Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಲ್ಲಿ ಫ್ಲೆಮಿಂಗ್ ದಾಖಲೆಯನ್ನು ಅಳಿಸಿ ಹಾಕಿದ ಕೇನ್ ವಿಲಿಯಮ್ಸನ್

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ದಾಖಲೆಯನ್ನು ಬರೆದಿದ್ದಾರೆ. ಪಾಕ್ ವಿರುದ್ಧ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಕೇನ್ ತಂಡದ ಮೊತ್ತ ಹಿಗ್ಗಿಸುವಲ್ಲಿ ನೆರವಾದರು. ಕೇನ್ 79 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸೇರಿದಂತೆ 95 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಕೇನ್ ವಿಲಿಯಮ್ಸನ್ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಕಿವೀಸ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೇನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಅಲ್ಲದೆ 120ರ ಸ್ಟ್ರೈಕ್ ರೇಟ್ ನೊಂದಿಗೆ ರನ್ ಕಲೆ ಹಾಕಿದರು. ಇಫ್ತಕಾರ್ ಅಹ್ಮದ್ ಅವು ತೋಡಿದ ಖೆಡ್ಡಾಗೆ ಬಲಿಯಾದ ಕೇನ್, ಶತಕ ವಂಚಿತರಾದರು. ಕೇನ್ ಐಸಿಸಿ ಟೂರ್ನಿಯ 25 ಪಂದ್ಯಗಳ 24 ಇನಿಂಗ್ಸ್ ಗಳಲ್ಲಿ 1084 ರನ್ ಸಿಡಿಸಿದ್ದಾರೆ. ಈ ವೇಳೆ ಅವರ ಸರಾಸರಿ 63.76 ಆಗಿದೆ. ಇದರಲ್ಲಿ ಎರಡು ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಐಸಿಸಿ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ 148 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿದೆ.

Kane Williamson breaks Stephen Fleming record as New Zealand captain

ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ 1075 ರನ್ ಸಿಡಿಸಿದ್ದಾರೆ. ಈ ರನ್ ಬಾರಿಸಲು 33 ಇನಿಂಗ್ಸ್ ತೆಗೆದುಕೊಂಡಿದ್ದು, 35.33 ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಈ ವೇಳೆ ಫ್ಲೆಮಿಂಗ್ ಬೆಸ್ಟ್ ಸ್ಕೋರ್ 134 ರನ್ ಆಗಿದೆ.

ಪ್ರಸಕ್ತ ವಿಶ್ವಕಪ್ ನ ಬಹುತೇಕ ಪಂದ್ಯಗಳಿಂದ ಕೇನ್ ಬೆಂಚ್ ಕಾಯ್ದಿದ್ದಾರೆ. ಗಾಯಕ್ಕೆ ತುತ್ತಾಗಿದ್ದ ಕೇನ್ ಟೂರ್ನಿಯಿಂದ ಬಹು ಪಂದ್ಯ ಹೊರ ಕೂತಿದ್ದರು. ಪ್ರಸಕ್ತ ವಿಶ್ವಕಪ್ ನಲ್ಲಿ ಕೇನ್ 173 ರನ್ ಸರಾಸರಿಯಲ್ಲಿ 173 ರನ್ ಕಲೆ ಹಾಕಿದ್ದಾರೆ.

ಇನ್ನು ಇದೇ ಪಂದ್ಯದಲ್ಲಿ ಕಿವೀಸ್ ತಂಡದ ಯುವ ಆಟಗಾರ ರಚಿನ್ ರವಿಂದ್ರ ದಾಖಲೆಯನ್ನು ಬರೆದಿದ್ದಾರೆ. ರಚಿನ್ 24 ವರ್ಷದೊಳಗೆ ವಿಶ್ವಕಪ್ ನಲ್ಲಿ ಮೂರು ಶತಕ ಸಿಡಿಸಿದ ದಾಖಲೆಯನ್ನು ಬರೆದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಪ್ರಸಕ್ತ ವಿಶ್ವಕಪ್ ನಲ್ಲಿ ರಚಿನ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ

Story first published: Saturday, November 4, 2023, 15:53 [IST]
Other articles published on Nov 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+