Kane Williamson: ಯಶಸ್ವಿ ಜೈಸ್ವಾಲ್ ದಾಖಲೆ ಮೀರಿ ನಿಂತ ಕೇನ್ ವಿಲಿಯಮ್ಸನ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಬ್ರಿಸ್ಬೇನ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯತ್ತಿದೆ. ಇನ್ನೊಂದೆಡೆ ಹ್ಯಾಮಿಲ್ಟನ್‌ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ವೇಳೆ ಇಂಗ್ಲೆಂಡ್ ತಂಡಕ್ಕಿ ನ್ಯೂಜಿಲೆಂಡ್ ತಂಡಕ್ಕೆ ಬೃಹತ್ ಮೊತ್ತದ ಗುರಿಯನ್ನು ನೀಡಿದೆ.
ಸೋಮವಾರ ಮೂರನೇ ದಿನದಾಟವನ್ನು 3 ವಿಕೆಟ್‌ಗೆ 146 ರನ್‌ಗಳಿಂದ ಆಟ ಮುಂದವರಿಸಿದ ನ್ಯೂಜಿಲೆಂಡ್ 453 ರನ್‌ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಡ್ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 18 ರನ್ ಸೇರಿಸಿತು. ಇಂಗ್ಲೆಂಡ್‌ಗೆ ಈ ಪಂದ್ಯವನ್ನು ಗೆಲ್ಲಲು ಇನ್ನು 640 ರನ್‌ಗಳ ಅವಶ್ಯಕತೆ ಇದೆ.

ಕೇನ್ ಅಬ್ಬರದ ಶತಕ
ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ ಪರ ಅನುಭಿ ಬ್ಯಾಟರ್ ಕೇನ್ ವಿಲಿಯ್ಸಮ್ ತಮ್ಮ ಅನುಭವ ಬಳಸಿಕೊಂಡು ತಂಡಕ್ಕೆ ಆಧಾರವಾದರು. ಇವರ ಅಟಕ್ಕೆ ಬ್ರೇಕ್ ಹಾಕಲು ಇಂಗ್ಲೆಂಡ್ ಮಾಡಿಕೊಂಡಿದ್ದ ಪ್ಲ್ಯಾನ್ ಎಲ್ಲ ಉಲ್ಟಾ ಹೊಡಿಯೊತು. ಇವರು ನಾಲ್ಕನೇ ವಿಕೆಟ್‌ಗೆ ರಚಿನ್ ರವಿಂದ್ರ ಅವರೊಂದಿಗೆ ಸೇರಿಕೊಂಡು 180 ಎಸೆತಗಳಲ್ಲಿ 107 ರನ್ ಜೊತೆಯಾಟದ ಕಾಣಿಕೆ ನೀಡಿದರು. ರಚಿನ್ ರವೀಂದ್ರ 44 ರನ್‌ಗಳಿಗೆ ಆಟ ಮುಗಿಸಿದರು.
ಐದನೇ ವಿಕೆಟ್‌ಗೆ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಬ್ಲಂಡೆಲ್ ಉತ್ತಮ ಜೊತೆಯಾಟವನ್ನು ಆಡಿ ತಂಡಕ್ಕೆ ನೆರವಾದರು. ಈ ಜೋಡಿ 114 ಎಸೆತಗಳಲ್ಲಿ 92 ರನ್ ಸೇರಿಸಿತು. ಕೇನ್ ವಿಲಿಯಮ್ಸನ್ 204 ಎಸೆತಗಳಲ್ಲಿ 20 ಬೌಂಡರಿ, 1 ಸಿಕ್ಸರ್ ಸಹಾಯದಿಂದ 156 ರನ್ ಸಿಡಿಸಿದರು. ಡೇರಿಲ್ ಮಿಚೆಲ್ 60, ಟಾಮ್ ಬ್ಲಂಡೆಲ್ 44, ಮಿಚೆಲ್ ಸ್ಯಾಂಟ್ನರ್ 49 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಜಾಕಬ್ ಬೇತೆಲ್ 3 ವಿಕೆಟ್
ಇಂಗ್ಲೆಂಡ್ ತಂಡದ ಪರ ಆರ್‌ಸಿಬಿ ಪ್ಲೇಯರ್ ಜಾಕಬ್ ಬೇತೆಲ್ 3, ಬೆನ ಸ್ಟೋಕ್ಸ್ ಹಾಗೂ ಸೋಯಿಬ್ ಬಶಿರ ತಾಲಾ ಎರಡು ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. 18 ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷಟಕ್ಕೆ ಸಿಲುಕಿದೆ. ಇಂಗ್ಲೆಂಡ್ ಪರ ಯಾವೊಬ್ ಬ್ಯಾಟರ್ ಡಬಲ್ ಡಿಜಿಟ್ ಮುಟ್ಟಲೇ ಇಲ್ಲ.
ಯಶಸ್ವಿ ಜೈಸ್ವಾಲ್ ದಾಖಲೆ ಹಿಂದಿಕ್ಕಿದ ಕೇನ್
ಕೇನ್ ವಿಲಿಯಮ್ಸನ್ ಭರ್ಜರಿ ಫಾರ್ಮ್‌ನಲ್ಲಿದ್ದು, ಶತಕ ಬಾರಿಸುತ್ತಿದ್ದಂತೆ ದಾಖಲೆ ಬರೆದಿದ್ದಾರೆ. ಇವರು ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಅಧಿಕ ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಕಮಿಂದು ಮೆಂಡಿಸ್ ಐದು ಶತಕ ಬಾರಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ ಏಳು ಶತಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಒಟ್ಟು 4 ಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications