Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧರ್ಮಶಾಲಾದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್

ಕರ್ನಾಟಕದ ಸ್ಟಾರ್ ಆಟಗಾರ ದೇವದತ್‌ ಪಡಿಕ್ಕಲ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್‌ ವಿರುದ್ಧ ಐದನೇ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ದೇವದತ್ ಟೆಸ್ಟ್‌ ಕ್ಯಾಪ್‌ ಪಡೆದಿದ್ದಾರೆ. ಈ ಮೂಲಕ ಪಡಿಕ್ಕಲ್‌ ಸ್ಮರಣೀಯ ಇನಿಂಗ್ಸ್‌ ಕಟ್ಟಿದ್ದರು.

ದೇಶೀಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ದೇವದತ್ ಪಡಿಕ್ಕಲ್, ಸೊಗಸಾದ ಪ್ರದರ್ಶನ ನೀಡಿದ ಫಲವಾಗಿ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ಲಭಿಸಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ದೇವದತ್ ರನ್ ಮಹಲ್ ಕಟ್ಟಿದ್ದಾರೆ. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದರು.

Kannadiga Devdutt made his Test cricket debut in Dharamsala

ದೇವದತ್ ಪಡಿಕ್ಕಲ್‌ ಈ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ಸ್ಟಾರ್ ಪ್ಲೇಯರ್‌ ರಣಜಿ ಟೂರ್ನಿಯಲ್ಲಂತೂ ರನ್‌ ಮಹಲ್ ಕಟ್ಟಿದ್ದಾರೆ. ದೇವದತ್‌ ರಣಜಿ ಟೂರ್ನಿಯಲ್ಲಿ ಕರ್ನಾಟಕದ ಪರ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ದೇವದತ್ ಆಡಿದ ಆರು ಇನಿಂಗ್ಸ್‌ಗಳಲ್ಲಿ 556 ರನ್ ಸಿಡಿಸಿದ್ದಾರೆ. ಇದರಲ್ಲಿ 92.66ರ ಸರಾಸರಿಯೊಂದಿಗೆ ಮೂರು ಶತಕ ಸಿಡಿಸಿದ್ದಾರೆ. ಇದರಲ್ಲಿ 64 ಬೌಡರಿ, 12 ಸಿಕ್ಸರ್ ಸೇರಿವೆ.

ಧರ್ಮಶಾಲಾ ಟೆಸ್ಟ್‌ ಪಂದ್ಯದಲ್ಲಿ ಇವರಿಗೆ ಆಡುವ ಅವಕಾಶ ಸಿಗುವುದು ಬಹುತೇಕ ಖಚಿತ ಎಂದೇ ಹೇಳಲಾಗಿತ್ತು. ರಜತ್ ಪಟಿದಾರ್ ಮೇಲೂ ನಾಯಕನ ಒಲು ಇತ್ತು. ಹೀಗಾಗಿ ಇವರಿಗೆ ಅವಕಾಶ ಲಭಿಸುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿದ್ದವು. ಕೊನೆಗೆ ಬುಧವಾರ ಅಭ್ಯಾಸದ ವೇಳೆ ರಜತ್ ಪಟಿದಾರ್ ಗಾಯಕ್ಕೆ ತುತ್ತಾಗಿದ್ದರಿಂದ ದೇವದತ್ ಪಡಿಕ್ಕಲ್‌ಗೆ ಅವಕಾಶ ಲಭಿಸಿತು.

ಕನ್ನಡಿಗ ಕೆಎಲ್ ರಾಹುಲ್‌, ಮಯಾಂಕ್ ಅಗರ್‌ವಾಲ್, ಮನೀಷ್ ಪಾಂಡೆ, ಪ್ರಸಿದ್ಧ ಕೃಷ್ಣ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಕರ್ನಾಟಕದ ಸ್ಟಾರ್ ಆಟಗಾರರಲ್ಲಿ ಇವರೂ ಒಬ್ಬರು.

Story first published: Thursday, March 7, 2024, 9:41 [IST]
Other articles published on Mar 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+