For Quick Alerts
ALLOW NOTIFICATIONS  
For Daily Alerts
 

ಒಂದು ಮಾದರಿಯಲ್ಲಿ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ ಕೇನ್ ವಿಲಿಯಮ್ಸನ್: ವರದಿ

Kane Williamson set to quit as the captain of the Black Caps in one format

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇತ್ತೀಚೆಗೆ ತಮ್ಮ ಹಿಂದಿನ ಫಾರ್ಮ್‌ನಲ್ಲಿಲ್ಲ ಎಂಬುದು ಸ್ಪಷ್ಟ. ಮೂರು ಮಾದರಿಯಲ್ಲಿಯೂ ಕಳೆದ ಹಲವು ವರ್ಷಗಳಿಂದ ಕೇನ್ ವಿಲಿಯಮ್ಸನ್ ಕಿವೀಸ್ ಪಡೆಯನ್ನು ಮುನ್ನಡೆಸುತ್ತಿದ್ದಾರೆ. ಆದರೆ ಫಾರ್ಮ್ ಕಾರಣದಿಂದಾಗಿ ನಾಯಕತ್ವದ ಬಗ್ಗೆಯೂ ಅಪಸ್ವರಗಳು ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ನಾಯಕತ್ವದ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕೇನ್ ವಿಲಿಯಮ್ಸನ್ ಮೂರು ಮಾದರಿಗಳ ಪೈಕಿ ಒಂದು ಮಾದರಿಯ ನಾಯಕತ್ವವನ್ನು ತೊರೆಯಲಿದ್ದಾರೆ ಎನ್ನಲಾಗಿದೆ. ಆದರೆ ಯಾವ ಮಾದರಿಯ ನಾಯಕತ್ವವನ್ನು ಕೇನ್ ಬಿಟ್ಟುಕೊಡಲಿದ್ದಾರೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವರ ಫಾರ್ಮ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಟಿ20 ಮಾದರಿಯ ನಾಯಕತ್ವದಿಂದ ಹೊರಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಬ್ಲ್ಯಾಕ್ ಕ್ಯಾಪ್ಸ್ ಪಡೆಯ ನಾಯಕ ಹಾಗೂ ಪ್ರಮುಖ ಆಟಗಾರ ಆಗಿರುವ ಕೇನ್ ವಿಲಿಯಮ್ಸನ್‌ಗೆ ಕೆಲಸದ ಒತ್ತಡದ ತುಂಬಾ ಹೆಚ್ಚಾಗಿದೆ. ಅಲ್ಲದೆ ಮೊಣಕೈ ಗಾಯ ಕೂಡ ಅನುಭವಿ ಆಟಗಾರನಿಗೆ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡಿದೆ. ಈ ಕಾರಣದಿಂದಾಗಿ ಕೇನ್ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆಯಿದೆ.

ಇನ್ನು ಕೇನ್ ವಿಲಿಯಮ್ಸನ್ ಬದಲಿಗೆ ಯಾರು ತಂಡವನ್ನು ಮುನ್ನಡೆಸಬಹುದು ಎಂಬುದು ಕೂಡ ಈಗ ಕುತೂಹಲಕ್ಕೆ ಕಾರಣವಾಗಿದೆ. ಟಾಮ್ ಲ್ಯಾಥಮ್ ಮತ್ತು ಟಿಮ್ ಸೌಥಿ ಇಬ್ಬರೂ ಈ ಹಿಂದೆಕೇನ್ ವಿಲಿಯಮ್ಸನ್ ಲಭ್ಯವಿಲ್ಲದಿದ್ದಾಗ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಲ್ಯಾಥಮ್ ಹೆಚ್ಚಾಗಿ ಟೆಸ್ಟ್ ಮಾದರಿಯಲ್ಲಿ ತಂಡವನ್ನು ಮುನ್ನಡೆಸಿದರೆ ಸೌಥಿ ಸೀಮಿತ ಓವರ್‌ಗಳನ್ನು ತಂಡವನ್ನು ಮುನ್ನಡೆಸಿದ್ದಾರೆ. ಹೀಗಾಗಿ ಕೇನ್ ಯಾವ ಮಾದರಿಯ ನಾಯಕತ್ವ ತೊರೆಯಲಿದ್ದಾರೆ ಎಂದು ಗಮನಿಸಿಕೊಂಡು ಈ ಇಬ್ಬರಲ್ಲಿ ಒಬ್ಬರನ್ನು ನಾಯಕನನ್ನಾಗಿ ನೇಮಿಸುವ ಸಾಧ್ಯತೆಯಿದೆ.

32ರ ಹರೆಯದ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಎಲ್ಲಾ ಮಾದರಿಗಳಲ್ಲಿ 333 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 193 ಪಂದ್ಯಗಳಲ್ಲಿ ಕಿವೀಸ್ ಪಡೆಯ ನಾಯಕತ್ವ ವಹಿಸಿಕೊಂಡಿದ್ದಾರೆ. ಕೇನ್ ನಾಯಕತ್ವದಲ್ಲಿ ಕಿವೀಸ್ ಪಡೆ 99 ಪಂದ್ಯಗಳನ್ನು ಗೆದ್ದಿದೆ.

Story first published: Wednesday, December 14, 2022, 23:55 [IST]
Other articles published on Dec 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+