Kane Williamson: ಕಿವೀಸ್ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ಗುಡ್ ಬೈ!
ಜೂನ್ 19 ಬುಧವಾರ, ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡ ಟ್ರೋಫಿ ಗೆಲ್ಲುವ ಕನಸು ಹೊತ್ತು ಬಂದಿತ್ತು. ಆದರೆ ಆರಂಭಿಕ ಗುಂಪು ಹಂತದ ಪಂದ್ಯಗಳಲ್ಲಿ ಕಿವೀಸ್ ಸೋತ ಬಳಿಕ ಟೂರ್ನಿಯಿಂದ ಹೊರ ಬಿದ್ದಿದೆ.
ಇದರ ಬೆನ್ನಲ್ಲೇ ಕಿವೀಸ್ ತಂಡದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಶಾಕಿಂಗ್ ನಿರ್ಧಾರ ಘೋಷಣೆ ಮಾಡಿದ್ದಾರೆ. ವೈಟ್ ಬಾಲ್ ನ್ಯೂಜಿಲೆಂಡ್ ತಂಡದ ನಾಯಕತ್ವದಿಂದ ಕೇನ್ ವಿಲಿಯಮ್ಸನ್ ಕೆಳಗಿಳಿದಿದ್ದಾರೆ.

ಇದರ ಜೊತೆಗೆ 2024-25ರ ಕೇಂದ್ರ ಗುತ್ತಿಗೆಯನ್ನು ಕೂಡ ನಿರಾಕರಿಸಿರುವ ಕೇನ್ಸ್ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಆದರೆ, ಗುತ್ತಿಗೆ ಇಲ್ಲದ ಹೊರತಾಗಿಯೂ ಮೂರು ಮಾದರಿಯ ತಂಡಗಳಲ್ಲಿ ಆಡುವುದಾಗಿ ಕೇನ್ಸ್ ತಿಳಿಸಿದ್ದಾರೆ.
ಕೇನ್ ವಿಲಿಯಮ್ಸನ್ ಹೇಳಿದ್ದೇನು?
ಕಿವೀಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿರುವ ಬಗ್ಗೆ ಕೇನ್ ಪ್ರತಿಕ್ರಿಯಿಸಿ, 'ತಂಡವು ಎಲ್ಲಾ ಸ್ವರೂಪಗಳಲ್ಲಿ ಪ್ರಗತಿ ಕಾಣುವುದಕ್ಕೆ ಸಹಾಯ ಮಾಡಲು ನಾನು ತುಂಬಾ ಉತ್ಸುಕನಾಗಿದ್ದು, ಅದಕ್ಕೆ ಕೊಡುಗೆ ನೀಡಲು ಬಯಸುತ್ತೇನೆ.
ನಾನು ವಾರ್ಷಿಕ ಒಪ್ಪಂದವನ್ನು ಸ್ವೀಕರಿಸದಿದ್ದರೂ ನ್ಯೂಜಿಲೆಂಡ್‌ನ ಬೇಸಿಗೆಯಲ್ಲಿ ಸಾಗೋರತ್ತರ ಪಂದ್ಯಗಳಲ್ಲಿ ಆಡುತ್ತೇನೆ. ನ್ಯೂಜಿಲೆಂಡ್ ಪರ ಆಡುವುದು ನನಗೆ ಬಹಳ ಅಮೂಲ್ಯವಾಗಿದೆ.
ತಂಡಕ್ಕೆ ಏನಾದರೂ ಮರಳಿ ಕೊಡಬೇಕೆಂಬ ನನ್ನ ಆಸೆ ಇನ್ನೂ ಕಡಿಮೆಯಾಗಿಲ್ಲ. ಆದರೆ, ಕ್ರಿಕೆಟ್‌ನ ಹೊರಗಿನ ನನ್ನ ಜೀವನ ಬದಲಾಗಿದೆ. ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ನನಗೆ ಇನ್ನೂ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇನ್ ಅವರನ್ನು ಉಳಿಸಿಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಅವರು ಬ್ಲ್ಯಾಕ್‌ಕ್ಯಾಪ್‌ಗಳಿಗಾಗಿ ಪ್ರಮುಖ ಪಾತ್ರವನ್ನು ವಹಿಸುವುದನ್ನು ಮುಂದುವರಿಸಬಹುದು.
ಮುಂದಿನ 2025ರ ಜನವರಿ ವರೆಗೆ ನ್ಯೂಜಿಲೆಂಡ್‌ನಲ್ಲಿ ಕಡಿಮೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಾಗುತ್ತದೆ. ಆ ಅವಧಿಯ ಹೊರಗೆ ಕೇನ್ ಇನ್ನೂ ಬ್ಲ್ಯಾಕ್‌ಕ್ಯಾಪ್‌ಗಳಿಗೆ ಲಭ್ಯವಿರುತ್ತಾರೆ. ಬ್ಲ್ಯಾಕ್‌ಕ್ಯಾಪ್‌ಗಳಿಗಾಗಿ ಕೇಂದ್ರೀಯ ಗುತ್ತಿಗೆ ಆಟಗಾರರನ್ನು ಆಯ್ಕೆ ಮಾಡುವಲ್ಲಿ ನಮ್ಮ ಬೋರ್ಡ್ ಹೆಚ್ಚಿನ ಆದ್ಯತೆಯನ್ನು ಹೊಂದಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಿಇಒ ಸ್ಕಾಟ್ ವೀನಿಂಕ್ ಅವರು ತಿಳಿಸಿದ್ದಾರೆ.

ಕೇನ್ ವೃತ್ತಿಜೀವನ
33 ವರ್ಷದ ಕೇನ್ ವಿಲಿಯಮ್ಸನ್ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 100 ಟೆಸ್ಟ್, 165 ಏಕದಿನ ಮತ್ತು 93 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಕ್ರಮವಾಗಿ 8743 ರನ್, 6811 ರನ್ ಮತ್ತು 2575 ರನ್ ಗಳಿಸಿದ್ದಾರೆ.
ಜೊತೆಗೆ ತಮ್ಮ ಹೆಸರಿನಲ್ಲಿ 32 ಟೆಸ್ಟ್ ಮತ್ತು 13 ಏಕದಿನ ಶತಕಗಳಿವೆ. ಅಲ್ಲದೆ ಟೆಸ್ಟ್ ಮಾದರಿಯಲ್ಲಿ 6 ದ್ವಿಶತಕಗಳನ್ನು ಗಳಿಸಿರುವ ದಾಖಲೆಯನ್ನು ಹೊಂದಿದ್ದಾರೆ.
ನಾಯಕನಾಗಿ ಕೇನ್ ಸಾಧನೆ
- 2016- ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು
- 2019- ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋಲು
- 2021- ಭಾರತದ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿ ಗೆಲುವು
- 2021- ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋಲು
- 2023- ಭಾರತದ ವಿರುದ್ಧ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು
- 2022- ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications