ಐಪಿಎಲ್ ದ್ವಿತೀಯ ಹಂತದ ಪಂದ್ಯಗಳಿಗೆ ಕನ್ನಡ ಕಾಮೆಂಟೇಟರ್ಸ್ ಪಟ್ಟಿ ಪ್ರಕಟ

ಬೆಂಗಳೂರು: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗೆ ಕನ್ನಡ ಕಾಮೆಂಟರಿ ನೀಡುವ ಕಾಮೆಂಟೇಟರ್‌ಗಳ ಪಟ್ಟಿ ಪ್ರಕಟವಾಗಿದೆ. ಪಟ್ಟಿಯಲ್ಲಿ ಬಹುತೇಕ ಆರಂಭಿಕ ಹಂತದಲ್ಲಿದ್ದ ಕರ್ನಾಟಕದ ಕಾಮೆಂಟೇಟರ್‌ಗಳೇ ಕಾಣಿಸಿಕೊಂಡಿದ್ದಾರೆ.
ಐಪಿಎಲ್‌ನ ಅಧಿಕೃತ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಅಧಿಕೃತವಾಗಿ ಈ ಪಟ್ಟಿ ಪ್ರಕಟಿಸಿಲ್ಲ, ಆದರೆ ಮುಂಬರಲಿರುವ ಐಪಿಎಲ್‌ಗೆ ಕನ್ನಡದ ಕಾಮೆಂಟೇಟರ್‌ಗಳು ಇವರು ಎಂದು ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಈ ಪಟ್ಟಿಯಲ್ಲಿರುವ ಕೆಲ ಹೆಸರುಗಳು ಗೊಂದಲ ಮೂಡಿಸುವಂತಿವೆ.
ಕನ್ನಡಿಗಾಸ್ ಸೆಂಟರ್ ಎಂದು ಹೆಸರಿಸಲಾಗಿರುವ ಟ್ವಿಟರ್ ಖಾತೆಯಲ್ಲಿರುವ ಐಪಿಎಲ್ 2021 ದ್ವಿತೀಯ ಹಂತದ ಪಟ್ಟಿಯಲ್ಲಿ ಆರಂಭಿಕ ಸೀಸನ್‌ನಲ್ಲಿದ್ದವರಲ್ಲಿ ಕಿರಣ್ ಶ್ರೀನಿವಾಸ್ ಹೆಸರಿಲ್ಲ. ಬದಲಿಗೆ ವಿ ಕೃಷ್ಣಮೂರ್ತಿ ಎಂಬ ಹೆಸರಿದೆ. ಇದು ವೇದಾ ಕೃಷ್ಣ ಮೂರ್ತಿ ಇರಬಹುದು ಅಂದುಕೊಳ್ಳಲಾಗಿದೆ.
ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತೀಯ ಹಂತದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಅಕ್ಟೋಬರ್ 15ರ ವರೆಗೆ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ದ್ವಿತೀಯ ಹಂತದಲ್ಲಿ ಒಟ್ಟು 31 ಪಂದ್ಯಗಳು ನಡೆಯುವುದರಲ್ಲಿವೆ.
ಐಪಿಎಲ್ ದ್ವಿತೀಯ ಹಂತಕ್ಕೆ ಕನ್ನಡ ಕಾಮೆಂಟೇಟರ್‌ಗಳ ಪಟ್ಟಿ
ಶ್ರೀನಿವಾಸ್ ಮೂರ್ತಿ (ಮಾಜಿ ಕ್ರಿಕೆಟರ್), ವಿಜಯ್ ಭಾರದ್ವಾಜ್ (ಮಾಜಿ ಕ್ರಿಕೆಟರ್), ಭರತ್ ಚಿಪ್ಲಿ (ಮಾಜಿ ಕ್ರಿಕೆಟರ್), ಜಿಕೆ ಅನಿಲ್ ಕುಮಾರ್, (ಮಾಜಿ ಕ್ರಿಕೆಟರ್), ವೆಂಕಟೇಶ್ ಪ್ರಸಾದ್ (ಮಾಜಿ ಕ್ರಿಕೆಟರ್), ವೇದಾ ಕೃಷ್ಣಮೂರ್ತಿ (ಕ್ರಿಕೆಟರ್), ಸುಮೇಶ್ ಗೋನಿ (ಕಾಮೆಂಟೇಟರ್), ವಿನಯ್ ಕುಮಾರ್ ಆರ್ (ಮಾಜಿ ಕ್ರಿಕೆಟರ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications