ಯೋಗರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ: ಮೌನ ಮುರಿದ ಕಪಿಲ್ ದೇವ್
ಟೀಮ್ ಇಂಡಿಯಾದ ಮಾಜಿ ಆಟಗಾರ ಯೋಗರಾಜ್ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ತುಟಿ ಬಿಚ್ಚಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಅಸಮಾಧಾನವಿಲ್ಲ. ಆದರೂ ಜನರ ಮನಸ್ಸಿನಲ್ಲಿರುವ ಕಹಿ ಮನೋಭಾವವನ್ನು ತಪ್ಪಿಸಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.
ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹಾಗೂ ಯೋಗರಾಜ್ ಸಿಂಗ್ ಕ್ರಿಕೆಟ್ ಬದುಕನ್ನು ಬಹುತೇಕ ಏಕಕಾಲದಲ್ಲಿ ಪ್ರಾರಂಭಿಸಿದರು. ಇಬ್ಬರೂ ಕೋಚ್ ದೇಶ್ ಪ್ರೇಮ್ ಆಜಾದ್ ಅವರ ಅಡಿಯಲ್ಲಿ ತರಬೇತಿ ಪಡೆದು, ದೇಶವನ್ನು ಪ್ರತಿನಿಧಿಸಿದ ಆಟಗಾರರು. ಕಪಿಲ್ ದೇವ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ 1983ರಲ್ಲಿ ವಿಶ್ವಕಪ್ ಗೆದ್ದು ಸಾಧನೆ ಮಾಡಿತ್ತು. ಆದರೆ ಯೋಗರಾಜ್ ಸಿಂಗ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಹೆಚ್ಚು ಕಾಲ ಉಳಿಯಲಿಲ್ಲ.

ಯೋಗರಾಜ್ ಸಿಂಗ್ ಹಲವಾರು ಸಂದರ್ಶನಗಳಲ್ಲಿ ಕಪಿಲ್ ದೇವ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ವೇಳೆ ನಾಯಕನಾದ ಬಳಿಕ ಕಪಿಲ್ ಯಾವುದೇ ಕಾರಣಗಳಿಲ್ಲದೆ ತಮ್ಮನ್ನು ತಂಡದಿಂದ ಕೈ ಬಿಟ್ಟರು. ಸಿಟ್ಟಿನಲ್ಲಿ ಯೋಗರಾಜ್ ಪಿಸ್ತೂಲ್ ಹಿಡಿದು ಕಪಿಲ್ ದೇವ್ ಅವರ ಮನೆಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಒಂದು ಸಂದರ್ಶನದಲ್ಲಿ ಯುವರಾಜ್ ಸಿಂಗ್ ಈ ಬಗ್ಗೆ ಕಪಿಲ್ ದೇವ್ ಅವರಲ್ಲಿ ಕ್ಷಮೆಯನ್ನು ಸಹ ಕೇಳಿದ್ದರು.
ನಾನು ಎಂದಿಗೂ ಅವರ ಸ್ನೇಹಿತನೇ
ಇತ್ತೀಚೆಗೆ ಸ್ಪೋರ್ಟ್ಸ್ ತಕ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಕಪಿಲ್ ದೇವ್, ಈ ವಿವಾದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹಾಗೆ ಮಾಡುವ ಅಗತ್ಯ ಇರಲಿಲ್ಲ. ಇಂತಹ ವಿಷಯಗಳು ನಡೆಯುತ್ತಲೇ ಇರುತ್ತವೆ. ಅವರು ಸಹ ದೇಶಕ್ಕಾಗಿ ಕ್ರಿಕೆಟ್ ಆಡಿದರು. ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇದೇ ಕಾರಣಕ್ಕಾಗಿಯೇ ಜನರು ಈಗಲೂ ಅವರನ್ನು ಇಷ್ಟ ಪಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸ್ನೇಹಿತರಾಗಿ ಬಂದು ನಮ್ಮನ್ನು ಭೇಟಿಯಾದರೆ ಅಪ್ಪಿಕೊಳ್ಳುತ್ತೇನೆ ಎಂದು ಯೋಗರಾಜ್ ಸಿಂಗ್ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, ನಾನು ಇನ್ನು ಅವರ ಸ್ನೇಹಿತನೇ. ಆದರೆ ಮನಸ್ಸಿನಲ್ಲಿ ಕಹಿ ಇರುವ ಜನರನ್ನು ಭೇಟಿಯಾಗುವ ಇಷ್ಟ ಇಲ್ಲ. ಜೀವನದಲ್ಲಿ ಖುಷಿಯಾಗಿರುವ ಜನರನ್ನು ನಾನು ಇಷ್ಟ ಪಡುತ್ತೇನೆ. ಜೀವನ ಸಾಗಿದಂತೆ ಸಾಗಬೇಕು ಎಂಬ ಅರ್ಥದಲ್ಲಿ ಕಪಿಲ್ ತಿಳಿಸಿದ್ದಾರೆ.
ಕಪಿಲ್ ದೇವ್ ಜೀವನದಲ್ಲಿ ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ ಎಂದು ಹೇಳಿದರು. ಕೆಲವೊಮ್ಮೆ ಯಶಸ್ಸು ನಿಮಗೆ ಬರುತ್ತದೆ, ಕೆಲವೊಮ್ಮೆ ನಿಮ್ಮ ಕುಟುಂಬಕ್ಕೆ ಬರುತ್ತದೆ ಎಂದಿದ್ದಾರೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಸಂತೋಷವಾಗಿರುವುದು ಮತ್ತು ಕಹಿಯನ್ನು ಸಹಿಸಿಕೊಳ್ಳದಿರುವುದು ಮುಖ್ಯ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications