣವೆನಿಸಿದೆ. ಕಾರಣ ಗುರುವಾರ ನಡೆದ ಐಪಿಎಲ್ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ರೋಚಕ ಗೆಲುವನ್ನಾಚರಿಸಿದೆ. ಕೆಕೆಆರ್ ಗೆಲುವಿನ ಮುನ್ಸೂಚನೆ ನೀಡಿತ್ತಾದರೂ ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು ಮತ್ತು ರವೀಂದ್ರ ಜಡೇಜಾ ಆಟ ಸಿಎಸ್‌ಕೆ ಗೆಲುವನ್ನು ಬರೆಯಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಶುಬ್‌ಮನ್ ಗಿಲ್ 26, ನಿತೀಶ್ ರಾಣಾ 87 (61 ಎಸೆತ), ಸುನಿಲ್ ನರೈನ್ 7, ರಿಂಕು ಸಿಂಗ್ 11, ಇಯಾನ್ ಮಾರ್ಗನ್ 15, ದಿನೇಶ್ ಕಾರ್ತಿಕ್ 21 ರನ್ ಸೇರ್ಪಡೆಯೊಂದಿಗೆ ಕೆಕೆಆರ್ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಶೇನ್ ವಾಟ್ಸನ್ 14, ರುತುರಾಜ್ ಗಾಯಕ್ವಾಡ್ 72 (53 ಎಸೆತ), ಅಂಬಾಟಿ ರಾಯುಡು 38 (20 ಎಸೆತ), ಸ್ಯಾಮ್ ಕರನ್ 13, ರವೀಂದ್ರ ಜಡೇಜಾ 31 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಗಳಿಸಿತು.

ಕೆಕೆಆರ್‌ನಿಂದ ಹೆಚ್ಚು ರನ್ ಕೊಟ್ಟಿದ್ದು ವೇಗಿ ಲಾಕಿ ಫಾರ್ಗುಸನ್. 4 ಓವರ್‌ ಎಸೆದಿದ್ದ ಫಾರ್ಗುಸನ್ ವಿಕೆಟ್ ಪಡೆಯದೆ 54 ರನ್ ನೀಡಿದ್ದರು. ಹೀಗಾಗಿ ಕೊನೇ ಓವರ್ ಎಸೆದಿದ್ದ ಯುವ ಬೌಲರ್ ಕಮಲೇಶ್ ನಗರ್ಕೋಟಿಗೆ ತಂಡವನ್ನು ಗೆಲ್ಲಿಸಲಾಗಲಿಲ್ಲ. 3 ಓವರ್ ಎಸೆದಿದ್ದ ನಗರ್ಕೋಟಿ ವಿಕೆಟ್ ಪಡೆಯದೆ 34 ರನ್ ನೀಡಿದ್ದರು.

ಭಾರತೀಯ ಯುವ ಬೌಲರ್ ನಗರ್ಕೋಟಿಯನ್ನು ಸಮರ್ಥಿಸಿರುವ ಕೆಕೆಆರ್ ನಾಯಕ ಇಯಾನ್ ಮಾರ್ಗನ್, 'ಇವತ್ತಿನ ಪಂದ್ಯದ ಸೋಲಿಗೆ ನಾನು ಯಾರನ್ನೂ ದೂರುವುದಿಲ್ಲ. ನಾವೆಲ್ಲರೂ ಚೆನ್ನಾಗಿ ಆಡಿದ್ದೆವು. ನಗರ್ಕೋಟಿಗೆ ಕೊನೇ ಓವರ್‌ನಲ್ಲಿ ಡಿಫೆಂಡ್ ಮಾಡೋಕೆ ಹೆಚ್ಚಿನ ರನ್ ಇರಲಿಲ್ಲ. ಆತ ಇನ್ನೂ ಯುವ ಬೌಲರ್. ಈ ಸೋಲನ್ನು ಬದಿಗಿಟ್ಟು ಮುನ್ನಡೆಯುತ್ತಾನೆ,' ಎಂದಿದ್ದಾರೆ.

Story first published: Friday, October 30, 2020, 11:33 [IST]
Other articles published on Oct 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+