Kane Williamson: 'ನಾಯಕತ್ವ ಹಸ್ತಾಂತರಿಸುವ ಸಮಯ ಬಂದಿದೆ'; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಕೇನ್ ವಿಲಿಯಮ್ಸನ್!
ಜೂನ್ 21 ಶುಕ್ರವಾರ, ನ್ಯೂಜಿಲೆಂಡ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅವರು ವೈಟ್ ಬಾಲ್ ಕ್ರಿಕೆಟ್‌ನ ನಾಯಕತ್ವವನ್ನು ತೊರೆದ ಎರಡು ದಿನಗಳ ನಂತರ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ತಂಡದ ಕಳಪೆ ಪ್ರದರ್ಶನದ ನಂತರ ಕೇನ್ ವಿಲಿಯಮ್ಸನ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಇದೀಗ ವಿಲಿಯಮ್ಸನ್ ತಮ್ಮ ಅನುಭವಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ವ್ಯಕ್ತಪಡಿಸ್ದಾರೆ.

ಕೇನ್ ವಿಲಿಯಮ್ಸನ್ ಭಾವನಾತ್ಮಕ ಪೋಸ್ಟ್
ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಮುಂದುವರಿಸಲು ವೈಟ್-ಬಾಲ್ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಕೇನ್ ವಿಲಿಯಮ್ಸನ್, ತಾವು ಕಿವೀಸ್ ತಂಡದೊಂದಿಗೆ ಇರುವ 5 ಫೋಟ್‌ಗಳ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಈ ತಂಡದ ನಾಯಕತ್ವ ವಹಿಸಿರುವುದು ಗೌರವ ಮತ್ತು ಸೌಭಾಗ್ಯ. 8 ವರ್ಷಗಳ ನಂತರ, ನಾಯಕತ್ವವನ್ನು ಹಸ್ತಾಂತರಿಸುವ ಸಮಯ ಬಂದಿದೆ. ಸಾಕಷ್ಟು ಏರಿಳಿತಗಳು ಇದ್ದವು, ಆದರೆ ಮಹಾನ್ ವ್ಯಕ್ತಿಗಳ ಗುಂಪಿನೊಂದಿಗೆ ಉತ್ತಮ ಪ್ರಯಾಣದ ಎಲ್ಲಾ ಭಾಗಗಳು ಹೊಸ ಅನುಭವ ತಂದಿದೆ. ಈ ತಂಡ ಮುಂಬರುವ ಕ್ರಿಕೆಟ್‌ನಲ್ಲಿ ಏನಿದೆ ಎಂಬುದರ ಕುರಿತು ಉತ್ಸುಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ಕಳಪೆ ಪ್ರದರ್ಶನ
ಪ್ರಸುತ್ತ ನಡೆಯುತ್ತಿರುವ ಟಿ20 ವಿಶ್ವಕಪ್ 2024ರಲ್ಲಿ ನ್ಯೂಜಿಲೆಂಡ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಪರಿಣಾಮ
ಕೇನ್ ವಿಲಿಯಮ್ಸನ್ ವೈಟ್-ಬಾಲ್ ಕ್ರಿಕೆಟ್‌ನ ನಾಯಕತ್ವವನ್ನು ತೊರೆಯಲು ಕಾರಣವಾಯಿತು.
ನ್ಯೂಜಿಲೆಂಡ್ ತಂಡ ಗುಂಪು ಹಂತದ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2ರಲ್ಲಿ ಸೋಲು ಕಂಡಿತ್ತು. ಕಿವೀಸ್ ತಂಡವನ್ನು ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಸೋಲಿಸಿದವು. ಇದು ಸೂಪರ್-8 ಹಂತವನ್ನು ಪ್ರವೇಶಿಸಲು ಅಡ್ಡಿಯಾಯಿತು. ಹೀಗಾಗಿ ಗುಂಪು ಹಂತದಲ್ಲೇ ನ್ಯೂಜಿಲೆಂಡ್ ತಂಡ ಟೂರ್ನಿಯಿಂದ ಹೊರ ಬಿದ್ದಿತ್ತು.
ಕೇನ್ ವಿಲಿಯಮ್ಸನ್ ಅವರ ಕ್ರಿಕೆಟ್ ವೃತ್ತಿಜೀವನ
ಕೇನ್ ವಿಲಿಯಮ್ಸನ್ 100 ಟೆಸ್ಟ್, 165 ಏಕದಿನ ಮತ್ತು 93 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಕೇನ್ ಟೆಸ್ಟ್ ಪಂದ್ಯಗಳಲ್ಲಿ 8743, ಏಕದಿನದಲ್ಲಿ 6810, ಟಿ20ಯಲ್ಲಿ 2575 ರನ್ ಬಾರಿಸಿದ್ದಾರೆ.
ಕೇನ್ ನಾಯಕತ್ವದಲ್ಲಿ ಕಿವೀಸ್ ಪಡೆ 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2021 ಟಿ20 ಫೈನಲ್‌ಗಳನ್ನು ತಲುಪಿದೆ. ಜೊತೆಗ ಭಾರತ ವಿರುದ್ಧ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ತಂಡದ ನಾಯಕರಾಗಿದ್ದರು.
ವಿಲಿಯಮ್ಸನ್ ಅವರು 40 ಟೆಸ್ಟ್‌ಗಳಲ್ಲಿ (22 ಗೆಲುವು, 10 ಸೋಲುಗಳು), 91 ಏಕದಿನಗಳಲ್ಲಿ (46 ಗೆಲುವುಗಳು, 40 ಸೋಲುಗಳು) ಮತ್ತು 75 ಟಿ20 ಗಳಲ್ಲಿ (39 ಗೆಲುವುಗಳು, 34 ಸೋಲುಗಳು) ನ್ಯೂಜಿಲೆಂಡ್‌ಗೆ ನಾಯಕರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications