ಯುಎಸ್‌ಎ ಕ್ರಿಕೆಟ್ ಟೀಮ್‌ನ ಮುಖ್ಯ ಕೋಚ್ ಆಗಿ ಕನ್ನಡಿಗ ನೇಮಕ

ದೇಸಿ ಕ್ರಿಕೆಟ್‌ನ ಕೋಚಿಂಗ್ ವಿಭಾಗದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ ಕನ್ನಡಿಗನೋರ್ವ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶವನ್ನು ಗಳಿಸಿದ್ದಾರೆ. ಕರ್ನಾಟಕ ಕ್ರಿಕೆಟಿಗನಾಗಿ ಮಾತ್ರವಲ್ಲ ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಇವರು ಯುಎಸ್‌ಎ ಕ್ರಿಕೆಟ್ ಟೀಮ್ ಗೆ ಮುಖ್ಯ ಕೋಚ್ ಆಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಯುಎಸ್‌ಎ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಕನ್ನಡಿಗ ಜೆ.ಅರುಣ್ ಕುಮಾರ್. ಕರ್ನಾಟಕ ತಂಡದ ಆಟಗಾರನಾಗಿದ್ದ ಅರುಣ್ ಕುಮಾರ್ ಕರ್ನಾಟಕ ತಂಡಕ್ಕೆ ಕೋಚ್ ಆಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಈಗ ಹೊಸಾ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ.
ಅರುಣ್ ಕುಮಾರ್ ಅವರನ್ನು ಅಧಿಕೃತವಾಗಿ ಕೋಚ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಇವತ್ತು ಘೋಷಿಸಲಾಗಿದೆ. ಮುಂದೆ ಓದಿ

ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ಯುಎಸ್‌ಎ
ಕ್ರಿಕೆಟ್ ಲೋಕದಲ್ಲಿ ಯುಎಸ್‌ಎ ಇನ್ನೂ ಅಂಬೆಗಾಲಿಡುತ್ತಲೇ ಇದೆ. ಕ್ರಿಕೆಟ್ ಜನಪ್ರಿಯವಲ್ಲದ ದೇಶವಾದ ಕಾರಣ ಈ ಕ್ರೀಡೆಯಲ್ಲಿ ಸಾಧನೆ ಮಾಡಲು ಯುಎಸ್‌ಎಯಂತಾ ರಾಷ್ಟ್ರಕ್ಕೂ ಸಾಧ್ಯವಾಗಲಿಲ್ಲ. ಈ ಮಧ್ಯೆ ಕನ್ನಡಿಗ ಕೋಚ್ ಅರುಣ್ ಕುಮಾರ್‌ಗೆ ದೊಡ್ಡ ಜವಾಬ್ಧಾರಿ ಸಿಕ್ಕಿದೆ.

ದೇಸಿ ಕ್ರಿಕೆಟ್‌ನಲ್ಲಿ ಅನುಭವಿ ಕೋಚ್ ಅರುಣ್ ಕುಮಾರ್
ಆಟಗಾರನಾಗಿ ಅರುಣ್ ಕುಮಾರ್ ಖ್ಯಾತಿಗಳಿಸುವುದಕ್ಕಿಂತ ಹೆಚ್ಚಾಗಿ ಕೋಚ್ ಆಗಿ ಹೆಸರು ಗಳಿಸಿದ್ದಾರೆ ಮಾಡಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆಗಳನ್ನು ಕೋಚ್ ಆಗಿ ಅರುಣ್ ಕುಮಾರ್ ಮಾಡಿದ್ದಾರೆ. ಕರ್ನಾಟಕ ತಂಡದ ಯಶಸ್ಸಿನಲ್ಲಿ ಕೋಚ್ ಆಗಿದ್ದ ಅರುಣ್ ಕುಮಾರ್ ಪಾತ್ರವೂ ಸಾಕಷ್ಟು ಪ್ರಮಾಣದಲ್ಲಿದೆ ಎಂಬುದು ಮರೆಯುವಂತಿಲ್ಲ.

ಕರ್ನಾಟಕ ತಂಡದ ಸಾಧನೆ ಹಿಂದೆ ಅರುಣ್ ಕುಮಾರ್
ಅರುಣ್ ಕುಮಾರ್ ಕರ್ನಾಟಕ ತಂಡಕ್ಕೆ ಕೋಚ್ ಆಗಿದ್ದ ಸಂದರ್ಭದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ದೇಸಿ ಕ್ರಿಕೆಟ್‌ನಲ್ಲಿ ಸಾಲು ಸಾಲು ಟೂರ್ನಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2013-14 ಮತ್ತು2014-15ನೇ ಸಾಲಿನ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ ಮತ್ತು ಇರಾನಿ ಟ್ರೋಫಿ ಮೂರೂ ಪ್ರಮುಖ ಟ್ರೋಫಿಗಳನ್ನು ಕರ್ನಾಟಕ ಮುಡಿಗೇರಿಸಿಕೊಂಡಿತ್ತು.

ಐಪಿಎಲ್‌ನಲ್ಲೂ ಕೋಚ್ ಆಗಿ ಅನುಭವ
ಜ್ಯಾಕ್ ಎಂದೇ ಖ್ಯಾತರಾಗಿರವ ಜೆ ಅರುಣ್ ಕುಮಾರ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರೆ ಹೈದರಾಬಾದ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ದವರು. ಕಳೆದ ದೇಸಿ ಕ್ರಿಕೆಟ್ ಋತುವಿನಲ್ಲಿ ಅರುಣ್ ಕುಮಾರ್ ಪುದುಚೇರಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದರು.

ಯುಎಸ್‌ಎ ಕ್ರಿಕೆಟ್‌ನಿಂದ ಆಫರ್
ಪುದುಚೇರಿ ಕೋಚ್ ಆಗಿದ್ದ ವೇಳೆ ಅಲ್ಲಿನ ಅಧಿಕಾರಿಗಳೊಂದಿಗೆ ಅಸಮಾಧಾನದ ಕಾರಣಕ್ಕೆ ಅಲ್ಲಿಂದ ಅರುಣ್ ಹೊರಬಂದರು. ಈ ಸಂದರ್ಭದಲ್ಲಿ ಯುಎಸ್‌ಎ ಕ್ರಿಕೆಟ್ ಕಡೆಯಿಂದ ಅರುಣ್ ಕುಮಾರ್‌ಗೆ ಆಫರ್ ಬಂದ ಕಾರಣ ಅದನ್ನು ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅರುಣ್ ಕುಮಾರ್ ಯುಎಸ್‌ಎಗೆ ತೆರಳಿದ್ದರು. ಅರುಣ್ ಕುಮಾರ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿರುವುದನ್ನು ಇಂದು ಯುಎಸ್‌ಎ ಕ್ರಿಕೆಟ್ ಸಂಸ್ಥೆ ಖಚಿತಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications