For Quick Alerts
ALLOW NOTIFICATIONS  
For Daily Alerts
 

IND vs NZ Test: ಪುಣೆ ಟೆಸ್ಟ್‌ಗೂ ಮುನ್ನ ದೊಡ್ಡ ಆಘಾತ: ಎರಡನೇ ಟೆಸ್ಟ್‌ನಿಂದ ಸ್ಟಾರ್ ಆಟಗಾರ ಔಟ್

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಟೆಸ್ಟ್‌ ಪಂದ್ಯ ಅಕ್ಟೋಬರ್‌ 24ರಿಂದ ಆರಂಭವಾಗಲಿದೆ. ಈ ಟೆಸ್ಟ್‌ಗೆ ಉಭಯ ತಂಡಗಳು ಭರದ ತಯಾರಿ ನಡೆಸಿವೆ. ಈ ಬೆನ್ನಲ್ಲೆ ಸ್ಟಾರ್ ಆಟಗಾರನೊಬ್ಬ ತಂಡಕ್ಕೆ ಅಲಭ್ಯರಾಗಿರುವುದು ನಿಜಕ್ಕೂ ತಂಡಕ್ಕೆ ಪೆಟ್ಟು ಬಿದ್ದಂತೆ ಆಗಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ತಂಡ 8 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್‌ ಪಂದ್ಯ ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಇರಾದೆಯನ್ನು ಟೀಮ್ ಇಂಡಿಯಾ ಹೊಂದಿದೆ. ಆದರೆ ಟೆಸ್ಟ್‌ಗೂ ಮುನ್ನ ಬಂದಿರುವ ಸುದ್ದಿ ನಿಜಕ್ಕೂ ಪ್ರವಾಸಿ ತಂಡದ ಟೆನ್ಷನ್ ಹೆಚ್ಚು ಮಾಡಿದೆ.

Kane Williamson Ruled Out of Pune Test Major Setback for New Zealand in Series Against India

ಪ್ರವಾಸಿ ತಂಡಕ್ಕೆ ಪೆಟ್ಟು

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡದ ಪರ ಸ್ಟಾರ್ ಆಟಗಾರ ಕೇನ್‌ ವಿಲಿಯಮ್ಸನ್‌ ಅಂಗಳಕ್ಕೆ ಇಳಿದಿರಲಿಲ್ಲ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇವರು ಆತಿಥೇಯ ತಂಡದ ಬೌಲರ್‌ಗಳಿಗೆ ಕಾಟ ನೀಡಬಲ್ಲರು ಎಂದು ಎಲ್ಲರೂ ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ಆದರೆ ಆ ಕನಸು ನುಚ್ಚು ನೂರಾಗಿದೆ. ಶ್ರೀಲಂಕಾ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರಿಂದ ಇನ್ನು ಚೇತರಿಸಿಕೊಂಡಿಲ್ಲ.

ಗಾಯದ ಸಮಸ್ಯೆಯಿಂದ ಕೇನ್‌ ವಿಲಿಯಮ್ಸನ್‌ ಅವರು ಬಳಲುತ್ತಿದ್ದು, ಇನ್ನು ಸಂಪೂರ್ಣವಾಗಿ ಫಿಟ್ ಆಗಿಲ್ಲ. ಹೀಗಾಗಿ ಅವರು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಂಗಳಕ್ಕೆ ಇಳಿಯುತ್ತಿಲ್ಲ. ಗಾಯ ಗುಣಮುಖರಾಗದ ಹಿನ್ನೆಲೆ ಚಿಕಿತ್ಸೆ ಮುಂದುವರೆಸಿದ್ದಾರೆ. ಫಿಟ್ನೆಸ್‌ ಮರಳಿ ಪಡೆಯಲು ಕೇನ್‌ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇವರು ಯಾವಾಗ ಅಂಗಳಕ್ಕೆ ಇಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Kane Williamson Ruled Out of Pune Test Major Setback for New Zealand in Series Against India

ಸ್ಟಾರ್ ಬ್ಯಾಟರ್‌ ತಂಡದಿಂದ ದೂರ ಉಳಿದಿರುವುದು ನಿಜಕ್ಕೂ ಪ್ರವಾಸಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. ಇವರು ಟೆಸ್ಟ್‌ನಲ್ಲಿ ತಮ್ಮ ಕಲಾತ್ಮಕ ಬ್ಯಾಟಿಂಗ್‌ಗೆ ಹೆಸರುವಾಗಿ. ಇವರು ನ್ಯೂಜಿಲೆಂಡ್‌ ತಂಡಕ್ಕಾಗಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಇವರ ಅನುಪಸ್ಥಿತಿಯ ಲಾಭ ಪಡೆಯಲು ರೋಹಿತ್ ಪಡೆ ಪ್ಲ್ಯಾನ್ ಮಾಡಿಕೊಂಡಿದೆ. ಇವರು ಕಿವೀಸ್‌ ಪರ 102 ಟೆಸ್ಟ್ ಪಂದ್ಯಗಳಲ್ಲಿ 8881 ರನ್ ಗಳಿಸಿದ್ದು, 32 ಶತಕಗಳು ಸೇರಿವೆ.

ಕೋಚ್ ಹೇಳಿದ್ದೇನು?

ಕೇನ್‌ ವಿಲಿಯಮ್ಸನ್‌ ಅವರ ಗಾಯದ ಬಗ್ಗೆ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್‌ ಪ್ರಮುಖ ಹೇಳಿಕೆ ನೀಡಿದ್ದಾರೆ. ಕೇನ್‌ ಅವರು ಇನ್ನೂ 100% ಫಿಟ್ ಆಗಿಲ್ಲ. ಮುಂದಿನ ದಿನಗಳಲ್ಲಿ ವಿಲಿಯಮ್ಸನ್‌ ಅವರು ಮತ್ತಷ್ಟು ಫಿಟ್ ಆಗಿ ಕಾಣುವ ನಿರೀಕ್ಷೆ ಇದೆ. ಅವರು ಮೂರನೇ ಟೆಸ್ಟ್‌ಗೆ ಲಭ್ಯ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇವರು ಭಾರತದಲ್ಲಿ ಒಟ್ಟು 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1 ಶತಕ, 3 ಅರ್ಧಶತಕ ಸೇರಿದಂತೆ 503 ರನ್‌ ಸಿಡಿಸಿದ್ದಾರೆ.

Story first published: Tuesday, October 22, 2024, 8:43 [IST]
Other articles published on Oct 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+