SL vs NZ: ಕುತೂಹಲ ಘಟ್ಟದತ್ತ ಮೊದಲ ಟೆಸ್ಟ್: ದಾಖಲೆ ಬರೆದ ಕೇನ್ ವಿಲಿಯಮ್ಸನ್
ಗಾಲೆ: ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಮನೆ ಮಾಡಿದೆ. ಕೊನೆಯ ದಿನದಾಟದಲ್ಲಿ ಕಿವೀಸ್ ಗೆಲುವಿಗೆ 68 ರನ್ ಅವಶ್ಯಕತೆ ಇದೆ. ಇನ್ನು ಈ ಟೆಸ್ಟ್‌ನಲ್ಲಿ ಜಯದ ಮಾಲೆ ತೊಡಲು ಲಂಕಾ ತಂಡಕ್ಕೂ ಇನ್ನು ಎರಡು ವಿಕೆಟ್ ಬೇಕಿದೆ.
ಭಾನುವರ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 237 ರನ್‌ಗಳಿಂದ ಮುಂದುವರೆಸಿ 309 ರನ್ ಗಳಿಗೆ ಆಲೌಟ್ ಆಯಿತು. 275 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ದಿನದಾಟದ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 207 ರನ್ ಸೇರಿಸಿದೆ. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ (ಅಜೇಯ 91) ಹಾಗೂ ಅಜೀಜ್ ಪಟೇಲ್ ಸೋಮವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾನುವಾರ 4 ವಿಕೆಟ್‌ಗೆ 237 ರನ್‌ಗಳಿಂದ ಆಟ ಮುಂದುವರೆಸಿದ ಶ್ರೀಲಂಕಾ ತಂಡದ ಆಂಜಿಲೋ ಮ್ಯಾಥ್ಯೂಸ್ 5 ಬೌಂಡರಿ ನೆರವಿನಿಂದ 50 ರನ್ ಬಾರಿಸಿ ಅಬ್ಬರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಧನಂಜಯ್ ಡಿ ಸಿಲ್ವಾ (40), ಕುಸಾಲ್ ಮೆಂಡೀಸ್ (23) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಉಳಿದಂತೆ ಶ್ರೀಲಂಕಾ ಬ್ಯಾಟರ್‌ಗಳು ಜವಾಬ್ದಾರಿ ಮರೆತರು.
ಅಜೀಜ್ ಪಟೇಲ್‌ಗೆ 6 ವಿಕೆಟ್
ಶ್ರೀಲಂಕಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಸ್ಪಿನ್ ಬೌಲರ್ ಅಜೀಜ್ ಪಟೇಲ್ ಬಹುವಾಗಿ ಕಾಡಿದರು. ಇವರು 90 ರನ್‌ಗಳನ್ನು ನೀಡಿ ಆರು ವಿಕೆಟ್ ಕಬಳಿಸಿದರು. ವೇಗಿ ವಿಲಿಯಮ್ 3 ವಿಕೆಟ್ ಪಡೆದರು.

ಕಳಪೆ ಆರಂಭ
ಉತ್ತಮ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡದ ಆರಂಭ ಕಳಪೆಯಾಗಿತ್ತು. ಡೇವನ್ ಕಾನ್ವೆ 4 ರನ್ ಬಾರಿಸಿ ಔಟ್ ಆದರು. ಟಾಮ್ ಲಾಥಮ್ (28) ಹಾಗೂ ಕೇನ್ ವಿಲಿಯಮ್ಸನ್ ಜೋಡಿ 45 ರನ್ ಸೇರಿಸಿತು. ಟಾಮ್ ಬ್ಲಂಡೆಲ್ 30 ರನ್ ಸಿಡಿಸಿದರು. ರಚಿನ್ ರವೀಂದ್ರ ಅಜೇಯ 91 ರನ್‌ಗಳ ಜೊತೆಯಾಟವನ್ನು ನೀಡಿದರು. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 9 ಬೌಂಡರಿ, 1 ಸಿಕ್ಸರ್ ಸೇರಿದೆ.
ಕೇನ್ ದಾಖಲೆ
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ 55 ಮತ್ತು 30 ರನ್‌ಗಳ ಇನ್ನಿಂಗ್ಸ್‌ಗಳನ್ನು ಕಟ್ಟಿದ್ದರು. ಇದರೊಂದಿಗೆ ಅವರು ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಂಬರ್-1 ಬ್ಯಾಟರ್ ಎಂಬ ಹಿರಿಮೆ ತನ್ನದಾಗಿಸಿಕೊಂಡರು. ಕೇನ್ ಇದುವರೆಗೆ 359 ಪಂದ್ಯಗಳಲ್ಲಿ 18213 ರನ್ ಗಳಿಸಿದ್ದಾರೆ. ಇವರು ಮಾಜಿ ನಾಯಕ ರಾಸ್ ಟೇಲರ್ ಅವರ 18199 ರನ್ ದಾಖಲೆ ಅಳಿಸಿ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications