Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

NZ vs NZ Test: ನ್ಯೂಜಿಲೆಂಡ್‌ ಪರ ಕೇನ್‌ ವಿಲಿಯಮ್ಸನ್‌ ಐತಿಹಾಸಿಕ ಸಾಧನೆ

ಸುಮಾರು ಎರಡು ತಿಂಗಳಿನಿಂದ ಟೆಸ್ಟ್‌ ಕ್ರಿಕೆಟ್‌ನಿಂದ ದೂರ ಇದ್ದ ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌, ಮೈದಾನಕ್ಕೆ ಇಳಿಯುತ್ತಿದ್ದ ಹಾಗೆ ದಾಖಲೆ ಬರೆದಿದ್ದಾರೆ. ಇವರು ಇಂಗ್ಲೆಂಡ್‌ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ಕಿವೀಸ್ ಪರ ಅಮೊಘ ದಾಖಲೆ ನಿರ್ಮಿಸಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ 26 ರನ್‌ ಗಳಿಸುತ್ತಿದ್ದಂತೆ ಕೇನ್‌ ವಿಲಿಯಮ್ಸನ್‌ ಸ್ಮರಣೀಯ ದಾಖಲೆಯನ್ನು ಬರೆದರು.

ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶನಿವಾರ ಮೂರನೇ ದಿನದಾಟವನ್ನು 5 ವಿಕೆಟ್‌ಗೆ 319 ರನ್‌ಗಳಿಂದ ಆಟ ಮುಂದುವರಿಸಿದ ಇಂಗ್ಲೆಂಡ್‌ 499 ರನ್‌ಗಳಿಗೆ ಆಲೌಟ್‌ ಆಯಿತು. 151 ರನ್‌ಗಳ ಇನಿಂಗ್ಸ್‌ ಹಿನ್ನಡೆಯೊದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ನ್ಯೂಜಿಲೆಂಡ್‌ 6 ವಿಕೆಟ್‌ಗೆ 155 ರನ್‌ ಸೇರಿಸಿ ಆಲೌಟ್ ಆಯಿತು.

Kane Williamson Becomes First New Zealander to Score 9000 Test Runs

ಶುಕ್ರವಾರ 131 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದ ಇಂಗ್ಲೆಂಡ್‌ ತಂಡದ ಹ್ಯಾರಿ ಬ್ರೂಕ್‌ ಬ್ಯಾಟಿಂಗ್ ಆರಂಭಿಸಿ 171 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿದರು. ನಾಯಕ ಬೆನ್‌ ಸ್ಟೋಕ್ಸ್‌ 80 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಗಸ್ ಅಟ್ಕಿನ್ಸನ್ 48, ಬ್ರೈಡನ್ ಕಾರ್ಸ್ 33 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 84 ರನ್‌ಗಳಿಗೆ 4 ವಿಕೆಟ್‌, ನಾಥನ್ ಸ್ಮಿತ್‌ 3, ಟೀಮ್ ಸೌಥಿ 2 ವಿಕೆಟ್‌ ಕಬಳಿಸಿದರು.

ಕೇನ್‌ ಅಪರೂಪದ ಸಾಧನೆ

ಎರಡನೇ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಟಾಮ್ ಲಾಥಮ್‌ ಹಾಗೂ ಡ್ವೇನ್‌ ಕಾನ್ವೆ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ರಚಿನ್ ರವೀಂದ್ರ 24 ರನ್‌ ಗಳಿಸಿ ಔಟ್ ಆದರು. ನಾಲ್ಕನೇ ವಿಕೆಟ್‌ಗೆ ಕೇನ್‌ ವಿಲಿಯಮ್ಸನ್‌ ಹಾಗೂ ಡೇರಿಲ್ ಮಿಚೆಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಕೇನ್‌ ವಿಲಿಯಮ್ಸನ್‌ 86 ಇನಿಂಗ್ಸ್‌ನಲ್ಲಿ 7 ಬೌಂಡರಿ ನೆರವಿನಿಂದ 61 ರನ್‌ ಬಾರಿಸಿ ಕ್ರಿಸ್‌ ವೋಕ್ಸ್‌ ತೋಡಿದ ಖೆಡ್ಡಾಗೆ ಬಲಿಯಾದರು.

Kane Williamson Becomes First New Zealander to Score 9000 Test Runs

ಕೇನ್ ವಿಲಿಯಮ್ಸನ್ ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ಪೂರೈಸುತ್ತಿದ್ದಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದರು. ಇದರೊಂದಿಗೆ ವಿಲಿಯಮ್ಸನ್ 9000 ಟೆಸ್ಟ್ ರನ್ ಗಳಿಸಿದ ನ್ಯೂಜಿಲೆಂಡ್ ನ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. ಇದಕ್ಕೂ ಮೊದಲು, ಕಿವೀಸ್‌ ಪರ ಯಾವೊಬ್ಬ ಬ್ಯಾಟರ್‌ ಈ ಸಾಧನೆ ಮಾಡಿರಲಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಪೂರೈಸಿದ ವಿಶ್ವದ 19 ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಕೇನ್‌ ವಿಲಿಯಮ್ಸನ್‌ ತಮ್ಮ ವೃತ್ತಿ ಜೀವನದ 103ನೇ ಟೆಸ್ಟ್‌ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇವರು ಟೆಸ್ಟ್‌ ಕ್ರಿಕೆಟ್‌ನ 182 ಇನಿಂಗ್ಸ್‌ಗಳಲ್ಲಿ 9 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಈ ಪಟ್ಟಿಯಲ್ಲಿ ಸ್ಟೀವನ್ ಸ್ಮಿತ್ ಮೊದಲನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿಂಡೀಸ್ ತಂಡದ ಬ್ರಿಯಾನ್ ಲಾರಾ ಇದ್ದು, ನಂತರದ ಸ್ಥಾನದಲ್ಲಿ ಕುಮಾರ್ ಸಂಗಕ್ಕಾರ ಮತ್ತು ಯೂನಿಸ್ ಖಾನ್ ಇದ್ದಾರೆ.

Story first published: Saturday, November 30, 2024, 13:00 [IST]
Other articles published on Nov 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+