For Quick Alerts
ALLOW NOTIFICATIONS  
For Daily Alerts
 

ಪಾಕ್ ವಿರುದ್ಧ ದ್ವಿಶತಕ ಸಿಡಿಸಿದ ಕೇನ್ ವಿಲಿಯಮ್ಸನ್: ಕೀವಿಸ್ ಪರ ವಿಶೇಷ ಸಾಧನೆ

Kane Williamson registered double century and fastest 7000 test run scorer for new zealand

ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಭರ್ಜರಿ ದ್ವಿಶತಕದ ಪ್ರದರ್ಶನ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದೆ. ಈ ಮೂಲಕ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 200 ರನ್‌ಗಳಿಗೂ ಅಧಿಕ ಮುನ್ನಡೆಯನ್ನು ಪಡೆದು ಮುನ್ನುಗ್ಗಿದೆ.

ಪಂದ್ಯದ ಎರಡನೇ ದಿನದಾಟದಲ್ಲಿ ಶತಕವನ್ನು ಪೂರೈಸಿ ಅಜೇಯವಾಗುಳಿದಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರನೇ ದಿನದಾಟದಲ್ಲಿ ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. 327 ಎಸೆತದಲ್ಲಿ ಕೇನ್ ವಿಲಿಯಮ್ಸನ್ 200 ರನ್ ಪೂರ್ಣಗೊಳಿಸಿ ಸಂಭ್ರಮಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಅದ್ಭುತ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ.

ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ದ್ವಿಶತಕವನ್ನು ಮಾತ್ರವಲ್ಲದೆ ಮತ್ತೊಂದು ಮಹತ್ವದ ಸಾಧನೆಯನ್ನು ಕೂಡ ಮಾಡಿದ್ದಾರೆ. ನ್ಯೂಜಿಲೆಂಡ್ ತಂಡದ ಆಟಗಾರನಾಗಿ ಅತ್ಯಂತ ವೇಗವಾಗಿ 7000 ರನ್ ಗಳಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೇನ್ ಪಾತ್ರರಾಗಿದ್ದಾರೆ.

ನ್ಯೂಜಿಲೆಂಡ್ ತಂಡದ ಪರವಾಗಿ ರಾಸ್ ಟೇಯ್ಲರ್ ಅತಿ ಹೆಚ್ಚಿನ ಟೆಸ್ಟ್ ರನ್‌ಗಳನ್ನು ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ಹೊಂದಿದ್ದು 7000 ರನ್‌ಗಳ ಮೈಲಿಗಲ್ಲು ತಲುಪಲು ಅವರು 96 ಪಂದ್ಯಗಳನ್ನು ಬಳಸಿದ್ದರು. ಈಗ ಕೇನ್ ವಿಲಿಯಮ್ಸನ್ ರಾಸ್ ಟೇಯ್ಲರ್ ಹಾಗೂ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಇಬ್ಬರನ್ನು ಹಿಂದಿಕ್ಕಿದ್ದು 83ನೇ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

ನ್ಯೂಜಿಲೆಂಡ್ ತಂಡದ ಪರವಾಗಿ ಸದ್ಯ ಮೂವರು ಮಾತ್ರವೇ 7000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಸ್ಟೀಫನ್ ಫ್ಲೆಮಿಂಗ್ 111 ಟೆಸ್ಟ್ ಪಂದ್ಯಗಳಲ್ಲಿ 7,172 ರನ್ ಗಳಿಸಿದ್ದರೆ, 105 ಪಂದ್ಯಗಳನ್ನು ಆಡಿರುವ ರಾಸ್ ಟೇಯ್ಲರ್ 7379 ರನ್ ಗಳಿಸಿದ್ದಾರೆ. ಶನಿವಾರ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಪರವಾಗಿ ಸ್ಟೀಫನ್ ಪ್ಲೆಮಿಂಗ್ ಹೆಸರಿನಲ್ಲಿದ್ದ ಅತಿ ಹೆಚ್ಚು 50+ ರನ್ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು.

Story first published: Tuesday, January 5, 2021, 10:57 [IST]
Other articles published on Jan 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+