Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kane Williamson: ವಿರಾಟ್ ಕೊಹ್ಲಿ, ಎಬಿಡಿ ದಾಖಲೆ ಅಳಿಸಿದ ಕೇನ್‌ ವಿಲಿಯಮ್ಸನ್‌

ಪಾಕಿಸ್ತಾನ ನೆಲದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ನ್ಯೂಜಿಲೆಂಡ್‌ ತ್ರಿಕೋನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ 6 ವಿಕೆಟ್‌ ಗಳಿಂದ ಮಣಿಸಿದ ನ್ಯೂಜಿಲೆಂಡ್‌ ಫೈನಲ್‌ ಅರ್ಹತೆ ಪಡೆದಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್‌ ಹಾಗೂ ಡಾನ್ ಕಾನ್ವೆ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ಪ್ಲಸ್‌ ಪಾಯಿಂಟ್‌.

ನ್ಯೂಜಿಲೆಂಡ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಈ ವೇಳೆ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಮಾಡಿ 6 ವಿಕೆಟ್‌ಗೆ 304 ರನ್‌ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ 48.4 ಓವರ್‌ಗಳಲ್ಲಿ 4 ವಿಕೆಟ್‌ಗೆ 308 ರನ್‌ ಕಲೆ ಹಾಕಿ ಗೆಲುವು ದಾಖಲಿಸಿತು. ಕಿವೀಸ್‌ ಗೆಲುವಿನಲ್ಲಿ ಕೇನ್‌ ವಿಲಿಯಮ್ಸನ್‌ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ 7000 ರನ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಅವರು ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು.

Kane Williamson s Record-Breaking Century Secures New Zealand s Final Spot in Tri-Nation ODI Series

ಕೇನ್‌ ದೊಡ್ಡ ದಾಖಲೆ

ಕೇನ್ ವಿಲಿಯಮನ್ಸ್‌ ಏಕದಿನ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್‌ಗಳನ್ನು ಪೂರ್ಣಗೊಳಿಸಲು 132 ರನ್‌ ಬೇಕಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಕೇನ್‌ 133 ರನ್‌ಗಳ ಅಜೇಯ ಇನಿಂಗ್ಸ್‌ ಕಟ್ಟಿ ತಂಡದ ಗೆಲುವಿನಲ್ಲಿ ಮಿಂಚಿದರು. ಈ ಮೂಲಕ ಕಿವೀಸ್‌ ತಂಡದ ಭರವಸೆಯ ಬ್ಯಾಟರ್‌ ದೊಡ್ಡ ದಾಖಲೆಯನ್ನು ನಿರ್ಮಿಸಿದರು. ಕೇನ್‌ ತಮ್ಮ 167 ಪಂದ್ಯಗಳ 159 ಇನಿಂಗ್ಸ್‌ಗಳಲ್ಲಿ ಏಳು ಸಾವಿರ ರನ್‌ ಕಲೆ ಹಾಕಿದ ದಾಖಲೆಯನ್ನು ಬರೆದರು. ಈ ಮೂಲಕ ಇವರು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಅಳಿಸಿದ್ದಾರೆ.

ಕೇನ್ ಏಕದಿನ ಪಂದ್ಯದಲ್ಲಿ 7 ಸಾವಿರ ರನ್ ಗಳಿಸಿದ ವಿಶ್ವದ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಆಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 161 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ಎಬಿ ಡಿವಿಲಿಯರ್ಸ್ 166 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಕೇನ್ ವಿಲಿಯಮ್ಸನ್‌ ಅಳಿಸಿ ಹಾಕಿದರು. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 7 ಸಾವಿರ ರನ್‌ಗಳ ಗುರಿಯನ್ನು ಮುಟ್ಟಿದ ಕೀರ್ತಿ ದಕ್ಷಿಣ ಆಪ್ರಿಕಾ ತಂಡದ ಹಾಶೀಮ್ ಆಮ್ಲಾಗೆ ಸಲ್ಲುತ್ತದೆ. ಇವರು 150 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Kane Williamson s Record-Breaking Century Secures New Zealand s Final Spot in Tri-Nation ODI Series

ಪಂದ್ಯದ ಚಿತ್ರಣ

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಟ್ಜಕಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 148 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ಸಹಾಯದಿಂದ 150 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇನ್ನು ವಿಯಾನ್ ಮುಲ್ಡರ್ ಆಫ್ರಿಕಾ ಅರ್ಧಶತಕ ಬಾರಿಸಿದರು. ಗುರಿಯನ್ನು ಹಿಂಬಾಲಿಸಿದ ಕಿವೀಸ್ ತಂಡದ ಪರ ಎರಡನೇ ವಿಕೆಟ್‌ಗೆ ಡ್ವೇನ್‌ ಕಾನ್ವೆ ಹಾಗೂ ಕೇನ್‌ ವಿಲಿಯಮ್ಸನ್‌ 155 ಎಸೆತಗಳಲ್ಲಿ 187 ರನ್‌ಗಳ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಕಾನ್ವೆ 97 ರನ್‌ ಬಾರಿಸಿ ಔಟ್ ಆದರು. ಕೇನ್‌ ಅಜೇಯ 133 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Story first published: Monday, February 10, 2025, 22:24 [IST]
Other articles published on Feb 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+