ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ನಡುವಿನ ವ್ಯತ್ಯಾಸ ತಿಳಿಸಿದ ಬ್ರೆಟ್ ಲೀ

ಸಿಡ್ನಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ಬಲಿಷ್ಠ ತಂಡಗಳಿಗೆ ನಾಯಕತ್ವ ವಹಿಸಿಕೊಂಡಿರುವ ಕೊಹ್ಲಿ-ವಿಲಿಯಮ್ಸನ್ ನಡುವಿನ ವ್ಯತ್ಯಾಸವನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ ಹೇಳಿದ್ದಾರೆ.

ಕೇನ್ ವಿಲಿಯಮ್ಸನ್ ಒಬ್ಬ ಸಾಂಪ್ರದಾಯಿಕ ನಾಯಕ, ವಿರಾಟ್ ಕೊಹ್ಲಿ ಆಕ್ರಮಣಕಾರಿ ನಾಯಕ ಎಂದು ಬ್ರೆಟ್ ಲೀ ಹೇಳಿದ್ದಾರೆ. ಅಲ್ಲದೆ ಮತ್ತೊಂದು ವಿಚಾರವನ್ನು ಲೀ ತಿಳಿಸಿದ್ದಾರೆ, ಅದೇನೆಂದರೆ ವಿಲಿಯಮ್ಸನ್ ಕೂಡ ಆಕ್ರಮಣಕ್ಕೆ ಸಮಯ ಕಾಯುವ ಸ್ವಭಾವ ಹೊಂದಿದ್ದಾರೆ ಎಂದಿದ್ದಾರೆ.

'ಇಬ್ಬರಲ್ಲೂ ತುಂಬಾ ವ್ಯತ್ಯಾಸವಿದೆ. ಕೇನ್ ವಿಲಿಯಮ್ಸನ್ ಬೋರ್ ಅನ್ನಿಸದ ರೀತಿಯಲ್ಲಿ ಹೆಚ್ಚು ಸಾಂಪ್ರದಾಯಿಕವಾಗಿರುತ್ತಾರೆ. ನಾನು ಅವರ ಜೊತೆ ಸಮಯ ಎಂಜಾಯ್ ಮಾಡಿದ್ದೇನೆ. ಹಾಗಂತ ತನಗೆ ಬೇಕಾದಾಗ ಕೇನ್ ಆಕ್ರಮಣ ಕೂಡ ಮಾಡ್ತಾರೆ. ವಿರಾಟ್ ಒಬ್ಬ ಆಕ್ರಮಣಕಾರಿ ಸ್ವಭಾವದ ನಾಯಕ,' ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ಲೀ ತಿಳಿಸಿದ್ದಾರೆ.

ಸೌತಾಂಪ್ಟನ್‌ನ ಏಜಸ್‌ಬೌಲ್‌ನಲ್ಲಿ ಜೂನ್ 18ರಿಂದ 22ರ ವರೆಗೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ನಡೆಯಲಿದೆ. ಈ ಪಂದ್ಯದ ಬಳಿಕ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಭಾರತ-ಇಂಗ್ಲೆಂಡ್ ಎರಡೂ ತಂಡಗಳು ಸದ್ಯ ಇಂಗ್ಲೆಂಡ್‌ನಲ್ಲಿವೆ.

For Quick Alerts
ALLOW NOTIFICATIONS
For Daily Alerts
Story first published: Saturday, June 5, 2021, 9:56 [IST]
Other articles published on Jun 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X