Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA Test: ದಕ್ಷಿಣ ಆಫ್ರಿಕಾದಲ್ಲಿ ಭಾರತದ ಮಾನವನ್ನು ಕಾಪಾಡಿದ ಕನ್ನಡಿಗ ರಾಹುಲ್

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ ಪಂದ್ಯ ಸೆಂಚೂರಿಯನ್‌ನಲ್ಲಿ ನಡೆಯುತ್ತಿದೆ. ಭಾರತದ ಎಲ್ಲ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್ ನಡೆಸಿದರೆ, ವಿದೇಶದಲ್ಲಿ ಟೀಮ್ ಇಂಡಿಯಾದ ಮಾನವನ್ನು ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಕಾಪಾಡಿದ್ದು ವಿಶೇಷವಾಗಿತ್ತು.

ಮೊದಲ ಟೆಸ್ಟ್‌ನಲ್ಲಿ ಟಾಸ್‌ ಸೋತರೂ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಆರಂಭಿಕ ಯಶಸ್ವಿ ಜೈಸ್ವಾಲ್‌ 17, ರೋಹಿತ್ ಶರ್ಮಾ 5, ಶುಭ್‌ಮನ್‌ ಗಿಲ್‌ 2 ರನ್ ಕಲೆ ಹಾಕಲಿಲ್ಲ.

Kannadiga Rahul Rescues Indias Humanity in South Africa

ನಾಲ್ಕನೇ ವಿಕೆಟ್‌ಗೆ ವಿರಾಟ್ ಕೊಹ್ಲಿ(38), ಶ್ರೇಯಸ್ ಅಯ್ಯರ್ (31) ಉತ್ತಮ ಜೊತೆಯಾಟ ಮೂಡಿ ಬಂದಿತು. ಈ ಜೋಡಿ 95 ಎಸೆತಗಳಲ್ಲಿ 68 ರನ್ ಸೇರಿಸಿ ತಂಡಕ್ಕೆ ಕೊಂಚ ಆಧಾರವಾದರು.

ಇದಾದ ಬಳಿಕ ಟೀಮ್ ಇಂಡಿಯಾ ಬ್ಯಾಟರ್‌ಗಳು ನೆಲಕಚ್ಚಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆದರೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ಕೆ.ಎಲ್ ರಾಹುಲ್‌ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತುಕೊಂಡರು.

Kannadiga Rahul Rescues Indias Humanity in South Africa

7ನೇ ವಿಕೆಟ್‌ಗೆ ಕೆ.ಎಲ್ ರಾಹುಲ್ ಹಾಗೂ ಶಾರ್ದೂಲ್ ಠಾಕೂರ್‌ ಜೊತೆಗೂಡಿ 43 ರನ್ ಸೇರಿಸಿತು.

ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಗ್ಗವಾಗಿ ಔಟಾದ ನಂತರ ಮರಳಿದರು. 107 ರನ್‌ಗಳಾಗುವಷ್ಟರಲ್ಲಿ ಅರ್ಧದಷ್ಟು ಭಾರತ ತಂಡ ಪೆವಿಲಿಯನ್‌ಗೆ ಮರಳಿತ್ತು. ಭಾರತದ ಬ್ಯಾಟಿಂಗ್ ಕ್ರಮಾಂಕವು ವೇಗದ ಬೌಲರ್‌ಗಳ ಮುಂದೆ ಹೀನಾಯವಾಗಿ ತತ್ತರಿಸಿತು. ಎಲ್ಲ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಶರಣಾದಾಗ ಒಬ್ಬ ಅನುಭವಿ ಆಟಗಾರ ಉತ್ತಮ ಇನ್ನಿಂಗ್ಸ್ ಕಟ್ಟಲಿಲ್ಲ. ಏಕಾಂಗಿಯಾಗಿ ಭಾರತವನ್ನು 200 ರನ್‌ಗಳ ಗಡಿ ದಾಟಿಸಿದ ಕೀರ್ತಿ ಭಾರತದ ಕೆ.ಎಲ್ ರಾಹುಲ್‌ಗೆ ಸಲ್ಲುತ್ತದೆ.

ದಕ್ಷಿಣ ಆಫ್ರಿಕಾದ ಬೌಲಿಂಗ್ ಎದುರು ಭಾರತ ತಂಡ ಬ್ಯಾಟರ್‌ಗಳು ಚಳಿ ಬಿಟ್ಟು ಬ್ಯಾಟ್ ಮಾಡಲಿಲ್ಲ. ಕೆಎಲ್ ರಾಹುಲ್ ಮಾತ್ರ ಒಂದು ತುದಿಯಲ್ಲಿ ಏಕಾಂಗಿಯಾಗಿ ನಿಂತು ಭಾರತದ ಪರ ಬಲಿಷ್ಠ ಬ್ಯಾಟಿಂಗ್ ಮಾಡಿದರು. ಈ ಆಟಗಾರ ತನ್ನ ಅದ್ಭುತ ಬ್ಯಾಟಿಂಗ್‌ನಿಂದ ಟೀಮ್ ಇಂಡಿಯಾವನ್ನು 200 ರನ್‌ಗಳ ಗಡಿ ದಾಟಿಸಿದರು. ಮೊದಲ ದಿನ ಭಾರತದ ಪರ ಕೇವಲ ಒಂದು ಅರ್ಧಶತಕ ದಾಖಲಾಗಿದ್ದು ಅದು ಕೆಎಲ್ ರಾಹುಲ್ ಬ್ಯಾಟ್‌ನಿಂದ ಬಂದಿತ್ತು. ಈ ಬ್ಯಾಟ್ಸ್‌ಮನ್ 80 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರೈಸಿದರು.

Kannadiga Rahul Rescues Indias Humanity in South Africa

ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಕನ್ನಡಿಗ ಪಂದ್ಯದುದ್ದಕ್ಕೂ ಆಕರ್ಷಿಸಿದರು. ತಮ್ಮ ನೈಜ ಆಟದ ಪ್ರದರ್ಶನ ನೀಡಿದ ರಾಹುಲ್ ತಮ್ಮ ಗುರುವಿನ ಹಾದಿಯಲ್ಲಿ ನಡೆಯುವ ಸೂಚನೆ ನೀಡಿದರು. ಸದ್ಯ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್‌ ಸಹ ಹೀಗೆ ತಂಡ ಆಪಾಯದಲ್ಲಿದ್ದಾಗ ನಿಂತು ಏಕಾಂಗಿಯಾಗಿ ಇನ್ನಿಂಗ್ಸ್ ಕಟ್ಟಿ ಆಧಾರವಾಗುತ್ತಿದ್ದರು.

Story first published: Tuesday, December 26, 2023, 22:48 [IST]
Other articles published on Dec 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+