Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kane Williamson: ರಾಹುಲ್ ದ್ರಾವಿಡ್ ಅನಗತ್ಯ ರೆಕಾರ್ಡ್ ಬ್ರೇಕ್ ಮಾಡಿದ ವಿಲಿಯಮ್ಸನ್

ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೆಡೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಡುತ್ತಿದ್ದರೆ, ಮತ್ತೊಂದೆಡೆ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್ ಪರ ಸ್ಟಾರ್ ಕ್ಲಾಸಿಕ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಆದರೆ ವಿಧಿ ಹೇಗಿತ್ತೆಂದರೆ ಕೇವಲ 7 ರನ್‌ಗಳಿಂದ ಅವರು ಶತಕ ವಂಚಿತರಾಗಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ ಅವರ ಅನಗತ್ಯ ದಾಖಲೆಯನ್ನು ಕೇನ್ ವಿಲಿಯಮ್ಸನ್ ಮುರಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅದ್ಭುತ ಫಾರ್ಮ್‌ನಲ್ಲಿ ಕಾಣಿಸಿಕೊಂಡ ಕೇನ್ ಶತಕ ಬಾರಿಸುವ ಕನಸು ಕಾಣುತ್ತಿದರು. ಆದರೆ ಅವರ ಕನಸು ನನಸಾಗಲಿಲ್ಲ. ಶತಕ ಹೊಸ್ತಿಲಲ್ಲಿ ಕೇನ್ 93 ರನ್‌ಗಳಿಗೆ ವಿಕೆಟ್‌ ಕಳೆದುಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಲಿಯಮ್ಸನ್ ಶತಕ ಹೊಸ್ತಿಲಲ್ಲಿ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ವಿಲಿಯಮ್ಸನ್ ತಮ್ಮ ವೃತ್ತಿಜೀವನದಲ್ಲಿ 90 ಮತ್ತು 100 ರ ನಡುವೆ 12 ಬಾರಿ ಔಟಾಗಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಅವರ ಅನಗತ್ಯ ದಾಖಲೆಯನ್ನು ವಿಲಿಯಮ್ಸನ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

Kane Williamson breaks Rahul Dravid s Unnecessary Record

ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಟಾಮ್ ಲ್ಯಾಥಮ್ ಪಡೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಡೆವೊನ್ ಕಾನ್ವೇ ಕೇವಲ 2 ರನ್ ಗಳಿಸಿ ಔಟಾದರು. ಟಾಮ್ ಲ್ಯಾಥಮ್ ಅವರು 47 ರನ್‌ಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇನ್ನೊಂದು ತುದಿಯಲ್ಲಿ ಕೇನ್ ವಿಲಿಯಮ್ಸನ್ ತಂಡದ ಸ್ಕೋರ್‌ಗೆ ಅಡಿಪಾಯ ಹಾಕಿದರು. ಆದರೆ ಕೇನ್ 197 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 93 ರನ್ ಗಳಿಸಿ ಆಡುವಾಗ ಇಂಗ್ಲೆಂಡ್ ವೇಗಿ ಅಟ್ಕಿನ್ಸನ್ ಅವರ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

ದ್ರಾವಿಡ್ ದಾಖಲೆ ಬ್ರೇಕ್

ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 90 ಗಡಿಯಲ್ಲಿ ಹಲವು ಬಾರಿ ಔಟಾಗಿ ನಿರಾಸೆ ಅನುಭವಿಸಿದ್ದಾರೆ. ದ್ರಾವಿಡ್ ಕೂಡ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 12 ಬಾರಿ ನರ್ವಸ್ ನೈಂಟಿಗೆ ಬಲಿಯಾಗಿದ್ದಾರೆ. ಆದರೆ ಇಂದು ವಿಲಿಯಮ್ಸನ್ ಅವರ 13ನೇ ಬಾರಿ ಔಟಾಗುವ ಮೂಲಕ ದ್ರಾವಿಡ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈ ಅನಗತ್ಯ ದಾಖಲೆ ಪಟ್ಟಿಯಲ್ಲಿ ಮೊದಲ ಹೆಸರು ಸಚಿನ್ ತೆಂಡೂಲ್ಕರ್ ಅವರದು. ಸಚಿನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 27 ಬಾರಿ 90 ಗಡಿಯಲ್ಲಿ ವಿಕೆಟ್‌ ಕಳೆದುಕೊಂಡಿದ್ದಾರೆ.

Story first published: Friday, November 29, 2024, 8:01 [IST]
Other articles published on Nov 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+